ದೇವರು, ರಸ್ತೆ, ಮೆಟ್ರೋ ಬಗ್ಗೆ ಶೆಟ್ಟರ್ ನಿರ್ಣಯಗಳು

Karnataka Cabinet Decisions
ಬೆಂಗಳೂರು, ಜ.11 : ಹಿಂದೂ ದೇವರ ಚಿತ್ರಗಳನ್ನು ಟೀ ಶರ್ಟ್, ಪಟಾಕಿ ಇನ್ನಿತರ ಪದಾರ್ಥಗಳ ಮೇಲೆ ಬಳಸುವುದನ್ನು ಬಿಜೆಪಿ ಸರ್ಕಾರ ನಿಷೇಧಿಸಿದೆ. ಆದರೆ, ರಾಜ್ಯದಲ್ಲಿರುವ ಜ್ಯೋತಿಷಿಗಳು, ಗಿಳಿಶಾಸ್ತ್ರಜ್ಞರು, ಮಾಂತ್ರಿಕರ ನೋಂದಣಿ ಕಾರ್ಯದ ಬಗ್ಗೆ ಶೆಟ್ಟರ್ ಅವರ ಸಚಿವ ಸಂಪುಟ ಯಾವುದೇ ನಿರ್ಣಯ ಕೈಗೊಂಡಿಲ್ಲ.

ರಾಜ್ಯದಲ್ಲಿ ಮಾಟ-ಮಂತ್ರದ ಮೂಲಕ ಮುಗ್ಧ ನಾಗರಿಕರನ್ನು ವಂಚಿಸುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಶೀಘ್ರದಲ್ಲೆ ಕಾನೂನು ರೂಪಿಸಲಾಗುವುದು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಜ್ಯೋತಿಷಿಗಳು ಮುಜರಾಯಿ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ.

ಈ ಬಗ್ಗೆ ಅಧ್ಯಯನ ನಡೆಸಲು ತಜ್ಞರ ಸಮಿತಿಯೊಂದನ್ನು ರಚನೆ ಮಾಡಲಿದ್ದು, ನಾಲ್ಕು ತಿಂಗಳಲ್ಲಿ ಸರ್ಕಾರಕ್ಕೆ ವರದಿ ನೀಡಲಿದೆ. ಈ ವರದಿ ಆಧಾರದಲ್ಲಿ ಜ್ಯೋತಿಷಿಗಳ ನೋಂದಣಿಯನ್ನು ಕಡ್ಡಾಯಗೊಳಿಸಬೇಕೆ? ಬೇಡವೇ? ಎಂಬುದರ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕ್ಯಾಬಿನೆಟ್ ನಿರ್ಣಯಗಳು: ರಾಜ್ಯದ ಗ್ರಾಮೀಣ ಭಾಗದ 9442 ಕಿ.ಮೀ. ಉದ್ದದ ರಸ್ತೆಯನ್ನು 3658 ಕೋಟಿ ರೂ.
ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚುನಾವಣೆ ಮುಂದಿಟ್ಟುಕೊಂಡು ಗ್ರಾಮೀಣ ಭಾಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಸಚಿವ ಸಂಪುಟ ಸಭೆ ನಿರ್ಣಯಗಳು ಇಂತಿದೆ:

* ಒಟ್ಟು 189 ಗ್ರಾಮೀಣ ವಿಧಾನಸಭಾ ಕ್ಷೇತ್ರವ್ಯಾಪ್ತಿಯ 30 ಕಿಲೋ ಮೀಟರ್ ರಸ್ತೆ ಅಭಿವೃದ್ಧಿ
* ಈ ರಸ್ತೆಯನ್ನು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಹಾಗೂ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆ ಸೇರಿಸಲಾಗುತ್ತದೆ.
* ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 531 ಕಿ.ಮೀನ ವಿಜಯನಗರ ಕಾಲುವೆ (ತುಂಗಭದ್ರಾ ಬಲ ಕಾಲುವೆ) 255 ಕೋಟಿ ರು ವೆಚ್ಚದಲ್ಲಿ ಅಭಿವೃದ್ಧಿ. ಕೊಪ್ಪಳ, ಬಳ್ಳಾರಿ, ರಾಯಚೂರು ಜಿಲ್ಲೆಗೆ ಅನುಕೂಲ
* ಗಂಗಾವತಿಯಲ್ಲಿ ಕೃಷಿ ಕಾಲೇಜು ನಿರ್ಮಾಣಕ್ಕೆ 46.50 ಕೋಟಿ ಮಂಜೂರು.
* ವಾಯುವ್ಯ ರಾಜ್ಯ ಸಾರಿಗೆ ಸಂಸ್ಥೆಗೆ ಹೊಸ ಬಸ್ ಖರೀದಿಸಲು 50 ಕೋಟಿ ರು ನೀಡಲಾಗಿದೆ.
* ಬಳ್ಳಾರಿ ತಾಲೂಕು ಅಲದಹಳ್ಳಿ ಗ್ರಾಮದಲ್ಲಿ ಗಾರ್ಮೆಂಟ್ಸ್ ಎಕ್ಸ್ ಪೋರ್ಟ್ ಸ್ಥಾಪನೆಗೆ 50 ಎಕರೆ ಭೂಮಿ ಮೀಸಲು
* ಬೆಂಗಳೂರು ಮೆಟ್ರೋ ಯೋಜನೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ನಿಂದ 250 ಮಿಲಿಯನ್ ಯುಎಸ್ ಡಾಲರ್ ಸಾಲ ಪಡೆಯಲು ಸಂಪುಟ ಸಭೆ ಸಮ್ಮತಿ.
* ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ದೇವಪುರ ಹಟ್ಟಿಯಲ್ಲಿ ಸಂಗಮೇಶ್ವರ ಶುಗರ್ ಮಿಲ್ಸ್ ಸ್ಥಾಪನೆಗೆ ಸಂಪುಟ ಅಸ್ತು. ಪ್ರತಿ ದಿನಕ್ಕೆ 2,500 ಟನ್ ಕಬ್ಬು ಅರೆಯುವ ಸಾಮರ್ಥ್ಯ ಈ ಮಿಲ್ಸ್ ಗೆ ಇರುತ್ತದೆ.
* ಆಯುಷ್ ವೈದ್ಯರ ಸಂಬಳ ಮಿತಿ 26 ಸಾವಿರದಿಂದ 28-50,100 ಕ್ಕೆ ಏರಿಕೆ
* ಆನೇಕಲ್ ತಾಲೂಕು ಕೂಡ್ಲು ಗ್ರಾಮದಲ್ಲಿ ಬಾಬು ಜಗಜೀವನ್ ರಾಮ್ ಟ್ರಸ್ಟ್ ಗೆ 2 ಎಕರೆ ಭೂಮಿ ಮಂಜೂರು
* ಶಿವಮೊಗ್ಗದ ಸೊಮೆನಕೊಪ್ಪದಲ್ಲಿ ಕನಕ ಭವನ ಸ್ಥಾಪನೆಗೆ ಕನಕದಾಸ ಸೇವಾ ಟ್ರಸ್ಟಿಗೆ 2 ಎಕರೆ ಭೂಮಿ ಮಂಜೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+