ಯಡಿಯೂರಪ್ಪ ಋಣ ತೀರಿಸಲು ರಾಜೀನಾಮೆ, ಶೋಭಾ

To strengthen KJP left BJP, minister Shobha Karandlaje
ಬೆಂಗಳೂರು, ಜ 23: ಬಿಜೆಪಿ ಸಂಪುಟದಲ್ಲಿ ನಾನು ಏಕೈಕ ಮಹಿಳಾ ಸಚಿವೆಯಾಗಿದ್ದೆ. ಕಳೆದ ಕೆಲವು ವರ್ಷಗಳಿಂದ ನನ್ನನ್ನು ತುಳಿಯಲು ಪಕ್ಷದಲ್ಲಿ ಪ್ರಯತ್ನಗಳು ನಡೆಯುತ್ತಲೇ ಇದ್ದವು. ಇಷ್ಟು ದಿನ ಸಹಿಸಿಕೊಂಡು ಬಂದೆ, ಇನ್ನು ಸಹಿಸಲಾರೆ.

ರಾಜಕೀಯವಾಗಿ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಯಡಿಯೂರಪ್ಪ ಅವರ ಋಣ ಸಂದಾಯ ಮಾಡಬೇಕಾಗಿದೆ. ಅದಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಕ್ಷದಲ್ಲಿ ನನಗಾಗುತ್ತಿರುವ ನೋವನ್ನು, ಅವಮಾನವನ್ನು RSS ಮುಖಂಡರಿಗೆ ಈಗಾಗಲೇ ವಿವರಿಸಿದ್ದೇನೆ. ನಾನೊಬ್ಬ ಹಳ್ಳಿಯಿಂದ ಬಂದ ಪಕ್ಷದ ಸಾಮಾನ್ಯ ಕಾರ್ಯಕರ್ತೆ.

ನನ್ನನ್ನು ಗುರುತಿಸಿ ಸಚಿವೆಯನ್ನಾಗಿ ಮಾಡಿದ ಯಡಿಯೂರಪ್ಪನವರ ಹೊಸ ಪಕ್ಷವನ್ನು ಬಲ ಪಡಿಸುವುದೇ ನನ್ನ ಮುಂದಿನ ಗುರಿ ಎಂದು ರಾಜೀನಾಮೆ ನೀಡಿದ ನಂತರ ಶೋಭಾ ಭಾವೋದ್ವೇಗಕ್ಕೆ ಒಳಗಾಗಿ ನುಡಿದರು.

ರಾಜ್ಯಕ್ಕೆ ಪ್ರಾದೇಶಿಕ ಪಕ್ಷಗಳ ಅವಶ್ಯಕತೆಯಿದೆ. ಜನರಿಗೆ ರಾಷ್ಟ್ರೀಯ ಪಕ್ಷದ ಮೇಲೆ ನಂಬಿಕೆ ಕಮ್ಮಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಜೆಪಿ ಪಕ್ಷಕ್ಕೆ ಉಜ್ವಲ ಭವಿಷ್ಯವಿದೆ.

ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಪಕ್ಷದ (ಕೆಜೆಪಿ) ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ ಎಂದು ಶೋಭಾ ಹೇಳಿದರು.

ಸುಮಾರು 40 ವರ್ಷಗಳಿಂದ ಯಡಿಯೂರಪ್ಪನವರು ಬಿಜೆಪಿಗಾಗಿ ದುಡಿದರು. ಬಿಜೆಪಿಯಿಂದ ಅವರಿಗೆ ತುಂಬಾ ಅನ್ಯಾಯವಾಗಿದೆ.

ಈ ಎಲ್ಲಾ ಕಾರಣಗಳಿಂದ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶೋಭಾ ಸ್ಪಷ್ಟ ಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+