ಕಿಂಗ್ ಫಿಷರ್ ವಿಮಾನ ಹಾರಾಟ ಲೈಸನ್ಸ್ ರದ್ದು

Vijay Mallya
ನವದೆಹಲಿ, ಜ.1: ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಏರ್ ಲೈನ್ಸ್ ಹಾರಾಟ ಲೈಸನ್ಸ್ ಅವಧಿ ಕೊನೆಗೊಂಡಿದೆ. ಮತ್ತೆ ಹಾರಾಟ ಮಾಡಲು ಎರಡು ವರ್ಷದ ಅವಧಿಗೆ ಲೈಸನ್ಸ್ ನವೀಕರಿಸಬೇಕಾಗುತ್ತದೆ. ವಿಜಯ್ ಮಲ್ಯ ಅವರಿಗೆ ಹೊಸ ವರ್ಷದ ಆರಂಭದಲ್ಲಿ ಹೊಡೆತ ಬಿದ್ದಿದೆ.

ಈ ನಡುವೆ ಡಿಜಿಸಿಎ(Directorate General Of Civil Aviation) ಹಾರಾಟದ ಅನುಮತಿಯನ್ನು ರದ್ದುಗೊಳಿಸಿದೆ. ಆದರೆ, ಇದರಿಂದ ಯಾವುದೇ ತೊಂದರೆ ಇಲ್ಲ. ಮತ್ತೆ ನವೀಕರಿಸಲಾಗುವುದು ಎಂದು ಕಿಂಗ್ ಫಿಷರ್ ಸಂಸ್ಥೆ ಧೈರ್ಯವಾಗಿ ಹೇಳಿಕೊಂಡಿದೆ.

ಮಂಗಳವಾರ ಕಿಂಗ್ ಫಿಷರ್ ಸಂಸ್ಥೆ ಷೇರುಗಳು ಇಳಿಮುಖ ಕಂಡಿದೆ. ಬಿಎಸ್ ಇನಲ್ಲಿ ಮಧ್ಯಾಹ್ನ 12.20ರ ವೇಳೆಗೆ ಶೇ 0.57 ರಷ್ಟು ಇಳಿಕೆ ಕಂಡು 14.35 ರು ನಷ್ಟಿದೆ. ಇದೇ ವೇಳೆಗೆ ಎನ್ ಎಸ್ ಇನಲ್ಲಿ ಶೇ 0.55 ರಷ್ಟು ಕುಸಿತ ಕಂಡು 14.35ರು ಗೆ ಇಳಿದಿದೆ.

ಕಿಂಗ್ ಫಿಷರ್ ಪುನರ್ ಹಾರಾಟಕ್ಕೆ ಬೇಕಾದ ಕಾರ್ಯತಂತ್ರವನ್ನು DGCAಗೆ ಈಗಾಗಲೇ ಕೊಡಲಾಗಿದೆ. ಲೈಸನ್ಸ್ ನವೀಕರಣಗೊಳ್ಳುವ ಭರವಸೆ ಇದೆ ಎಂದು ಕಿಂಗ್ ಫಿಷರ್ ವಕ್ತಾರರು ಹೇಳಿದ್ದಾರೆ.

ಆದರೆ, ಕಾರ್ಯತಂತ್ರ ಯೋಜನೆಯಲ್ಲಿ ಯುಬಿ ಸಮೂಹ ನೀಡಲಿರುವ 652 ಕೋಟಿ ರು ಬಗ್ಗೆ ಡಿಜಿಸಿಎ ಹಾಗೂ ನಾಗರೀಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಪ್ರಶ್ನಿಸಿದ್ದಾರೆ.

ದೇಶದ ವಿವಿಧ ವಿಮಾನ ನಿಲ್ದಾಣಗಳು, ಇಂಧನ ಸಂಸ್ಥೆಗಳಿಗೆ ನೀಡಬೇಕಿರುವ ಬಾಕಿ ಮೊತ್ತದ ಬಗ್ಗೆ ಕೂಡಾ ಸ್ಪಷ್ಟನೆ ನೀಡಿಲ್ಲ.

