ಬೆಂಗಳೂರು ಒನ್ ಬಿಲ್ ಪಾವತಿಸಲು ಇನ್ಮುಂದೆ ಬಸ್ ಹತ್ತಿ

ಏನಪಾ ಅಂದರೆ ನಾನಾ ಇಲಾಖೆಗಳು ನಾನಾ ಸಾರ್ವಜನಿಕ ಸೇವೆಗಳನ್ನು ಕಲ್ಪಿಸುತ್ತಿವೆ. ಅದಕ್ಕೆ ತಿಂಗಳಿಗೆ ಇಂತಿಷ್ಟು ಎಂದು ಬಿಲ್ ಕಟ್ಟಬೇಕಾಗುತ್ತದೆ. ನಾನಾ ಇಲಾಖೆಗಳ ಬಿಲ್ ಪಾವತಿ ಕೇಂದ್ರಕ್ಕೇ ಹೋಗಿ, ಬಿಲ್ ಪಾವತಿಸುವುದು ತ್ರಾಸದಾಯಕ ಎನ್ನುವರಿಗಾಗಿ ಸರಕಾರವು 2 ಬಸ್ಸುಗಳನ್ನು ನಾನಾ ಬಡಾವಣೆಗಳಿಗೆ ಕಳಿಸಿಕೊಡಲಿದೆ.
ಈ ವ್ಯವಸ್ಥೆ ಸದ್ಯದಲ್ಲೇ ಚಾಲ್ತಿಗೆ ಬರಲಿದ್ದು, ಗ್ರಾಹಕರು ಈ ಬಸ್ಸುಗಳ ಬಳಿ ತೆರಳಿ ತಿಂಗಳ ಬಿಲ್ಲುಗಳನ್ನು ಸಾವಕಾಶವಾಗಿ ಪಾವತಿಸಬಹುದಾಗಿದೆ. ನಗದು, ಬ್ಯಾಂಕ್ ಚೆಕ್ ಮತ್ತು ಕ್ರೆಡಿಟ್/ ಡೆಬಿಟ್ ಕಾರ್ಡ್ ಮೂಲಕ ವಿವಿಧ ಇಲಾಖೆಗಳ ಮಾಸಿಕ ಬಿಲ್ಲುಗಳನ್ನು ಒಂದೇ ಕಡೆ ಪಾವತಿಸಬಹುದು. ಎರಡೂ ಬಸ್ಸಿನಲ್ಲಿ ಕಂಪ್ಯೂಟರ್ ಆಪರೇಟರುಗಳು, ಅಕೌಂಟ್ಸ್ ಮ್ಯಾನೇಜರ್ ಇರುತ್ತಾರೆ.
Bangalore One ಪ್ರಸ್ತುತ 34 ಸೇವೆಗಳ ಬಿಲ್ ಪಾವತಿಸುವ ಸೌಲಭ್ಯವನ್ನು ಕಲ್ಪಿಸುತ್ತಿದೆ. airtel, vodofone, tata phone, flight, hotel, movie, events bookings, dish tv, BSNL mobile- landline bills, property tax, water, electricity payments, RTO, insurance premium ಪಾವತಿಗಳು ಮುಂತಾದವು.
ಗಮನಿಸಿ: ಸದ್ಯದಲ್ಲೇ ಆಧಾರ್ ನೋಂದಣಿಯನ್ನು ನಗರಾದ್ಯಂತ ಹರಡಿರುವ 87 Bangalore One ಕೇಂದ್ರಗಳಲ್ಲೂ ಮಾಡಿಸಬಹುದು. ಇವುಗಳ ಪೈಕಿ 68 ಕೇಂದ್ರಗಳು 24 ಗಂಟೆಯೂ ಸೇವೆ ಸಲ್ಲಿಸುತ್ತಿವೆ. ಉಳಿದ ಕೇಂದ್ರಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರವರೆಗೂ ಬಿಲ್ ಪಾವತಿ ಮಾಡಬಹುದಾಗಿದೆ. ಪ್ರಮುಖ ಕೇಂದ್ರಗಳಲ್ಲಿ ದಿನಕ್ಕೆ ಸಾವಿರ ಬಿಲ್ಲುಗಳು ಪಾವತಿಯಾಗುತ್ತಿರುವ ಆಶಾದಾಯಕವಾಗಿದೆ.
ಇದಲ್ಲದೆ ಮೈಸೂರು, ಗುಲ್ಬರ್ಗ, ಹುಬ್ಬಳ್ಳಿ, ದೊಡ್ಡಬಳ್ಳಾಪುರ, ದಾವಣಗೆರೆ, ಬಳ್ಳಾರಿ, ಬೆಳಗಾವಿ ಮತ್ತು ಮಂಗಳೂರಿನಲ್ಲಿಯೂ ಇಂತಹ ಬಿಲ್ ಪಾವತಿ ಕೇಂದ್ರಗಳು (Karnataka One) ಕಾರ್ಯನಿರತವಾಗಿವೆ.
ಸರಿ ಇನ್ಮುಂದೆ ಈ ಬಸ್ಸುಗಳನ್ನು ಹುಡುಕಿಕೊಂಡು ಹೋಗಬೇಕಾ? ಎಂದು ತಲೆಯೆ ಮೇಲೆ ಕೈಹೊತ್ತಿಕೊಳ್ಳುವವರಿಗಾಗಿ ಯಾವ ಬಸ್ಸು ಯಾವ ಮಾರ್ಗದಲ್ಲಿ ಯಾವ ಸ್ಥಳದಲ್ಲಿ ಎಷ್ಟು ಗಂಟೆಗೆ ಬಂದು ನಿಲ್ಲುತ್ತದೆ ಎಂಬುದನ್ನು ತಿಳಿದುಕೊಳ್ಳಲು ದಿನಪತ್ರಿಕೆಗಳ ಮೂಲಕ ಮಾಹಿತಿ ನೀಡಲಾಗುತ್ತದೆ. ಬೆಳಗ್ಗೆ 9.30ರಿಂದ ಸಂಜೆ 6 ಗಂಟೆವರೆಗೂ ಈ ಬಸ್ಸುಗಳಲ್ಲಿ ಬಿಲ್ ಪಾವತಿ ನಡೆಯಲಿದೆ. ಜನ ಈ ನೂತನ ಬಸ್ ಸೇವೆಗೆ ಹೊಂದಿಕೊಂಡರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಬಸ್ಸುಗಳು ರಸ್ತೆಗಳಿಯಲಿವೆ.


Click it and Unblock the Notifications
