ಹೊಸ ವರ್ಷಾಚರಣೆ: ಯುವತಿಯ ರೇಪ್, ಟೆಕ್ಕಿ ಬಂಧನ

ಇನ್ನು ಹೊಸ ವರ್ಷದ ಆರಂಭದ ದಿನದಂದೇ ಪಾರ್ಟಿ ಹೆಸರಿನಲ್ಲಿ ಹದಿಹರಯದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅತ್ಯಾಚಾರವೆಸಗಿದ ಆರೋಪದ ಮೇಲೆ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರ ಒಬ್ಬ ಟೆಕ್ಕಿ ಮತ್ತು ಎಚ್ಆರ್ ವಿಭಾಗದ ಅಧಿಕಾರಿಯನ್ನು ಬಂಧಿಸಿ, ತಿಹಾರ್ ಜೈಲಿಗೆ ಅಟ್ಟಲಾಗಿದೆ.
ದಕ್ಷಿಣ ದೆಹಲಿಯ ಸಫ್ದರ್ ಜಂಗ್ ಎನ್ ಕ್ಲೇವ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇದರಲ್ಲಿ ಹುಡುಗಿಯ ತಪ್ಪು ಎಷ್ಟಿದೆಯೋ ತಿಳಿಯದು. ಆದರೆ ಹೊಸ ವರ್ಷದ ಮೋಜು ಮಸ್ತಿಗೆಂದು ಯುವತಿಯನ್ನು ಆರೋಪಿಗಳಿಬ್ಬರೂ ಪಾರ್ಟಿಗೆ ಆಮಂತ್ರಿಸಿದ್ದಾರೆ. ಆ ಮೇಲೆ ಪಾರ್ಟಿಯಲ್ಲಿ ಮತ್ತುಬರಿಸುವ ಔಷಧ ನೀಡಿ, ಆಕೆಯ ಪ್ರಜ್ಞೆ ತಪ್ಪಿಸಿ, ಕಾಮಲಾಲಸೆ ತೀರಿಸಿಕೊಂಡಿದ್ದಾರೆ.
ಇಷ್ಟಕ್ಕೂ ಹುಡುಗಿ ಆರೋಪಿಗಳಿಗೆ ಹೇಗೆ ಸಿಕ್ಕಿದಳಪ್ಪಾ, ಅವರೇನು ಗೆಳೆಯರಾ? ಎಂದು ಪರಿಶೀಲಿಸಿದಾಗ ... ಫೇಸ್ ಬುಕ್ ಮೂಲಕ ಪರಿಚಯವಾಗಿದ್ದೇ ತಡ ಪಾರ್ಟಿಗೆ ಕರೆದಿದ್ದ ಯುವಕರ ಹಿಂದೆ 17 ವರ್ಷದ ಹುಡುಗಿ ನಡೆದು ಹೋಗಿದ್ದಳು.












Click it and Unblock the Notifications