ಬೆಂಗಳೂರು : ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

Posted By:
Subscribe to Oneindia Kannada
JDS releases Candidates list
ಬೆಂಗಳೂರು, ಜ.1: ಬೇರೆ ಎಲ್ಲಾ ಪಕ್ಷಗಳಿಗಿಂತ ವಿಧಾನಸಭೆ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಸಿರುವ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡತೊಡಗಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಹೊರ ಹಾಕಿದೆ.

ಈ ಬಾರಿ ಬೆಂಗಳೂರಿನಲ್ಲಿ ಗೆಲ್ಲುವ ಕುದುರೆಗಳಿಗೆ ಮಾತ್ರ ಟಿಕೆಟ್ ನೀಡಲು ಜೆಡಿಎಸ್ ತೀರ್ಮಾನಿಸಿದೆ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ ಕನಿಷ್ಠ 10 ಸ್ಥಾನವನ್ನು ಗೆಲ್ಲುವ ಭರವಸೆಯನ್ನು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವ್ಯಕ್ತಪಡಿಸಿದ್ದಾರೆ.

ಕ್ರಿಮಿನಲ್ ಹಿನ್ನೆಲೆ, ರಿಯಲ್ ಎಸ್ಟೇಟ್, ಗಣಿ ಉದ್ಯಮಿಗಳಿಗೆ ಟಿಕೆಟ್ ನೀಡದಿರಲು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ. ಯಾವುದೇ ಲಾಬಿ ಹಾಗೂ ಒತ್ತಡಕ್ಕೆ ಮಣಿಯದೆ ಕ್ಷೇತ್ರದಲ್ಲಿ ಜನಸಂಪರ್ಕ ಹೊಂದಿರುವ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಪಕ್ಷದ ಸಂಸದೀಯ ಮಂಡಳಿ ಸೂಚಿಸಿದೆ.

ಅಭ್ಯರ್ಥಿಗಳ ಪಟ್ಟಿ ಇಂತಿದೆ: [ಪಟ್ಟಿ ಅಧಿಕೃತವಾಗಿ ಇನ್ನೂ ಬಿಡುಗಡೆಯಾಗಬೇಕಿದ್ದು, ಕೊನೆ ಕ್ಷಣದ ಬದಲಾವಣೆಗೆ ಒಳಪಟ್ಟಿದೆ]

ಸಂಖ್ಯೆ ಕ್ಷೇತ್ರ ಅಭ್ಯರ್ಥಿ
1 ಬಸವನಗುಡಿ ಬಾಗೇಗೌಡ
2 ಪದ್ಮನಾಭನಗರ ಎಂಆರ್ ವಿ ಪ್ರಸಾದ್
3 ಚಾಮರಾಜಪೇಟೆ ಜಮೀರ್ ಅಹಮ್ಮದ್ ಖಾನ್
4 ಯಶವಂತಪುರ ಜವರಾಯಿ ಗೌಡ
5 ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ
6 ದಾಸರಹಳ್ಳಿ ಅಂದಾನಪ್ಪ
7 ಗಾಂಧಿನಗರ ಸುಭಾಷ್ ಭರಣಿ
8 ಮಲ್ಲೇಶ್ವರ ಅಶೋಕ್ ಕುಮಾರ್
9 ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ
10 ರಾಜರಾಜೇಶ್ವರಿ ನಗರ ಕೆಟಿ ಗೋವಿಂದೇಗೌಡ/ ನಾರಾಯಣ ಸ್ವಾಮಿ
11 ಹೆಬ್ಬಾಳ ಅಬ್ದುಲ್ ಅಜೀಂ/ ಆರ್ ಕೃಷ್ಣಪ್ಪ/ ಮುನಿಕೃಷ್ಣ
12 ಬ್ಯಾಟರಾಯನಪುರ ಹನುಮಂತೇಗೌಡ/ ಜಯಗೋಪಾಲ್ ಗೌಡ
13 ಯಲಹಂಕ ಚಂದ್ರಣ್ಣ
14 ಸರ್ವಜ್ಞ ನಗರ ಪದ್ಮನಾಭರೆಡ್ಡಿ
15 ರಾಜಾಜಿನಗರ ತಿಮ್ಮೇಗೌಡ/ರಮೇಶ್ ಬಾಬು
16 ವಿಜಯನಗರ ಅಬ್ದುಲ್ ಅಜೀಂ
17 ಮಹದೇವಪುರ ರಾಮಾಂಜನೇಯ
18 ಗೋವಿಂದರಾಜನಗರ ಟಿಎಂ ರಂಗೇಗೌಡ

ಉಳಿದಂತೆ ಚಿಕ್ಕಪೇಟೆ, ಕೆ.ಆರ್ ಪುರಂ, ಜಯನಗರ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಆನೇಕಲ್, ಶಿವಾಜಿನಗರ, ಬೆಂಗಳೂರು ದಕ್ಷಿಣ, ಶಾಂತಿನಗರ, ಸರ್ ಸಿವಿ.ರಾಮನ್ ನಗರ ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಅಂತಿಮಗೊಂಡಿಲ್ಲ ಎಂದು ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
JDS releases first list of probable candidates for upcoming assembly elections in Karnataka. JDS is contesting in all 28 assembly constituencies in Bangalore, Bangalore Rural and hope to win in at least 10 constituencies.
Please Wait while comments are loading...