ನೋಕಿಯಾ 3000 ಕೋಟಿ ತೆರಿಗೆ ವಂಚನೆ, ಐಟಿ ದಾಳಿ

I-T raid at Nokia's Chennai factory
ಚೆನ್ನೈ, ಜ.9: ಫಿನ್ಲೆಂಡ್ ಮೂಲದ ನೋಕಿಯಾ ಸಂಸ್ಥೆಯ ಭಾರತ ವಿಭಾಗ ಭಾರಿ ತೆರಿಗೆ ವಂಚನೆ ಆರೋಪಕ್ಕೆ ಸಿಲುಕಿದೆ. ಆದಾಯ ತೆರಿಗೆ ಅಧಿಕಾರಿಗಳು ಇಲ್ಲಿನ ಶ್ರೀಪೆರಂಬುದೂರಿನ ನೋಕಿಯಾ ಕಂಪನಿ ಮೇಲೆ ಬುಧವಾರ (ಜ.9) ದಾಳಿ ನಡೆಸಿದ್ದು, 3000 ಕೋಟಿ ರು.ಗೂ ಅಧಿಕ ತೆರಿಗೆ ವಂಚನೆ ಬೆಳಕಿಗೆ ಬಂದಿದೆ.

ನೋಕಿಯಾ ಸಂಸ್ಥೆಯಿಂದ ಸುಮಾರು 2,500 ಕೋಟಿ ರು.ನಿಂದ 3,000 ಕೋಟಿ ರು.ಗೂ ಅಧಿಕ ತೆರಿಗೆ ವಂಚನೆ ಎಸಗಿರುವುದು ಕಂಡುಬಂದಿದೆ, ತನಿಖೆ ಮುಂದುವರೆದಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಈ ನಡುವೆ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ನೋಕಿಯಾ ಸಂಸ್ಥೆ ವಕ್ತಾರರು, 'ತೆರಿಗೆ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ತನಿಖೆಗೆ ನಮ್ಮ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ಅಗತ್ಯ ಮಾಹಿತಿ ಸಂಗ್ರಹಿಸಿದ್ದಾರೆ' ಎಂದಿದ್ದಾರೆ.

ಆದರೆ, ನೋಕಿಯಾ ಸಂಸ್ಥೆ ಮೊಬೈಲ್ ಫೋನ್ ಉತ್ಪಾದನಾ ಘಟಕದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದು ಕುತೂಹಲಕಾರಿಯಾಗಿದೆ. ಸುಮಾರು 24 ಗಂಟೆಗಳ ಕಾಲ ಘಟಕದ ಪರಿಶೀಲನೆ ನಡೆಸಲಾಗುತ್ತಿದೆ. ಮಂಗಳವಾರದಿಂದಲೇ ಐಟಿ ಅಧಿಕಾರಿಗಳು ಘಟಕದತ್ತ ಸುಳಿದಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ತೆರಿಗೆ ವಂಚನೆ ಬಗ್ಗೆ ವಿವರಣೆ ನೀಡುವಂತೆ ನೋಕಿಯಾ ಇಂಡಿಯಾ ಸಂಸ್ಥೆ ಅಧಿಕಾರಿಗಳು ಜ.16ರ ತನಕ ಗಡುವು ನೀಡಿ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ತೆರಿಗೆ ವಂಚಕರ ಮೇಲೆ ಕಣ್ಣಿಟ್ಟಿರುವ ಕೇಂದ್ರ ಸರ್ಕಾರ, ಏಪ್ರಿಲ್-ನವೆಂಬರ್ 2012ರ ಅವಧಿಯಲ್ಲಿ ಸುಮಾರು 3.7 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ. 8.7 ಲಕ್ಷ ಕೋಟಿ ರು ಸಂಗ್ರಹದ ನಿರೀಕ್ಷೆ ಹೊಂದಿದೆ.

ಆದರೆ, 2012ರ ಅವಧಿ ಶೇ 80ರಷ್ಟು ಟಾರ್ಗೆಟ್ ತಪ್ಪಿಸಿಕೊಂಡ ಐಟಿ ಇಲಾಖೆಗೆ 4.13 ಲಕ್ಷ ಕೋಟಿ ರು ವಾರ್ಷಿಕ ಖೋತಾ ಆಗಿದೆ.

ನೋಕಿಯಾ ಸಂಸ್ಥೆ ಭಾರತ ವಿಭಾಗ ಫಿನ್ಲೆಂಡ್ ನಲ್ಲಿರುವ ತನ್ನ ಕೇಂದ್ರ ಕಚೇರಿಗೆ ಸಲ್ಲಿಸುವ ಹಣಕ್ಕೆ ಯಾವುದೇ ತೆರಿಗೆ ಪಾವತಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಕಳೆದ ಏಳು ವರ್ಷದಿಂದ ಈ ರೀತಿ ವಂಚನೆ ನಡೆದಿದೆ. ಅಂದಾಜು ಮೊತ್ತ 3,000 ಕೋಟಿ ರು ವಂಚನೆ ಕಂಡು ಬಂದಿದೆ ಎಂದು ಐಟಿ ಅಧಿಕಾರಿಗಳು ಹೇಳಿದ್ದಾರೆ.

ಶ್ರೀಪೆರಂಬುದೂರು ಘಟಕದಲ್ಲಿ ಬರೀ ಸಮೀಕ್ಷೆ ನಡೆಸಲಾಯಿತು. ಐಟಿ ಇಲಾಖೆ 'ಸರ್ಚ್' ಹಾಗೂ 'ಸರ್ವೆ' ಬಗ್ಗೆ ತಿಳಿಸಬೇಕು. ಕಚೇರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ದಾಖಲೆಗಳನ್ನು ಜಪ್ತಿ ಮಾಡಲಾಗುತ್ತದೆ. ಆದರೆ, ಸಮೀಕ್ಷೆ ಸಮಯದಲ್ಲಿ ಮಾಹಿತಿ ಸಂಗ್ರಹ ಕಾರ್ಯ ನಡೆಯಲಾಗುತ್ತದೆ ಎಂದಿದ್ದಾರೆ.

1995 ರಿಂದ ಭಾರತದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಪ್ರಮುಖ ಸಂಸ್ಥೆಯಾಗಿ ಬೆಳೆದಿರುವ ನೋಕಿಯಾ ಸಂಸ್ಥೆ ಮಾರುಕಟ್ಟೆಯಲ್ಲಿ ಶೇ 22 ರಷ್ಟು ಪಾಲು ಹೊಂದಿದೆ. ಲಭ್ಯ ಮಾಹಿತಿ ಪ್ರಕಾರ ಆದಾಯ ತೆರಿಗೆ ಅಧಿಕಾರಿಗಳ ಮುಂದಿನ ಟಾರ್ಗೆಟ್ ಕ್ಯಾಡ್ ಬರಿ ಇಂಡಿಯಾ ಚಾಕಲೇಟ್ ಕಂಪನಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+