ಮಾಲ್ ನಲ್ಲಿ ಎಣ್ಣೆ ಕದ್ದು ಸಿಕ್ಕಿ ಬಿದ್ದ ಅಮ್ಮಣ್ಣಿ!

Theft caught on CCTV in Bangalore
ಬೆಂಗಳೂರು, ಜ. 19 : ಈಗಿನ ಕಾಲದಲ್ಲಿ ಚಾಪೆ ಕೆಳಗೆ ತೂರೋ ಜನ ಎಷ್ಟು ಜನ್ರು ಇದ್ದಾರೋ ಅಷ್ಟೇ ಮಂದಿ ರಂಗೋಲಿ ಕೆಳಗೆ ತೂರೋರು ಇದ್ದೇ ಇರ್ತಾರೆ. ಆದ್ರೆ ನಮ್ಮ ಜನ ಎಲ್ಲಿ ತೂರಿದ್ರು ತಂತ್ರಜ್ಞಾನದಿಂದ ಮಾತ್ರ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಬೆಂಗಳೂರಿನ ದಂಪತಿ ಕಾರಲ್ಲಿ ಬಂದು ಕಳ್ಳತನ ಮಾಡಿರೋದು ಸಿಸಿ ಟಿವಿಯಲ್ಲಿ ಸೇರೆಯಾಗಿದೆ. ಆ ಕಳ್ಳತನ ಮಾಡಿದ್ದು ನೋಡಿದ್ರೆ ಒಂದ್ ನಿಮಿಷ್ ದಂಗ್ ಆಗೋದು ಗ್ಯಾರಂಟಿ. ಹಾಗಿದ್ರೆ ಹೇಗೆ ಮಾಡಿದ್ರು ಅನ್ನೋ ಕುತೂಹಲ ನಾ? ಈ ಸ್ಟೋರಿ ಓದಿರಿ.

ಈ ಡೇ ಲೈಟ್ ಕಳ್ಳತನ ನಡೆದಿದ್ದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸ್ಮಾರ್ಟ್ ಸೂಪರ್ ಮಾರ್ಕೆಟ್‌ನಲ್ಲಿ. ಈ ಘಟನೆ ನಡೆದಿದ್ದು ಜ.12ರಂದು ಮಟಮಟ ಮಧ್ಯಾಹ್ನ 1 ಗಂಟೆ 42 ನಿಮಿಷದ ಸಮಯದಲ್ಲಿ. ಅಂಗಡಿ ನಿರ್ವಾಹಕರು ಕೆಲಸದಲ್ಲಿ ತಲ್ಲೀನರಾಗಿದ್ದರು. ಆಗ ಕೊಟ್ತು ನೋಡಿ ಗಂಡ, ಹೆಂಡತಿ ಮತ್ತು ಏಳೆಂಟು ವರ್ಷದ ಮಗನಿದ್ದ, ಅಂಗಡಿ ಚೊಕ್ಕ ಮಾಡಲು ಬಂದ ಚಿಕ್ಕ ಕುಟುಂಬ.

ಸೂಪರ್ ಮಾರ್ಕೆಟ್‌ನಲ್ಲಿ ಮಧ್ಯಾಹ್ನದ ವೇಳೆ ಅಂದು ಅಷ್ಟು ಜನರು ಯಾರು ಇರಲಿಲ್ಲ. ಗಂಡ ಹೇಗೋ ಏನೋ ಹೆಂಡತಿ ಮಾತ್ರ ಸಖತ್ 'ಎಣ್ಣೆ' ಪಾರ್ಟಿ. ಆ ಸಮಯದಲ್ಲಿ ಈ ಚಾಲಾಕಿ ಹೆಣ್ಣು ತನ್ನ ಕೈಚಳಕ ಶುರು ಮಾಡಿದಳು. ಕೇವಲ 1 ನಿಮಿಷ 11 ಸೆಕೆಂಡುಗಳಲ್ಲಿ ಈ ಆಂಟಿ ಅಲ್ಲಿ ಕಳ್ಳತನ ಮಾಡಿದ್ದು ಬರೋಬ್ಬರಿ 8 ಸನ್‌ಪ್ಯೂರ್ ಆಯಿಲ್ ಪ್ಯಾಕೆಟ್‌ಗಳನ್ನ. ಆಶ್ಚರ್ಯ ಅಂದ್ರೆ ಚಕಾ ಚಕ್ ಅಂತ 8 ಸನ್‌ಪ್ಯೂರ್ ಎಣ್ಣೆ ಪ್ಯಾಕೇಟ್‌ಗಳನ್ನ ಒಳ ಉಡುಪಿನಲ್ಲಿ ಇಟ್ಟುಕೊಂಡು ಹೊರಟೇ ಬಿಟ್ಟಳು.

