ಶೋಭಾ ಕರಂದ್ಲಾಜೆ ದರ್ಬಾರ್ ಸಹಿಸಿಕೊಳ್ಳಲು ಸಾಧ್ಯವಿಲ್ಲ

ತಮ್ಮ ವಾಗ್ದಾಳಿಯ ತಿರುವನ್ನು ಬಿಜೆಪಿಯ ಹಾಲಿ ವಿದ್ಯುತ್ ಸಚಿವೆ ಶೋಭಾ ಕರಂದ್ಲಾಜೆ ಅವರತ್ತಲೂ ತಿರುಗಿಸಿರುವ ಮದನ್ ಪಟೇಲ್ 'ಯಡಿಯೂರಪ್ಪ ಅವರ ಸರ್ವಾಧಿಕಾರಿ ಧೋರಣೆಯನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಆದರೆ ಶೋಭಾ ಕರಂದ್ಲಾಜೆ ದರ್ಬಾರ್ ಸಹಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಯಡಿಯೂರಪ್ಪ ಅವರು ತಮಗೆ ಭಾರಿ ಮೋಸ ಮಾಡಿದ್ದಾರೆ' ಎಂದೇ ಸುದ್ದಿಗೋಷ್ಟಿ ಆರಂಭಿಸಿದ ಮದನ್ ಪಟೇಲ್ ಕಣ್ಣಿರು ಹಾಕುತ್ತಲೇ ತಮ್ಮ ನೋವನ್ನು ಹೊರಹಾಕಿದರು. ಅವರ ಮಾತುಗಳಲ್ಲೇ ಕೇಳಿ:
* ಅಡುಗೆ ಭಟ್ಟನಾಗಿದ್ದ ಸಿದ್ಲಿಂಗಸ್ವಾಮಿಗೆ ಟಿಕೆಟ್ ನೀಡಿದ್ದಾರೆ. ಆದರೆ ನನಗೆ ಮಳವಳ್ಳಿಯಿಂದ ಟಿಕೆಟ್ ನೀಡ್ತೀನಿ ಅಂತ ವಾಗ್ದಾನ ಮಾಡಿದ್ದ ಯಡಿಯೂರಪ್ಪ ಇದೀಗ ಟಿಕೆಟ್ ಕೊಡೊಲ್ಲ ಎಂದು ಕೈಯೆತ್ತಿಬಿಟ್ಟರು.
* ಯಡಿಯೂರಪ್ಪ ದಲಿತ ವಿರೋಧಿ ಮತ್ತು ಅಲ್ಪಸಂಖ್ಯಾತರ ಬಗ್ಗೆ ಅವರದು ಢೋಂಗಿತನ. [ನೆನಪುಗಳ ಮೆರವಣಿಗೆಯಲ್ಲಿ...]












Click it and Unblock the Notifications