'ಯಡಿಯೂರಪ್ಪ ವಿರುದ್ಧ ಜನ ದಂಗೆಯೇಳುವುದು ಖಚಿತ'

ಯಡಿಯೂರಪ್ಪ ಕೀಳುಮಟ್ಟದ ಭಾಷೆ ಬಳಸುತ್ತ ರಾಜ್ಯ ಸರಕಾರವನ್ನು ಬೀಳಿಸಲು ಶತಾಯ ಗತಾಯ ಪ್ರಯತ್ನ ಮಾಡುತ್ತಿರುವುದು ಮುಂದುವರಿದರೆ ಉತ್ತರ ಕರ್ನಾಟಕದ ಜನತೆ ಅವರ ವಿರುದ್ಧ ದಂಗೆ ಏಳುವ ದಿನಗಳು ದೂರವಿಲ್ಲ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರೂ ಆದ ಕಳಕಪ್ಪ ಬಂಡಿ ಹೇಳಿದ್ದಾರೆ.
ಗಣರಾಜ್ಯೋತ್ಸವದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಕೈ ಜೋಡಿಸಿದವರಿಗೆ ಜನತೆಯೇ ತಕ್ಕಪಾಠ ಕಲಿಸಲಿದ್ದಾರೆ. ವೀರಶೈವರಿಗೆ ಅನ್ಯಾಯವಾಗುತ್ತಿದೆ ಎಂದು ವೀರಶೈವ ಸಮಾಜದ ಹೆಸರು ಬಳಸುತ್ತ ಬಂದಿದ್ದ ಯಡಿಯೂರಪ್ಪ ಈಗ ಮಾಡುತ್ತಿರುವುದೇನು ಎಂದು ಅವರು ಪ್ರಶ್ನಿಸಿದರು.
ಈಗ ಮುಖ್ಯಮಂತ್ರಿಯಾಗಿರುವ ಜಗದೀಶ ಶೆಟ್ಟರ ಅವರು ವೀರಶೈವ ಸಮುದಾಯವದವರೆಂಬುದನ್ನು ಮರೆಮಾಚಿ ಶೆಟ್ಟರ ಅವರನ್ನು ಪದಚ್ಯುತಗೊಳಿಸಲು ಮುಂದಾಗಿರುವ ಯಡಿಯೂರಪ್ಪ ಅವರಿಗೆ ಜನತೆ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಕಳಕಪ್ಪ ಬಂಡಿ ಖಾರವಾಗಿ ಹೇಳಿದರು.
ಉದಾಸಿ ಪುತ್ರ, ಸಂಸದ ಶಿವಕುಮಾರ ಮೊದಲು ರಾಜೀನಾಮೆ ನೀಡಲಿ:
ಇದುವರೆಗೆ ಸರಕಾರದಲ್ಲಿ ಲೋಕೊಪಯೋಗಿ ಸಚಿವರಾಗಿದ್ದುಕೊಂಡು ಅಧಿಕಾರ ಅನುಭವಿಸಿದ ಸಿಎಂ ಉದಾಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ನಿಷ್ಠೆ ಪ್ರದರ್ಶಿಸಿದ್ದು ವಿಪರ್ಯಾಸವೇ ಸರಿ. ಅವರು ತಮ್ಮ ಪುತ್ರ, ಸಂಸದ ಶಿವಕುಮಾರ ಅವರಿಂದ ಮೊದಲು ರಾಜೀನಾಮೆ ಕೊಡಿಸಲಿ ಎಂದೂ ಬಂಡಿ ಆಗ್ರಹಿಸಿದರು.












Click it and Unblock the Notifications