ಮಹಾ ಕುಂಭಮೇಳದಲ್ಲಿ ಜನ ಜೀವನ ಲೆನ್ಸ್ ನೋಟ

ಮಹಾ ಕುಂಭ ಮೇಳಕ್ಕೆ ಬರುವ ಭಕ್ತಾದಿಗಳಲ್ಲಿ ಅನೇಕರಿಗೆ ಸಂಗಮದಲ್ಲಿ ಮುಳುಗು ಹಾಕುವುದು ಪ್ರಮುಖ ಆದ್ಯತೆ. ಇದರ ಜೊತೆಗೆ ಗಂಗಾ ನದಿ ತಟದ ನಗರಿಯಲ್ಲಿ ಸುತ್ತಾಡುತ್ತಾ ವ್ಯಾಪಾರ ವಹಿವಾಟು ನಡೆಸುವುದು ಖರೀದಿ ಮಾಡುವುದು ಜೋರಾಗಿ ನಡೆಯುತ್ತದೆ.

ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಸೋಮವಾರ (ಜ.14)ರಂದು 2013ನೇ ಸಾಲಿನ ಮಹಾಕುಂಭಮೇಳಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಮೊದಲ ದಿನವೇ 82 ಲಕ್ಷ ಭಕ್ತಾದಿಗಳು ಪವಿತ್ರ ಮುಳುಗು ಹಾಕಿದರು ಎಂದು ಅಧಿಕೃತ ವೆಬ್ ತಾಣ ಹೇಳಿದೆ.

ಗಂಗಾ ನದಿಗೆ ತ್ಯಾಜ್ಯ ಸೇರ್ಪಡೆಗೊಳ್ಳದಂತೆ ತಡೆಗಟ್ಟಲು ದೊಡ್ಡ ಪಡೆಯೇ ಸಿದ್ಧವಾಗಿದ್ದು, ಪವಿತ್ರ ನದಿಯ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ವಿಶೇಷವಾಗಿ ಭದ್ರತೆ ಒದಗಿಸಲಾಗಿದ್ದು, ಕಳೆದ ಮೂರು ದಿನಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ಇನ್ನಷ್ಟು ಚಿತ್ರಗಳು ತಪ್ಪದೇ ನೋಡಿ

ಉಳಿದಂತೆ, ಮೇಳದಲ್ಲಿ ಕಳೆದು ಹೋದವರನ್ನು ಒಂದು ಮಾಡುವ ಬೃಹತ್ ಕಾರ್ಯ ಪ್ರತಿನಿತ್ಯ ಜಾರಿಯಲ್ಲಿರುತ್ತದೆ. ಅನೇಕ ಕಡೆ ಮೈಕ್ ಹಿಡಿದು ಕೊಂಡು ವಿವಿಧ ಭಾಷೆಗಳಲ್ಲಿ ಕಳೆದು ಹೋದವರ ವಿವರಗಳನ್ನು ಕೂಗುವ ದೃಶ್ಯ ಸಾಮಾನ್ಯವಾಗಿದೆ.

ನಟಿ ಉದ್ಯಮಿ ಜಿ.ಪಿ ಹಿಂದೂಜಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಅವರು ಮಹಾ ಕುಂಭ ಮೇಳದಲ್ಲಿ ಹೋಮ ಹವನ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು. ಈಗ ಪೂನಂ ಪಾಂಡೆ ಮುಳುಗೆದ್ದಿದ್ದಾರೆ. ಚಿತ್ರದ ಯಶಸ್ಸಿಗಾಗಿ ಪ್ರಾರ್ಥಿಸಿದ್ದಾರೆ. ಇನ್ನೂ ಅನೇಕ ಗಣ್ಯರು, ಸಿನಿ ತಾರೆಗಳು ವಿಶೇಷ ಪ್ರಾರ್ಥನೆ ಸಲ್ಲಿಸಲು ಸಂಗಮದತ್ತ ಸುಳಿಯುವ ಸಾಧ್ಯತೆಯಿದೆ.

ಮಹಾ ಕುಂಭ ಮೇಳಕ್ಕಾಗಿಯೇ ಉತ್ತರಪ್ರದೇಶ ಸರ್ಕಾರ ಹೊರ ತಂದಿರುವ ವೆಬ್ ತಾಣದಲ್ಲಿ ಆನ್ ಲೈನ್ ದೂರು ನೀಡುವ ಸೌಲಭ್ಯ ಇದೆ. ಕೆಮೆರಾ ಕಣ್ಣಿಗೆ ಸಿಕ್ಕ ಕುಂಭಮೇಳದಲ್ಲಿ ಜನ ಜೀವನ ದೃಶಗಳನ್ನು ಅಲಹಾಬಾದಿನಿಂದ ಕಳುಹಿಸಿ ಕೊಟ್ಟವರು ನಿಖಿಲ್ ಪಹ್ವ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮ ಸ್ಥಳ ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರವಾಗುತ್ತದೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ನದಿ ತಟದಲ್ಲಿ ಸುಮಾರು 150 ಕಿ.ಮೀ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಪ್ಲೇಟುಗಳನ್ನು ಬಳಸಲಾಗಿದೆ. 18ಕ್ಕೂ ಅಧಿಕ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡಿದೆ,

