ಭಾರ್ತಿ ಏರ್ ಟೆಲ್ ನಿಂದ ಸಿಇಒ ಸಂಜಯ್ ಹೊರಕ್ಕೆ

Sanjay Kapoor to quit Bharti Airtel
ಬೆಂಗಳೂರು, ಜ.15: ಭಾರತದ ಟೆಲಿಕಾಂ ಕ್ಷೇತ್ರದ ಭಾರ್ತಿ ಏರ್ ಟೆಲ್ ಸಂಸ್ಥೆಯನ್ನು ಜಾಗತಿಕವಾಗಿ ನಾಲ್ಕನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ಸ್ಥಾನಕ್ಕೇರಿಸಿದ್ದ ಸಿಇಒ ಸಂಜಯ್ ಕಪೂರ್ ಸಂಸ್ಥೆ ತೊರೆಯುತ್ತಿದ್ದಾರೆ.

ಸಿಇಒ ಸಂಜಯ್ ನಿರ್ಗಮನದ ಬಗ್ಗೆ ಭಾರ್ತಿ ಏರ್ ಟೆಲ್ ಮಂಗಳವಾರ(ಜ.15) ಪ್ರಕಟಣೆ ಹೊರಡಿಸಿದೆ. ಸಂಜಯ್ ಕಪೂರ್ ಅವರ ಸ್ಥಾನವನ್ನು ಗೋಪಾಲ್ ವಿಠಲ್ ಅವರು ತುಂಬಲಿದ್ದಾರೆ ಎಂದು ದೇಶದ ಅತಿ ದೊಡ್ಡ ಟೆಲಿಕಾಂ ಸಂಸ್ಥೆ ಹೇಳಿದೆ.

ಸಂಜಯ್ ಅವರ ನಿರ್ಗಮನದ ಸುದ್ದಿ ಹೊರ ಬೀಳುತ್ತಿದ್ದಂತೆ ಬಿಎಸ್ ಇನಲ್ಲಿ ಭಾರ್ತಿ ಏರ್ ಟೆಲ್ ಷೇರುಗಳು ಮಧ್ಯಾಹ್ನ 3.45ರ ವೇಳೆಗೆ 345.25ರು ನಂತೆ ಶೇ 4.81ರಷ್ಟು ಏರಿಕೆ ಕಂಡಿತು. ಇದೇ ವೇಳೆಗೆ ಎನ್ ಎಸ್ ಇನಲ್ಲಿ 345.20 ರು ನಂತೆ ಶೇ 5.02ರಷ್ಟು ಏರಿದೆ.

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯನ್ನು ತ್ಯಜಿಸಿದರೂ ಸಂಜಯ್ ಅವರು ಇಂಡಸ್ ಟವರ್ ಲಿ ಹಾಗು ಭಾರ್ತಿ ಗ್ಲೋಬಲ್ ಲಿ ಬೋರ್ಡ್ ನಲ್ಲಿ ಮುಂದುವರೆಯಲಿದ್ದಾರೆ ಎಂದು ಸಂಸ್ಥೆ ಹೇಳಿದೆ.

ಸಿಇಒ ಆಗಿ ಸಂಜಯ್ ಅವರು ಫೆಬ್ರವರಿ 28,2013ರ ತನಕ ಕರ್ತವ್ಯ ನಿರ್ವಹಿಸಲಿದ್ದಾರೆ. ಮಾರ್ಚ್ 31,2013ರ ತನಕ ಸಂಸ್ಥೆಯ ಕಾರ್ಯಭಾರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಜಾಗತಿಕವಾಗಿ ಸುಮಾರು 250 ಮಿಲಿಯನ್ ಚಂದಾದಾರರನ್ನು ಹೊಂದಿರುವ ಭಾರ್ತಿ ಏರ್ ಟೆಲ್ ನಾಲ್ಕನೇ ಅತಿದೊಡ್ಡ ಟೆಲಿಕಾಂ ನೆಟ್ವರ್ಕ್ ಸಂಸ್ಥೆಯಾಗಿದೆ ಎಂದು ವೆರ್ ಲೆಸ್ ಇಂಟೆಲಿಜೆನ್ಸ್ ಸಂಸ್ಥೆ ವರದಿ ಮಾಡಿದೆ.

ಕಳೆದ ತ್ರೈಮಾಸಿಕದಲ್ಲಿ ಭಾರ್ತಿ ಏರ್ ಟೆಲ್ ನಿವ್ವಳ ಆದಾಯ ಶೇ 4.8 ರಷ್ಟು ಏರಿಕೆ ಕಂಡು 19,350.1 ಕೋಟಿ ರು ನಿಂದ 20,273.2 ಕೋಟಿ ರು ಗೆ ಏರಿದೆ. ಪ್ರಸಕ್ತ ತ್ರೈಮಾಸಿಕದಲ್ಲಿ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ 831 ಕೋಟಿ ರು ನಿವ್ವಳ ಲಾಭ ಹಾಗೂ 19,512 ಕೋಟಿ ರು ಆದಾಯ ನಿರೀಕ್ಷೆಯಿತ್ತು.

ಸಂಜಯ್ ಕಪೂರ್ ಅವರು ತಮ್ಮ ಸುಮಾರು 26 ವರ್ಷಗಳ ವೃತ್ತಿ ಬದುಕಿನಲ್ಲಿ 13 ವರ್ಷಗಳನ್ನು ಟೆಲಿಕಾಂ ಕ್ಷೇತ್ರದಲ್ಲೇ ಕಳೆದಿದ್ದರು.

1998 ರಲ್ಲಿ ಭಾರ್ತಿ ಏರ್ ಟೆಲ್ ಸೇರಿದ ಸಂಜಯ್ ಅವರು 2006ರ ಹೊತ್ತಿಗೆ ದೇಶದ ಅಗ್ರಗಣ್ಯ ಟೆಲಿಕಾಂ ಸಂಸ್ಥೆಯನ್ನಾಗಿಸಿದರು. 2ಜಿ, 3ಜಿ, 4ಜಿ ಸೇವೆ, ಡಿಟಿಎಚ್, ಹಲವು ಡಿಜಿಟಲ್ ಸೇವೆ, ಬ್ರಾಡ್ ಬ್ಯಾಂಡ್ ಸೇವೆಗಳನ್ನು ಏರ್ ಟೆಲ್ ಒದಗಿಸುವ ಮೂಲಕ ಜನ ಮೆಚ್ಚುಗೆ ಗಳಿಸಿತು.

ಏರ್‍ ಟೆಲ್ ಗೂ ಮುನ್ನ ಸಂಜಯ್ ಅವರು ಕ್ಸೆರಾಕ್ಸ್ ಇಂಡಿಯಾ ಸಂಸ್ಥೆಯಲ್ಲಿದ್ದರು. ಇದಕ್ಕೂ ಮುನ್ನ ಜಾಯ್ ಇಂಜಿನಿಯರಿಂಗ್ ವರ್ಕ್ಸ್ ನಲ್ಲಿ ಟ್ರೈನಿಯಾಗಿದ್ದರು.

ಸಂಜಯ್ ಅವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಕಾಮರ್ಸ್ ಡಿಗ್ರಿ, ಯುಕೆಯ ಕ್ರಾನ್ ಫೀಲ್ಡ್ ವಿವಿಯಿಂದ ಎಂಬಿಎಹಾಗೂ ವಾರ್ಟನ್ ಅಡ್ವಾನ್ಡ್ ಮ್ಯಾನೇಜ್ಮೆಂಟ್ ಪ್ರೊಗಾಂನ ಪದವಿ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+