ಪಾಕ್ ಸೇನೆಯ ಅಟ್ಟಹಾಸ: ಭಾರತ ಯೋಧರ ಶಿರಚ್ಛೇದ

pak-army-kills-2-indian-soldiers-in-jammu-kashmir-jan-9
ಜಮ್ಮು, ಜ.9: ಹತ್ತು ವರ್ಷಗಳ ಹಿಂದಿನ ಕದನ ವಿರಾಮವನ್ನು ಉಲ್ಲಂಘಿಸಿರುವ ಪಾಕಿಸ್ತಾನದ ಸೇನೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರದೊಳಕ್ಕೆ ನುಗ್ಗಿ ಇಬ್ಬರು ಭಾರತೀಯ ಯೋಧರನ್ನು ಬರ್ಬರವಾಗಿ ಕತ್ತು ಕೊಯ್ದು ಸಾಯಿಸಿದೆ.

ಕ್ರೂರಿ ಪಾಕಿಸ್ತಾನ: ಮೃತ ಯೋಧರನ್ನು BSF ಪಡೆಯ ಹೇಮರಾಜ್ ಮತ್ತು ಸುಧಾಕರ್ ಸಿಂಗ್ ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬ ಯೋಧನ ತಲೆಯನ್ನು ತಮ್ಮೊಂದಿಗೇ ಕೊಂಡೊಯ್ದಿದ್ದಾರೆ. ಇದೇ ಘಟನೆಯಲ್ಲಿ ಇತರ ಇಬ್ಬರು ಯೋಧರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪೂಂಛ್ ಗಡಿ ನಿಯಂತ್ರಣ ರೇಖೆ ಬಳಿಯ ಭಾರತೀಯ ಪ್ರದೇಶದಲ್ಲಿ ಸುಮಾರು 100 ಮೀಟರ್‌ಗಳಷ್ಟು ಅತಿಕ್ರಮಣ ಮಾಡಿರುವ ಪಾಕ್‌ 'ಗಡಿ ಕ್ರಿಯಾ ತಂಡ' (ಬಿಎಟಿ), ಭಾರತೀಯ ಯೋಧರ ಮೇಲೆ ಗುಂಡಿನ ಮಳೆಗರೆದಿದೆ.

'ಅರ್ಧ ಗಂಟೆಗೂ ಹೆಚ್ಚು ಸಮಯ ಪಾಕ್ ಗುಂಡಿನ ಮಳೆಗರೆದಿದೆ. ತರುವಾಯ ಗಡಿ ನಿಯಂತ್ರಣ ರೇಖೆ ನುಸುಳಿ, ಇಬ್ಬರು ಸೈನಿಕರನ್ನು ಬರ್ಬರವಾಗಿ ಹತ್ಯೆ ಮಾಡಿದೆ. ಇದು ಕಾಲುಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನದ ಪ್ರಚೋದನೆಯಾಗಿದೆ' ಎಂದು ಭಾರತದ ಸೇನಾ ಹೇಳಿಕೆ ತಿಳಿಸಿದೆ.

ಪಾಕ್ ಪೈಶಾಚಿಕತೆ ಇದೇ ಮೊದಲಲ್ಲ:
ಪಾಕ್ ಸೈನಿಕರು ಪೈಶಾಚಿಕತೆ ಮೆರೆದಿರುವುದು ಇದೇ ಮೊದಲಲ್ಲ. ಕಾರ್ಗಿಲ್ ಯುದ್ಧದಲ್ಲಿ ಸೆರೆಸಿಕ್ಕಿದ್ದ ಭಾರತೀಯ ಯೋಧ ಸೌರಭ್ ಕಾಲಿಯಾ ಅವರನ್ನು ಚಿತ್ರ ಹಿಂಸೆ ಮಾಡಿ ಕೊಂದು ಹಾಕಿದ್ದರು. ಪಾಕ್ ಸೈನಿಕರು ಕಾಲಿಯಾರ ಕಣ್ಣು ಗುಡ್ಡೆ ಕಿತ್ತು ಹಾಕಿದ್ದರು. ಮೈಮೇಲೆಲ್ಲ ಸಿಗರೇಟಿನಿಂದ ಸುಟ್ಟಿದ್ದರು. ಅವರ ಮರ್ಮಾಂಗವನ್ನೂ ಕತ್ತರಿಸಿದ್ದರು. ಈ ಪರಿಯ ಚಿತ್ರಹಿಂಸೆಗೆ ಎದೆಯೊಡೆದುಕೊಂಡಿದ್ದ ಕಾಲಿಯಾ ತಂದೆ, ಮಗನ ಆತ್ಮಕ್ಕೆ ಶಾಂತಿ ದೊರಕಿಸಲು ಇಂದಿಗೂ ಹೋರಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+