1.8 ಕೋಟಿ ರೂ ಆಡಿ ಕಾರು ಕ್ಷಣಾರ್ಧದಲ್ಲಿ ಸುಟ್ಟು ಕರಕಲು

ಮುಂಬೈ, ಜ.28: ಬರೋಬ್ಬರಿ 1.8 ಕೋಟಿ ರೂಪಾಯಿ ಮೌಲ್ಯದ ಪ್ರೀಮಿಯಂ ಆಡಿ ರೇಸ್ ಕಾರೊಂದು ಸಮುದ್ರದ ಮೇಲಿನ ರಸ್ತೆ ಮೇಲೆ ಕ್ಷಣಾರ್ಧದಲ್ಲಿ ಸುಟ್ಟುಕರಕಲಾಗಿದೆ. ವಾಹನ ದಟ್ಟಣೆ ಕಡಿಮೆಯಿದ್ದಾಗ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ರಾಜೀವ್ ಗಾಂಧಿ ಬಾಂದ್ರ- ವೊರ್ಲಿ ಸಮುದ್ರ ರಸ್ತೆಯಲ್ಲಿ ವಾಹನಗಳು ಆಗಾಗ ಅಗ್ನಿಗೆ ಆಹುತಿಯಾಗುವುದು ಸಾಮಾನ್ಯವಾಗಿದೆ. ಹಾಲಿ ಪ್ರಕರಣದಲ್ಲಿ, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯಿಸಲಾಗಿದ್ದ Audi R8 ರೇಸ್ ಕಾರ್ ಭಸ್ಮವಾಗಿದೆ. ಬೆಂಕಿ ಅವಘಡಕ್ಕ ಕಾರಣವೇನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.

mumbai-rs-1-point-80-cr-audi-r8-race-car-burnt

ಈ ಕಾರಿನ ವಿಶೇಷವೆಂದರೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಬಾಲಿವುಡ್ ಸಿನಿಮಾ Race 2ನಲ್ಲಿ ಇದನ್ನು ಬಳಸಲಾಗಿತ್ತು. ಅಗ್ನಿ ಆಕಸ್ಮಿಕದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಸುಮಾರು 2 ಗಂಟೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಪ್ರೀಮಿಯಂ ಆಡಿ ರೇಸ್ ಕಾರಿಗೆ ಖರೀದಿದಾರರು ವಿಶೇಷ ಜೋಡಣೆ ಮಾಡಿರುವುದರಿಂದ ಅಗ್ನಿ ಕಾಣಿಸಿಕೊಂಡಿರಬಹುದು. ಆದರೆ ತಾಂತ್ರಿಕ ತನಿಖೆಯ ಬಳಿಕವಷ್ಟೇ ಖಚಿತ ಕಾರಣ ತಿಳಿದುಬರಲಿದೆ ಎಂದು Audi India ಮುಖ್ಯಸ್ಥ ಮಿಖೇಲ್ ಪಾರ್ಷ್ಕ್ ತಿಳಿಸಿದ್ದಾರೆ. ಅಂದಹಾಗೆ, ಮುಂಬೈನಲ್ಲಿ 2 ದಿನಗಳಿಂದ Mumbai Parx Supercar Show-2013 ನಡೆದಿತ್ತು. ಆದರೆ ಈ ಪ್ರದರ್ಶನಲ್ಲಿ ಸದರಿ ಆಡಿ ಕಾರು ಸಹ ಭಾಗವಹಿಸಿತ್ತಾ ಎಂಬುದು ತಿಳಿದುಬಂದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+