BSNL: ಸಂಬಳದ ಹೊರೆ, 1 ಲಕ್ಷ ನೌಕರರು ಮನೆಗೆ?

ಈಗಾಗಲೇ 1 ಲಕ್ಷ VRS ಪ್ರಸ್ತಾವನೆ ಸರಕಾರದ ಮುಂದಿದ್ದು, ಶೀಘ್ರದಲ್ಲೇ ಹಣಕಾಸು ಸಚಿವಾಲಯ ಇದಕ್ಕೆ ಒಪ್ಪಿಗೆ ಮುದ್ರೆಯೊತ್ತುವ ಆಶಯವಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ನಿಗಮದ ಆದಾಯದಲ್ಲಿ ಶೇ. 48ರಷ್ಟು ವೇತನ ಸಲುವಾಗಿಯೇ ಖರ್ಚಾಗುತ್ತಿದೆ. ಸರಕಾರಿ ಸ್ವಾಮ್ಯದ BSNLನಲ್ಲಿ ಸುಮಾರು 1 ಲಕ್ಷ ಉದ್ಯೋಗಿಗಳು ಅಗತ್ಯಕ್ಕಿಂತ ಹೆಚ್ಚಾಗಿದ್ದಾರೆ. ಇಷ್ಟು ಮಂದಿ ವಿಆರ್‌ಎಸ್ ತೆಗೆದುಕೊಂಡರೆ ನಿಗಮದ ವೇತನ ವೆಚ್ಚದಲ್ಲಿ ಶೇ. 10-15ರಷ್ಟು ಹೊರೆ ತಗ್ಗಲಿದೆ ಎಂದು ಉನ್ನತಾಧಿಕಾರಿಗಳು ತಿಳಿಸಿದ್ದಾರೆ.
2011ರ ಮಾರ್ಚ್ 31ಕ್ಕೆ BSNLನಲ್ಲಿ 2.81 ಲಕ್ಷ ಉದ್ಯೋಗಿಗಳಿದ್ದಾರೆ. 2004-05ರಲ್ಲಿ 10,183 ಕೋಟಿ ರೂ. ಲಾಭದಲ್ಲಿದ್ದ ನಿಗಮ 2009-10ರಲ್ಲಿ ನಷ್ಟ ದಾಖಲಿಸಿತ್ತು. 2010-11ರಲ್ಲಿ 6,384 ಕೋಟಿ ರೂ. ನಷ್ಟ ಅನುಭವಿಸಿತ್ತು. ಮುಖ್ಯವಾಗಿ ವೇತನದ ಹೊರೆ ಭಾರಿಯಾಗಿ ಪರಿಣಮಿಸಿದೆ.
ಬಿಎಸ್ಎನ್ಎಲ್ ತನ್ನ ನಾನಾ ಆದಾಯ ಮೂಲಗಳನ್ನು ಕ್ರೋಢೀಕರಿಸಿಕೊಂಡು ಮುಂದಿನ ಐದು ವರ್ಷಗಳಲ್ಲಿ ಸುಮಾರು 8 ಸಾವಿರ ಕೋಟಿ ರೂ. ಆದಾಯ ಗಳಿಸಲು ಯೋಜನೆ ರೂಪಿಸಿದೆ.


Click it and Unblock the Notifications
