ದಿಲ್ಲಿ ರೇಪ್: ಬಾಲಕ ಪಿಶಾಚಿಯಂತೆ ಹುರಿದುಮುಕ್ಕಿದ್ದ

23 ವರ್ಷದ ಫಿಸಿಯೋಥೆರಪಿಸ್ಟ್ ಅಮಾನತ್ @ನಿರ್ಭಯಾ @ದಾಮಿನಿ ಮೇಲೆ ಆ ಅಪ್ರಾಪ್ತ ವಯಸ್ಸಿನ ರೇಪಿಸ್ಟ್ ಎರಡು ಬಾರಿ ಅಮಾನುಷವಾಗಿ ರೇಪ್ ಮಾಡಿದ್ದ ಎಂದು ಚಾರ್ಜ್ ಷೀಟಿನಲ್ಲಿ ಪೊಲೀಸರು ದಾಖಲಿಸಿದ್ದಾರೆ.
ಚಾರ್ಜ್ ಷೀಟಿನಲ್ಲಿರುವ ವಿವರ ಹೀಗಿದೆ:
ಕಾಮುಕರ ಕೈಗೆ ಸಿಕ್ಕಿ ನಲುಗಿದ ಬಾಧಿತಳು ಸ್ವಲ್ಪ ಹೊತ್ತಿನಲ್ಲೇ ಪ್ರಜ್ಞೆ ತಪ್ಪಿದ್ದಳು. ಆಗ ಆ ಕಿರಿಯ ಕಿರಾತಕ ಅಕ್ಷರಶಃ ಅವಳ ಮೇಲೆ ಪೈಶಾಚಿಕ ಹಲ್ಲೆ ನಡೆಸಿದ್ದಾನೆ. OMG! ಎರಡು ಬಾರಿ ಅತ್ಯಾಚಾರವೆಸಗಿ, ಬರೀಗೈಯಿಂದ ಅವಳ ಕರುಳನ್ನು ಹೊರಗೆಳೆದಿದ್ದಾನೆ.
ಅಷ್ಟಕ್ಕೇ ತೃಪ್ತನಾಗದ ರಾಕ್ಷಸ ಅವಳನ್ನು ಸಂಪೂರ್ಣವಾಗಿ ನಗ್ನಗೊಳಿಸಿ, ಬಸ್ಸಿನಿಂದ ಕೆಳಗೆ ತಳ್ಳುವಂತೆ ಇತರೆ ಕಿರಾತಕರಿಗೆ ಸೂಚಿಸಿದ್ದಾನೆ. ಸಾಲದು ಅಂತ ಕೆಳಗೆ ತಳ್ಳಿದ ನಂತರ ಅವಳ ಮೇಲೆ ಬಸ್ಸನ್ನು ಓಡಿಸಿ, ಅವಳನ್ನು ಸಾಯಿಸಬೇಕೆಂದೂ ಹೇಳಿದ್ದಾನೆ.
ಇದಕ್ಕೆ ಪ್ರೇರೇಪಣೆ ನೀಡಿದ್ದು ಮತ್ತೊಬ್ಬ ಪಿಶಾಚಿ, ಬಸ್ ಚಾಲಕ ರಾಮ್ ಸಿಂಗ್. ಮೊದಲು ರಾಮ್ ಸಿಂಗನೇ ರೇಪ್ ಮಾಡಿದ್ದು. ನಂತರ, ಅಕ್ಷಯ್ ಎಂಬುವವನ ಸರದಿ. ಕಿರಿಯ ಆರೋಪಿ ಕಾನೂನಿನ ಪ್ರಕಾರ ಪ್ರೌಢ ಎಸಿಸಿಕೊಳ್ಳಲು ಇನ್ನೂ 6 ತಿಂಗಳು ದೊಡ್ಡವನಾಗಬೇಕು. ಈ ಮಧ್ಯೆ, ಪಾತಕ ಕೃತ್ಯದಲ್ಲಿ ಪೊಲೀಸರಿಗೆ ಬೇಕಾದ ಮಹತ್ವದ ಆಯುಧ ರಾಡ್ ಇನ್ನೂ ಸಿಕ್ಕಿಲ್ಲ.












Click it and Unblock the Notifications