ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫಿ 9000 ಉದ್ಯೋಗಿಗಳಿಗೆ ಪ್ರೊಮೋಷನ್

By Mahesh
|
Google Oneindia Kannada News

Infosys planning up to 9,000 promotions: Shibulal
ಬೆಂಗಳೂರು, ಜ.11: ದೇಶದ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸಂಸ್ಥೆ ಇನ್ಫೋಸಿಸ್ ತನ್ನ ಮೂರನೇ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ಹೊರ ಹಾಕಿದೆ. ಇದರ ಬೆನ್ನಲ್ಲೇ ಸುಮಾರು 9000 ಉದ್ಯೋಗಿಗಳಿಗೆ ಬಡ್ತಿ ಯೋಗ ಲಭಿಸಲಿದೆ ಎಂದು ಸಿಇಒ ಶಿಬುಲಾಲ್ ಘೋಷಿಸಿದ್ದಾರೆ.

ಪ್ರಸಕ್ತ ತ್ರೈಮಾಸಿಕದ ಕೊನೆಗೆ ಸುಮಾರು 6,000 ದಿಂದ 9,000 ಉದ್ಯೋಗಿಗಳಿಗೆ ಪ್ರೊಮೋಷನ್ ಗ್ಯಾರಂಟಿ. ಆರ್ಥಿಕ ವರ್ಷದ ಮಧ್ಯಾವಧಿಯಲ್ಲಿ ಒಂದು ಸುತ್ತಿನ ಬಡ್ತಿ ನೀಡಲಾಗಿತ್ತು. ವರ್ಷಾಂತ್ಯದೊಳಗೆ ಇನ್ನೊಂದು ಸುತ್ತಿನ ಬಡ್ತಿ ನೀಡಲಾಗುವುದು ಎಂದು ಸಿಇಒ ಶಿಬುಲಾಲ್ ಹೇಳಿದ್ದಾರೆ.

ಷೇರುಪೇಟೆ ವರದಿ: ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆ ಮಟ್ಟದ ಫಲಿತಾಂಶ ಬಂದ ಪರಿಣಾಮ ಷೇರುಪೇಟೆಯಲ್ಲಿ ಇನ್ಫಿ ಷೇರುಗಳು ಸಂಚಲನ ಮೂಡಿಸಿದೆ. ವರದಿ ಹೊರಬಿದ್ದ ನಂತರ ಮೇಲಕ್ಕೇರಿದ ಇನ್ಫಿ ಷೇರುಗಳು ಇನ್ನೂ ಮೇಲ್ಮುಖವಾಗೇ ಚಲಿಸುತ್ತಿದೆ.

ಬಿಎಸ್ ಇನಲ್ಲಿ ಮಧ್ಯಾಹ್ನ 13.15ರ ಹೊತ್ತಿಗೆ 2685.70 ರು.ನಂತೆ ಶೇ 15 ರಷ್ಟು ಏರಿಕೆ ಕಂಡಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ2686.55 ರು ನಂತೆ ಶೇ 15.68 ರಷ್ಟು ಏರಿಕೆಯಾಗಿದೆ.(ಐಟಿ ಷೇರುಗಳಿಗೆ ಇಂದೇ ಸಂಕ್ರಾಂತಿ..ನಿರೀಕ್ಷಿಸಿ)

ಇನ್ಫೋಸಿಸ್ ನ ಅಸಲಿ ತಾಕತ್ತು ಮುಂಬರುವ ತ್ರೈಮಾಸಿಕದಲ್ಲಿ ತಿಳಿಯಲಿದೆ. ನಮ್ಮ ಉದ್ಯೋಗಿಗಳ ಕಠಿಣ ಶ್ರಮಕ್ಕೆ ಬೆಲೆ ಸಿಕ್ಕಿದೆ ಎಂದು ಶಿಬುಲಾಲ್ ಹೇಳಿದ್ದಾರೆ.

ಇದರ ಜೊತೆಗೆ on shore ಉದ್ಯೋಗಿಗಳಿಗೆ ಶೇ 3 ರಷ್ಟು ಸಂಬಳ ಏರಿಕೆ ಮಾಡಲಾಗಿದೆ. off shore ಉದ್ಯೋಗಿಗಳಿಗೆ ಸದ್ಯಕ್ಕೆ ಯಾವುದೇ ಸಿಹಿ ಸುದ್ದಿ ಇಲ್ಲ. ಕಳೆದ ಅಕ್ಟೋಬರ್ ನಲ್ಲಿ ಶೇ 6 ರಷ್ಟು ಸಂಬಳ ಏರಿಕೆ ಮಾಡಲಾಗಿತ್ತು. ಏಪ್ರಿಲ್ ನಲ್ಲಿ ಸಂಬಳ ಏರಿಕೆ ಮಾಡಿದ ಏಕೈಕ tier 1 ಸಾಫ್ಟ್ ವೇರ್ ಕಂಪನಿ ನಮ್ಮದು ಎಂದು ಶಿಬುಲಾಲ್ ಹೇಳಿದರು.

ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆ ಹಾಗೂ ಇಂಜಿನಿಯರ್ ಗಳ ನೇಮಕಾತಿಯಲ್ಲಿ ವಿಳಂಬವಾಗುತ್ತಿದೆ. ಇದು ವೆಚ್ಚ ಕಡಿತ ಯೋಜನೆಯ ಭಾಗವಾಗಿದೆ. ಆದರೆ, ಮುಂಬರುವ ತ್ರೈಮಾಸಿಕದಲ್ಲಿ ಪರಿಸ್ಥಿತಿ ಬದಲಾಗಲಿದೆ ಎಂಬ ಭರವಸೆಯನ್ನು ಇನ್ಫೋಸಿಸ್ ನೀಡಿದೆ.

ಬೆಂಗಳೂರು ಮೂಲದ ಸಂಸ್ಥೆ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 1,53,761 ರಷ್ಟು ಉದ್ಯೋಗಿಗಳನ್ನು ಹೊಂದಿತ್ತು ನಂತರ ಶೇ 1.2 ರಷ್ಟು ಸಂಖ್ಯೆ ಹೆಚ್ಚಿಸಿಕೊಂಡು 1,55,629ಕ್ಕೇರಿದೆ.

ಪ್ರಸಕ್ತ ತ್ರೈಮಾಸಿಕದಲ್ಲಿ ಸುಮಾರು 8,390 ಉದ್ಯೋಗಿಗಳು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಲೋಡ್ ಸ್ಟೋನ್ ನ 891 ಉದ್ಯೋಗಿಗಳು ಸೇರಿದ್ದಾರೆ.

ಎರಡನೇ ತ್ರೈಮಾಸಿಕದಲ್ಲಿ 10,420 ಉದ್ಯೋಗಿಗಳ ಸೇರ್ಪಡೆಗೊಂಡಿದ್ದರು. ಸುಮಾರು 6,522 ಈ ತ್ರೈಮಾಸಿಕದಲ್ಲಿ ಕಂಪನಿ ತೊರೆದಿದ್ದರೆ, ಕಳೆದ ತ್ರೈಮಾಸಿಕದಲ್ಲಿ 7,810 ಉದ್ಯೋಗಿಗಳು ಇನ್ಫಿಗೆ ಗುಡ್ ಬೈ ಹೇಳಿದ್ದರು.

English summary
Infosys is poised to pleasantly surprise its employees too as chief executive officer and managing director S.D. Shibulal said the company plans 6,000-9,000 promotions in the current quarter reports NDTV
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X