ಅವರು ಏನನ್ನೂ ಖರೀದಿಸಲಿಲ್ಲವಾದ್ದರಿಂದ ಚೆಕಿಂಗ್ ಕೂಡ ಮಾಡಿರಲಿಲ್ಲ. ಈ ಫ್ಯಾಮಿಲಿ ಶಾಪಿಂಗ್ ಮಾಡಲು ಬಂದಿದ್ದು ಕಾರಿನಲ್ಲಿ ಆದ್ದರಿಂದ ಯಾರೂ ಅನುಮಾನ ಪಟ್ಟಿರಲಿಲ್ಲ. ಈ ಘಟನೆ ನಡೆದ ಮರು ದಿನ ಸಿಸಿಟಿವಿ ಫೂಟೇಜ್ ಚೆಕ್ ಮಾಡುವಾಗ ಮಹಿಳೆಯ ಕೈಚಳಕ ನೋಡಿ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

ಕಾರಿನಲ್ಲಿ ಈ ಫ್ಯಾಮಿಲಿ ಹೀಗೆ ನಾಲ್ಕಾರು ಸೂಪರ್ ಮಾರ್ಕೆಟ್ ಸುತ್ತಿ ಎಣ್ಣೆ ಮತ್ತಿತ್ಯಾದಿ ಗುಳುಂ ಮಾಡಿ ಕಾರಿನಲ್ಲಿ ತುಂಬಿಕೊಂಡು ಹೋಗಿರಬಹುದು ಅಂತ ಎಂದು ಶಂಕಿಸಲಾಗಿದೆ. ಈ ಘಟನೆ ನಡೆದಾಗ ಮ್ಯಾನೇಜರ್ ಊರಿನಲ್ಲಿ ಇರಲಿಲ್ಲವಾದ್ದರಿಂದ ನಿನ್ನ ಊರಿನಿಂದ ಬಂದು ರಾಜರಾಜೇಶ್ವರಿನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಸೂಚನೆ : ಸೂಪರ್ ಮಾರ್ಕೆಟ್ ಮಾಲಿಕರೇ ಸಿಸಿಟಿವಿಯನ್ನು ಆಗಾಗ ಚೆಕ್ ಮಾಡ್ತಿರಿ ಅನ್ನೋದು ನಮ್ಮ ಸಜೆಷನ್. ಸೂಪರ್ ಮಾರ್ಕೆಟ್‌ಗಳು ದೊಡ್ಡದಾಗಿರುವುದರಿಂದ ಇಂಥ ಕೆಲಸ ಮಾಡಿದರೆ ಯಾರ ಕಣ್ಣಿಗೂ ಬಿಳುವುದಿಲ್ಲ ಎಂಬ ಧೈರ್ಯ ಅನೇಕರಲ್ಲಿರುತ್ತದೆ. ಆದ್ರೆ, ಸಿಸಿಟಿವಿಗಳು ಬಿಡ್ತಾವಾ, ಪೊಲೀಸರು ಸುಮ್ಮನಿರ್ತಾರಾ? ಸೋ, ಈ ಆಂಟಿ ಐಡಿಯಾ ಯಾರಾದ್ರೂ ಟ್ರೈ ಮಾಡೋಕೆ ಹೋದ್ರೆ ಹೀಗೆ ಸಿಸಿಟಿವಿಯಲ್ಲಿ ಸಿಕ್ಕಿ ಬೀಳ್ತೀರಿ ಹುಷಾರ್!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+