ಪೈಸೆಗಳ ಲೆಕ್ಕದಲ್ಲಿ ರೈಲು ಪ್ರಯಾಣದ ಏರಿಕೆ

Railway Fare hike in 10 year
ನವದೆಹಲಿ, ಜ.9: ಪೆಟ್ರೋಲ್, ಡೀಸೆಲ್, ಎಲ್ ಪಿಜಿ, ವಿಮಾನದರ, ತೆರಿಗೆ ಹೆಚ್ಚಳದ ನಂತರ ಯುಪಿಎ ಸರ್ಕಾರ ರೈಲ್ವೆ ದರಗಳನ್ನು ಏರಿಕೆ ಮಾಡಿದೆ.

ಜ.21ರ ಮಧ್ಯರಾತ್ರಿಯಿಂದ ನೂತನ ದರಗಳು ಜಾರಿಗೆ ಬರಲಿದೆ. 10 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್ ದರಗಳನ್ನು ಏರಿಸಲಾಗುತ್ತಿದೆ. ಒಟ್ಟಾರೆ ಶೇ 20 ರಷ್ಟು ಪ್ರಯಾಣದಲ್ಲಿ ಏರಿಕೆ ಕಂಡು ಬರಲಿದೆ ಎಂದು ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಬುಧವಾರ(ಜ.9) ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೈಲ್ವೆ ಇಲಾಖೆ ಖರ್ಚು ವೆಚ್ಚ ಹೆಚ್ಚಾಗಿದೆ. ನಿರ್ವಹಣಾ ವೆಚ್ಚ ತೂಗಿಸಲು ಬೆಲೆ ಏರಿಕೆ ಅನಿವಾರ್ಯ. ಬಜೆಟ್ ಗೂ ಮೊದಲು ಬೆಲೆ ಏರಿಕೆ ಮಾಡುತ್ತಿರುವುದರಿಂದ ಬಜೆಟ್ ಸಂದರ್ಭದಲ್ಲಿ ಮತ್ತೊಮ್ಮೆ ಬೆಲೆ ಏರಿಕೆ ಭೀತಿ ಬೇಡ ಎಂದು ಸಿಹಿ ಸುದ್ದಿಯನ್ನು ಸಚಿವ ಬನ್ಸಾಲ್ ನೀಡಿದರು.

ರೈಲ್ವೆ ದರ ಏರಿಕೆ ವಿವರ:
* ಎಸಿ ಫಸ್ಟ್ ಕ್ಲಾಸ್ ಎಕ್ಸಿಕ್ಯೂಟಿವ್ ಕ್ಲಾಸ್ : ಪ್ರತಿ ಕಿ.ಮೀಗೆ 30 ಪೈಸೆ(ಈ ಹಿಂದಿನ ಏರಿಕೆ) + 10 ಪೈಸೆ (ಈಗಿನ ಏರಿಕೆ)
* ಎಸಿ 2 ಟೈರ್ : ಪ್ರತಿ ಕಿ.ಮೀ ಗೆ 10 ಪೈಸೆ + 6 ಪೈಸೆ
* ಎಸಿ ಚೇರ್ ಕಾರು : 10 ಪೈಸೆ ಪ್ರತಿ ಕಿ.ಮೀಗೆ
* ಸೆಕೆಂಡ್ ಕ್ಲಾಸ್ ಮೇಲ್ ಎಕ್ಸ್ ಪ್ರೆಸ್ ರೈಲುಗಳು : 4 ಪೈಸೆ ಪ್ರತಿ ಕಿ.ಮೀಗೆ
* ಸೆಕೆಂಡ್ ಕ್ಲಾಸ್ ಸಾಮಾನ್ಯ ಪ್ರಯಾಣದರ(Non Suburban) 3 ಪೈಸೆ ಕಿ.ಮೀಗೆ
* ಸೆಕೆಂಡ್ ಕ್ಲಾಸ್ ಸಾಮಾನ್ಯ(Suburban) : 2 ಪೈಸೆ ಪ್ರತಿ ಕಿ.ಮೀಗೆ ಏರಿಕೆ

ನೂತನ ದರ ಜಾರಿಗೊಂಡ ಮೇಲೆ ಸುಮಾರು 6,600 ಕೋಟಿ ರು ಹೆಚ್ಚಿನ ಆದಾಯ ಸರ್ಕಾರದ ಬೊಕ್ಕಸಕ್ಕೆ ಬೀಳುವ ನಿರೀಕ್ಷೆಯನ್ನು ರೈಲ್ವೆ ಇಲಾಖೆ ಹೊಂದಿದೆ. 2010-11ರಲ್ಲಿ ಸುಮಾರು 20,000 ಕೋಟಿ ರು ನಷ್ಟವಾಗಿದೆ. ಪ್ರಸಕ್ತ ವರ್ಷ 25,000 ಕೋಟಿ ರು ನಷ್ಟದ ನಿರೀಕ್ಷೆಯಿದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+