ಮೊಬೈಲ್ ಇದ್ದವರಿಗೆ ವೈದ್ಯಕೀಯ ವಿಮೆ!

devi-shetty-proposes-health-insurance-mobile-users
ಬೆಂಗಳೂರು, ಜ.21: ಮೊಬೈಲ್ ಇದ್ದವರಿಗೆ ವೈದ್ಯಕೀಯ ವಿಮೆ - ಹೀಗೊಂದು ಯೋಜನೆಯನ್ನು ಕಾರ್ಯಗತಗೊಳಿಸಲು ಕನ್ನಡಿಗ, ವೈದ್ಯ ದೇವಿ ಶೆಟ್ಟಿ ಅವರು ಪ್ರಸ್ತಾವನೆಯೊಂದನ್ನು ಮುಂದಿಟ್ಟಿದ್ದಾರೆ.

ಭಾರತದಲ್ಲಿ 900 ದಶಲಕ್ಷ ಜನರ ಕೈಯಲ್ಲಿ ಮೊಬೈಲುಗಳು ಇವೆ. ಈ ಮೊಬೈಲ್ ಬಳಕೆದಾರರು ಸರಾಸರಿ ತಿಂಗಳಿಗೆ 150 ರೂ. ಬಿಲ್ ಕಟ್ಟುತ್ತಾರೆ. ಇದರ ಜತೆಗೆ ಇನ್ನೂ ಒಂದು 20 ರೂ. ಹೆಚ್ಚು ಹಣ ಕಟ್ಟಿಸಿಕೊಂಡು ಅಷ್ಟೂ ಮಂದಿಗೆ ವೈದ್ಯಕೀಯ ವಿಮೆ ಕಲ್ಪಿಸುವ ಆಲೋಚನೆ ಇಲ್ಲಿದೆ.

ಈ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಮುಂದಿಡುವುದಾಗಿ ಯೋಜನೆಯ ರೂಪುರೇಷೆ ಸಿದ್ಧಪಡಿಸಿರುವ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

ಒಂದು ವೇಳೆ, ಗ್ರಾಹಕರು 20 ರೂ. ಹೆಚ್ಚಿನ ಹಣ ಪಾವತಿಸಲು ಮುಂದಾಗದಿದ್ದಲ್ಲಿ ಮೊಬೈಲ್ ಸೇವಾ ಕಂಪನಿಗಳಿಂದಲೇ ಆ ಹಣವನ್ನು ಪಾವತಿಸಿಕೊಳ್ಳುವ ಆಲೋಚನೆಯೂ ಇದೆ. ಕೇಂದ್ರ ಸರಕಾರ ಇನ್ನಷ್ಟೇ ಇದಕ್ಕೆ ಅನುಮತಿ ನೀಡಬೇಕಿದೆ.

ಇದು ರೋಗಿಗಳಿಗೆ ನಿಜಕ್ಕೂ ಜೀವಸಂಜೀವಿನಿಯಾಗುವ ಯೋಜನೆಯಾಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+