ಪಾಕಿಸ್ತಾನದಲ್ಲೂ 'ಬಿಜೆಪಿ' ಅಸ್ತಿತ್ವ ಪಡೆಯಲಿದೆಯಾ?

bjp-bahawalpur-janobi-punjab-to-exist-in-pak
ಇಸ್ಲಾಮಾಬಾದ್, ಜ.28: ಸದ್ಯದಲ್ಲೇ ಪಾಕಿಸ್ತಾನದಲ್ಲೂ 'ಬಿಜೆಪಿ' ಅಸ್ತಿತ್ವಕ್ಕೆ ಬರಲಿದೆ! ಆದರೆ ಇದು ಭಾರತದಲ್ಲಿರುವ ರಾಜಕೀಯ ಪಕ್ಷವಾದ ಬಿಜೆಪಿಯದ್ದಲ್ಲ. ಬದಲಿಗೆ ಪಾಕಿಸ್ತಾನದಲ್ಲಿ ಈಗಿರುವ ಪಂಜಾಬ್ ಪ್ರಾಂತ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಪ್ರಾಂತ್ಯವೊಂದರ ಹೆಸರು.

ಹೌದು 'ಬಹವಾಲ್ಪುರ ಜನೋಬಿ ಪಂಜಾಬ್' ಹೆಸರಿನಲ್ಲಿ ಅಂದರೆ ಬಿಜೆಪಿ ರೂಪದಲ್ಲಿ ಈ ಹೊಸ ಪ್ರದೇಶ ಕಾಣಿಸಿಕೊಳ್ಳಲಿದೆ. ಪ್ರಸ್ತಾವಿತ 'ಬಹವಾಲ್ಪುರ ಜನೋಬಿ ಪಂಜಾಬ್' ಪ್ರದೇಶವನ್ನು ಇಂಗ್ಲಿಷ್ ಭಾಷೆಗೆ ರೂಪಾಂತರಿಸದಾಗಲೂ ಅದು ಭಾರತದ ಮತ್ತೊಂದು ರಾಜಕೀಯ ಪಕ್ಷದ ಹೆಸರಿನಲ್ಲಿ ಕಾಣಿಸಿಕೊಳ್ಳಲಿದೆ. ಅಂದರೆ BSP ಅಥವಾ 'ಬಹವಾಲ್ಪುರ ಸೌತ್ ಪಂಜಾಬ್'!

ಈ ಪ್ರಸ್ತಾವನೆಯನ್ನು ಅಂಗೀಕರಿಸುವುದರ ಸಂಬಂಧ ಮೊನ್ನೆ ಶನಿವಾರ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಈಗಿರುವ ಪಂಜಾಬಿನ ಮೂರನೆಯ ಒಂದು ಭಾಗದಷ್ಟು ಈ ಹೊಸ BJPಯಲ್ಲಿ ಮಿಳಿತವಾಗಲಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲೂ ಇಷ್ಟೇ ಸ್ಥಾನವನ್ನು ದಕ್ಕಿಸಿಕೊಳ್ಳಲಿದೆ.

ಅಂದಹಾಗೆ ರಾಜಕೀಯ ನೆಲೆಗಟ್ಟಿನಲ್ಲಿ ಈ ವಿಭಜನೆ ಕೈಗೊಳ್ಳಲಾಗಿದೆ. ಆಡಳಿತಾರೂಢ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಚಿತಾವಣೆ ಮೇರೆಗೆ ಈ ಪ್ರಕ್ರಿಯೆ ನಡೆದಿದೆ. ಗಮನಾರ್ಹವೆಂದರೆ, ಇದು ಪಂಜಾಬ್ ಜನತೆಯ ಬಹುದಿನಗಳ ಬೇಡಿಕೆಯೂ ಆಗಿದೆ. ಪಾಕಿಸ್ತಾನದ ಅತಿ ವಿಶಾಲ ಮತ್ತು ಅತಿ ಹೆಚ್ಚು ಜನ ಸಾಂದ್ರತೆಯ ಪ್ರಾಂತ್ಯ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+