ಆರಂಭದಲ್ಲೇ ಮೋದಿಗೆ 'ಸುಪ್ರೀಂ' ವಿಘ್ನ; ಲೋಕಾಗೆ ಅಸ್ತು

huge-setback-for-modi-sc-upholds-lokayukta-appointment
ಹೊಸದಿಲ್ಲಿ , ಜ.2: ಹೊಸ ಹುಮ್ಮಸ್ಸಿನೊಂದಿಗೆ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ ನರೇಂದ್ರ ಮೋದಿಗೆ ವರ್ಷಾರಂಭದಲ್ಲಿ ಕಹಿಗುಳಿಗೆ ಸಿಕ್ಕಿದೆ. ಗುಜರಾತಿನಲ್ಲಿ ಲೋಕಾಯುಕ್ತ ನೇಮಕವು ಸಂವಿಧಾನಬದ್ಧವಾಗಿದೆ ಎಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ಕಳೆದ 8 ವರ್ಷಗಳಿಂದ ಖಾಲಿಬಿದ್ದಿರುವ ಗುಜರಾತ್ ಲೋಕಾಯುಕ್ತ ಸ್ಥಾನಕ್ಕೆ 2011ರ ಆಗಸ್ಟ್ 25ರಂದು ರಾಜ್ಯಪಾಲೆ ಬೇನಿವಾಲ್ ಅವರು ನ್ಯಾ ಮೆಹ್ತಾರನ್ನು ನೇಮಿಸಿದ್ದರು. (ಕರ್ನಾಟಕದಲ್ಲೂ ಲೋಕಾಯುಕ್ತ ಹುದ್ದೆ ಖಾಲಿ ಬಿದ್ದಿರುವ ನೆನಪು!)

'ಗುಜರಾತ್ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಾಧೀಶ ಆರ್ ಎ ಮೆಹ್ತಾ ನೇಮಕಾತಿ ಮಾಡಿರುವುದು ಸರಿಯಷ್ಟೇ. ಆದರೆ ಸರಕಾರದೊಂದಿಗೆ ಸಮಾಲೋಚಿಸದೆ ರಾಜ್ಯಪಾಲೆ ಕಮಲಾ ಬೇನಿವಾಲ್ ಅವರು ಈ ನೇಮಕಾತಿ ಮಾಡಿದ್ದಾರೆ. ಹಾಗಾಗಿ ತನಗಿದು ಸಮ್ಮತವಲ್ಲ' ಎಂದು ರಾಜ್ಯ ಸರಕಾರ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ನ್ಯಾಯಮೂರ್ತಿಗಳಾದ ಬಿಎಸ್ ಚೌಹಾಣ್ ಹಾಗೂ ಎಫ್ ಎಂ ಇಬ್ರಾಹೀಂ ಕಲೀಫುಲ್ಲಾ ಅವರ ನ್ಯಾಯಪೀಠವು ಗುಜರಾತ್ ಸರಕಾರದ ಕಿವಿಹಿಂಡುತ್ತಾ, ನ್ಯಾ ಮೆಹ್ತಾ ನೇಮಕಾತಿ ಸಂಬಂಧ ರಾಜ್ಯಪಾಲರ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಗುಜರಾತ್ ಹೈಕೋರ್ಟ್ ಆದೇಶ (ಕಳೆದ ಜನವರಿಯಲ್ಲಿ) ಸರಿಯಿದೆ ಎಂದು ಇಂದು ತೀರ್ಪು ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+