ಮುಖೇಶ್ ವಿಶ್ವದ 18ನೇ ಅತಿದೊಡ್ಡ ಶ್ರೀಮಂತ

Mukesh Ambani 18th richest in world: Billionaires Index
ಬೆಂಗಳೂರು, ಜ.3: ರಿಲಯನ್ಸ್ ಸಂಸ್ಥೆ ಒಡೆಯ ಮುಖೇಶ್ ಅಂಬಾನಿ ವಿಶ್ವದ 18ನೇ ಅತಿದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ.

ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನ ವಿಶ್ವದ 100 ಜನ ಶ್ರೀಮಂತರ ಶ್ರೇಯಾಂಕದಲ್ಲಿ ಮುಖೇಶ್ ಗೆ 18ನೇ ಸ್ಥಾನ ಸಿಕ್ಕಿದೆ.

ಮೆಕ್ಸಿಕೋದ ಟೆಲಿಕಮ್ಯೂನಿಕೇಷನ್ ದಿಗ್ಗಜ ಕಾರ್ಲೊಸ್ ಸ್ಲಿಮ್ ಮತ್ತೊಮ್ಮೆ ವಿಶ್ವದ ಅತಿದೊಡ್ಡ ಶ್ರೀಮಂತ ಉದ್ಯಮಿಯಾಗಿ ಆಯ್ಕೆಯಾಗಿದ್ದಾರೆ. ಸುಮಾರು 70 ಬಿಲಿಯನ್ ಡಾಲರ್ ಖಾಸಗಿ ಆಸ್ತಿ ಸ್ಲಿಮ್ ಹೆಸರಿನಲ್ಲಿದೆ.

55 ವರ್ಷದ ರಿಲಯನ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿರ್ದೇಶಕ, ಚೇರ್ಮನ್ ಅಂಬಾನಿ ಸತತವಾಗಿ 6 ವರ್ಷಗಳ ಕಾಲ ಶ್ರೇಯಾಂಕದಲ್ಲಿ ಉತ್ತಮ ಪ್ರಗತಿ ಹೊಂದಿದ್ದಾರೆ. 19ನೇ ಸ್ಥಾನದಿಂದ 18ನೇ ಸ್ಥಾನಕ್ಕೇರಿರುವ ಮುಖೇಶ್ ವೈಯಕ್ತಿಕ ಆಸ್ತಿ ಮೊತ್ತ 21 ಬಿಲಿಯನ್ ಡಾಲರ್ ನಿಂದ 24.7 ಬಿಲಿಯನ್ ಡಾಲರ್ ಗೆ ಏರಿದೆ ಎಂದು ಬ್ಲೂಮ್ ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿ ಹೇಳುತ್ತಿದೆ.

ವಿಶ್ವದ ಮೊದಲ 100 ಬಿಲಿಯನೇರ್ ಗಳು 2012ರಲ್ಲಿ ಇನ್ನಷ್ಟು ಆಸ್ತಿ ಮೊತ್ತವನ್ನು ಹೆಚ್ಚಿಸಿಕೊಂಡಿದ್ದಾರೆ ಶೇ 15 ರಷ್ಟು ಆಸ್ತಿ ಗಳಿಕೆ ಅಧಿಕಗೊಂಡಿದ್ದು ಒಟ್ಟಾರೆ ಎಲ್ಲರ ಅಸ್ತಿ 1.81 ಟ್ರಿಲಿಯನ್ ಡಾಲರ್ ದಾಟುತ್ತದೆ ಎಂದು ಬಿಬಿಐ ಹೇಳಿದೆ.

ಸ್ಲಿಮ್ ನಂತರದ ಸ್ಥಾನದಲ್ಲಿ ಮೈಕ್ರೋಸಾಫ್ಟ್ ನ ಸ್ಥಾಪಕ ಬಿಲ್ ಗೇಟ್ಸ್, ಫ್ಯಾಷನ್ ರೀಟೈಲರ್ ಜರಾ, ಅಮಾನಿಸೊ ಒರ್ಟೆಗಾ ಇದ್ದಾರೆ. ಇವರುಗಳ ಆಸ್ತಿ ಮೊತ್ತ 60 ಬಿಲಿಯನ್ ಡಾಲರ್ ಆಸುಪಾಸಿನಲ್ಲಿದೆ.

ವಿಶ್ವಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಆದರೆ, 5 ಬಿಲಿಯನ್ ಡಾಲರ್ ಹೆಚ್ಚಿನ ಸಂಪಾದನೆ ಮಾಡಿದ್ದಾರೆ. ಸಂಪಾದನೆ ಜೊತೆಗೆ ಹೆಚ್ಚಿನ ಮೊತ್ತವನ್ನು ದಾನ ಧರ್ಮದಲ್ಲಿ ತೊಡಗಿಸಿದ್ದಾರೆ. IKEA ಸ್ಥಾಪಕ ಇಂಗ್ವರ್ ಕಾಂಪ್ರಾಡ್ ಶೇ 16.6 ಆಸ್ತಿ ಹೆಚ್ಚಿಸಿಕೊಂಡು 40 ಬಿಲಿಯನ್ ಡಾಲರ್ ನೊಂದಿಗೆ 5ನೇ ಸ್ಥಾನದಲ್ಲಿದ್ದಾರೆ ಎಂದು ಬಿಬಿಐ ಹೇಳಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+