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಪವಿತ್ರ ಗಂಗೆ ಹೂಗಳ ಪುಷ್ಕರಣಿಯಂತಾಗಿದ್ದು, ಸ್ವಚ್ಛತಾ ಕಾರ್ಯದಲ್ಲಿ ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ತೊಡಗಿಕೊಂಡಿದ್ದಾರೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ತಾತ್ಕಾಲಿಕ ವಸತಿ ವ್ಯವಸ್ಥೆ, ಕೊರೆಯುವ ಚಳಿ ಇದ್ದರೂ ಜಗ್ಗದೆ ಕುಂಭಮೇಳದಲ್ಲಿ ನೆಲೆಸಿದ ಜನ ಸಾಗರ..ಸುಮಾರು 20 ನುರಿತ ವೈದ್ಯರು, 120 ಆಂಬ್ಯುಲೆನ್ಸ್ 24 X 7 ಕಾಲ ಕಾರ್ಯ ನಿರ್ವಹಿಸಲಿದೆ. 100 ಬೆಡ್ ಗಳ ಆಸ್ಪತ್ರೆಯನ್ನು ಮೇಳದ ಸಮೀಪದಲ್ಲೇ ಸ್ಥಾಪಿಸಲಾಗಿದೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಎತ್ತ ನೋಡಿದರೂ ಜನವೋ ಜನ..4 ಗೋದಾಮುಗಳು, 125 ದಿನಸಿ ಪಡಿತರ ವಿತರಣೆ ಕೇಂದ್ರಗಳು ಮೇಳದ ಪ್ರಮುಖ ಸ್ಥಳಗಳಲ್ಲಿ ತಲೆ ಎತ್ತಿದೆ. ಕೊರೆಯುವ ಚಳಿಯಲ್ಲಿ ಬೆಂಕಿ ಕಾಯಿಸುವುದು ದೈನಂದಿನ ಅಭ್ಯಾಸವಾಗಿದೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಗಂಗಾ ತಟದ ಸುಂದರ ನಗರಿ ಅಲಹಾಬಾದ್ ರಾತ್ರಿ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕಾಣಿಸಿದ್ದು ಹೀಗೆ..

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ನದಿ ತಟದಲ್ಲಿ ಸುಮಾರು 150 ಕಿ.ಮೀ ತಾತ್ಕಾಲಿಕ ರಸ್ತೆಗಳನ್ನು ನಿರ್ಮಿಸಲಾಗಿದೆ. ಉಕ್ಕಿನ ಪ್ಲೇಟುಗಳನ್ನು ಬಳಸಲಾಗಿದೆ. 18ಕ್ಕೂ ಅಧಿಕ ತಾತ್ಕಾಲಿಕ ಸೇತುವೆ ನಿರ್ಮಾಣಗೊಂಡಿದೆ,

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಭಕ್ತರ ನಿರೀಕ್ಷೆಯಲ್ಲಿ ಕುಳಿತವರು ಕಂಡಿದ್ದು ಹೀಗೆ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಸುಮಾರು 570 ಕಿ.ಮೀ ದೂರದ ನೀರಿನ ಪೈಪ್ ಲೈನ್, 800 ಕಿ.ಮೀ ದೂರದ ಎಲೆಕ್ಟ್ರಿಕ್ ವೈರುಗಳು ಹಾಗೂ 50 ಕ್ಕೂ ಅಧಿಕ ಸಬ್ ಸ್ಟೇಷನ್ ಗಳು ನಿರ್ಮಾಣಗೊಂಡಿದೆ. ತಾತ್ಕಾಲಿಕ ವಸತಿ ಕೇಂದ್ರಗಳನ್ನು ನಿರ್ಮಿಸಲಾಗಿದೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಉತ್ತರ ಪ್ರದೇಶ ಸರ್ಕಾರ ಈ ಮಹಾನ್ ಮೇಳದಿಂದ ಸುಮಾರು 12,000 ಕೋಟಿ ರು ಸಂಗ್ರಹಿಸುವ ನಿರೀಕ್ಷೆಯಲ್ಲಿದೆ. ಸುಮಾರು 6 ಲಕ್ಷ ಮಂದಿಗೆ ಈ ಮೇಳ ಉದ್ಯೋಗ ನೀಡಿದೆ.

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಕೆಮೆರಾ ಕಣ್ಣಿನಲ್ಲಿ ಕುಂಭಮೇಳದಲ್ಲಿನ ಜನ ಜೀವನ

ಪ್ರಯಾಗದಲ್ಲಿ ಮುಳುಗೇಳುವ ಮೂಲಕ ಸಕಲ ಪಾಪಗಳ ಪರಿಹಾರ ಮಾಡಿಕೊಳ್ಳುವ ಭಕ್ತಾದಿಗಳ ಜೊತೆಗೆ ಸ್ಥಳೀಯ ಹಕ್ಕಿಗಳ ಮುಳುಗಾಟ, ತೇಲಾಟ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+