ಈಗ ಮತ್ತೊಮ್ಮೆ ಬ್ಯಾಂಕ್, ವಿಮಾನ ನಿಲ್ದಾಣ ಸಂಸ್ಥೆ, ತೆರಿಗೆ ಸಂಸ್ಥೆ ಹಾಗೂ ತನ್ನ ಸಿಬ್ಬಂದಿಗಳಿಗೆ ವಿಜಯ್ ಮಲ್ಯ ಅವರು ಪರಿಸ್ಥಿತಿಯ ಮನವರಿಕೆ ಮಾಡಿಕೊಡಬೇಕಿದೆ.

ಅಕ್ಟೋಬರ್ ನಲ್ಲೇ ಲೈಸನ್ಸ್ ರದ್ದಾಗುವ ಬಗ್ಗೆ ತಿಳಿದಿದ್ದರೂ DGCA ಡಿಸೆಂಬರ್ ತನಕ ಸುಮ್ಮನಿದ್ದದ್ದು ಏಕೆ? ಎಂಬ ಪ್ರಶ್ನೆ ಎದ್ದಿದೆ.

Etihad Airways ಮೊದಲ ಕಂತಿನಲ್ಲಿ ಬರೋಬ್ಬರಿ 3000 ಕೋಟಿ ರೂ.ಗಳನ್ನು KFAನಲ್ಲಿ ಹೂಡಿಕೆ ಮಾಡಲಿದೆ. ಎರಡನೆಯ ಕಂತಿನಲ್ಲಿ ಮತ್ತೂ 1,800 ಕೋಟಿ ರೂ. ತೊಡಗಿಸಲಿದೆ. ಅರ್ಥಾತ್ ಶೇ. 48ರಷ್ಟು ಪಾಲು ಅಂದರೆ 4,8000 ಕೋಟಿ ರೂ.ಗೆ KFA ಭಾಗಶಃ ಮಾರಾಟವಾದಂತಾಗಿದೆ.

ಈ ನಡುವೆ ಕಿಂಗ್ ಫಿಷರ್ ಮೇಲೆ Etihad Airways ಹಿಡಿತ ಹೊಂದುವ ಮೊದಲು ತೆರಿಗೆ ಬಾಕಿ, ಸಾಲ ಬಾಕಿ ಹಿಂಪಡೆಯಲು ಸಾಲ ಕೊಟ್ಟ ಸಂಸ್ಥೆಗಳು ಯೋಜಿಸಿದೆ. ಸುಮಾರು 7,524 ಕೋಟಿ ರು ಸಾಲದ ಹೊರೆ ಹೊಂದಿರುವ ಕಿಂಗ್ ಫಿಷರ್ ಸಂಸ್ಥೆ ಸುಮಾರು 8000 ಕೋಟಿ ರು ನಷ್ಟು ನಷ್ಟ ಅನುಭವಿಸಿದೆ.

17 ಬ್ಯಾಂಕ್ ಗಳಿಂದ ಸಾಲ ಪಡೆದಿದೆ. ಎಸ್ ಬಿಐನಿಂದಲೇ ಅರ್ಧದಷ್ಟು ಸಾಲದ ಮೊತ್ತ ವಿಜಯ್ ಮಲ್ಯ ಪಡೆದಿದ್ದಾರೆ.

ಪೈಲಟ್ ಗಳ ಮುಷ್ಕರ, ವಿಮಾನ ಹಾರಾಟ ರದ್ದು, ವಿಮಾನಯಾನ ಸಂಸ್ಥೆ ಉಳಿಸಲು ಇತರೆ ಆಸ್ತಿ ಮಾರಾಟ ಮುಂತಾದ ಕಷ್ಟಕರ ಪರಿಸ್ಥಿತಿಯನ್ನು ಮಲ್ಯ ಎದುರಿಸಿದ್ದಾರೆ. ಬ್ಯಾಂಕು ಗಳ ಅಂದಾಜಿನ ಪ್ರಕಾರ 'ಕಿಂಗ್ ಫಿಷರ್' ಬ್ರಾಂಡ್ ಮೌಲ್ಯ ಸುಮಾರು 4,100 ಕೋಟಿ ಇದೆ. ವಿಜಯ್ ಮಲ್ಯ ಸಂಸ್ಥೆ ವೈಯಕ್ತಿಕ ಗ್ಯಾರಂಟಿಯಾಗಿ 248.97 ಕೋಟಿ ರು ತೂಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+