ಚಿನ್ನ ಅಗ್ಗವಾಗುತ್ತಿರುವಾಗ ಸುಂಕ ಹೆಚ್ಚಳದ ಬರೆ!

when-gold-rates-in-world-market-slide-import-duty-hiked
ನವದೆಹಲಿ, ಜ.22: ಅತ್ತ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಯುತ್ತಿದ್ದು, ಹೆಚ್ಚು ಹೆಚ್ಚು ಖರೀದಿ ಮಾಡಬೇಕೆಂದು ವ್ಯಾಪಾರಸ್ಥರು ಅಂದುಕೊಳ್ಳುತ್ತಿರುವಾಗಲೇ ಕೇಂದ್ರ ಸರಕಾರ ತನ್ನ ಅಸಮರ್ಥ ಆರ್ಥಿಕ ನೀತಿಯಿಂದ ಹೊರಬರಲು ತಕ್ಷಣದಿಂದ ಜಾರಿಗೆ ಬರುವಂತೆ ಚಿನ್ನ ಮತ್ತು ಪ್ಲಾಟಿನಂ ಮೇಲೆ ಆಮದು ಸುಂಕ ಹೆಚ್ಚಿಸಿ ಕುಳಿತಿದೆ. ತತ್ಫಲವಾಗಿ ಚೆನ್ನದ ಬೆಲೆ ತಕ್ಷಣ ಹೆಚ್ಚಾಗಿದೆ. ಮತ್ತು ಇನ್ನೂ ದುಬಾರಿಯಾಗುವುದು ನಿಶ್ಚಿತವಾಗಿದೆ.

ನಿನ್ನೆ ಸೋಮವಾರ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಿದೊಡನೆ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂ. ಗೆ 315 ರೂ ಏರಿಕೆಯಾಗಿ 31,250 ರೂ.ಗೆ ತಲಪಿತು. ಅಷ್ಟೇ ಅಲ್ಲ ಸರಕಾರದ ಈ ನೀತಿಯಿಂದ ಚಿನ್ನದ ಬೆಲೆ ಅಲ್ಪಾವಧಿಯಲ್ಲಿ 10 ಗ್ರಾಂಗಳಿಗೆ ರೂ 700ರಷ್ಟು ಏರಿಕೆ ಕಾಣುವ (ಶೇ 2ರಷ್ಟು ಹೆಚ್ಚಳ) ಸಾಧ್ಯತೆ ಇದೆ. 'ಒಟ್ಟಾರೆ ಉದ್ಯಮ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ' ಎಂದು ಮಾರುಕಟ್ಟೆಯಲ್ಲಿ ಆತಂಕದ ಧ್ವನಿ ಪ್ರತಿಧ್ವನಿಸಿದೆ.

ಅಮೂಲ್ಯ ಲೋಹಗಳು ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುವುದನ್ನು ಕಡಿಮೆಗೊಳಿಸುವುದು. ತನ್ಮೂಲಕ ವಿದೇಶಿ ವಹಿವಾಟನ್ನು ತಹಬಂದಿಗೆ ತಂದು ಹೆಚ್ಚುತ್ತಿರುವ ವಿತ್ತೀಯ ಕೊರತೆಯ ಅಂತರ ತಗ್ಗಿಸುವುದು ಈ ಕ್ರಮದ ಉದ್ದೇಶವಾಗಿದೆ. ಆದರೆ ಕೆಲ ಸಮಯದ ಬಳಿಕ ಸ್ವರ್ಣ ಆಮದು ಪ್ರಮಾಣ ಕಡಿಮೆಯಾಗಿರುವುದು ಕಂಡುಬಂದಲ್ಲಿ ಸುಂಕ ಪ್ರಮಾಣವನ್ನು ಕಡಿಮೆ ಮಾಡುವ ಬಗ್ಗೆ ಆಲೋಚಿಸಲಾಗುವುದು ಎಂದೂ ಸರಕಾರ ತಿಳಿಸಿದೆ.

2011-12ರಲ್ಲಿ 5,650 ಕೋಟಿ ಡಾಲರ್‌ ಚಿನ್ನವನ್ನು ಆಮದು ಮಾಡಿಕೊಳ್ಳಲಾಗಿತ್ತು. ಇನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಡಿಸೆಂಬರ್‌ ತನಕ 3,800 ಕೋಟಿ ಡಾಲರ್‌ ಚಿನ್ನವನ್ನು ಆಮದು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+