ಬರುವ ಸಂಕ್ರಾಂತಿಯೊಳಗೆ ಬಿಜೆಪಿ ಸರಕಾರ ಪತನ

ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಂಡಿಸಲಿರುವ ಆಯವ್ಯಯ ಪತ್ರಕ್ಕೆ ಕೆಜೆಪಿ ಯಾವುದೇ ಬೆಂಬಲ ನೀಡುವುದಿಲ್ಲ. ಬಜೆಟ್ ಮಂಡನೆಗೆ ಕೆಜೆಪಿ ಅವಕಾಶ ನೀಡುವುದಿಲ್ಲ ಎಂದು ಒಲೆಕರ್ ಸ್ಪಷ್ಟ ಪಡಿಸಿದ್ದಾರೆ.
ಯಡಿಯೂರಪ್ಪ ಬೆಂಬಲಿಗರ ರಾಜೀನಾಮೆ ಪರ್ವ ಆರಂಭವಾಗಿದೆ. ನಮ್ಮ ನಾಯಕ ಯಡಿಯೂರಪ್ಪನವರದ್ದು ಬರೀ ಹೆಡ್' ಲೈನ್ ಹೇಳಿಕೆ ಎಂದು ಲೇವಡಿ ಮಾಡಿದವರಿಗೆ ಸದ್ಯದಲ್ಲೇ ಉತ್ತರ ಸಿಗಲಿದೆ ಎಂದು ಒಲೆಕರ್ ಸಂಸದ ಅನಂತ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪನವರಿಗೆ ಬೆಂಬಲ ಸೂಚಿಸಿ ಬಹಳಷ್ಟು ಬಿಜೆಪಿ ಶಾಸಕರು ಕೆಜೆಪಿ ಸೇರಲಿದ್ದಾರೆ. ಇದನ್ನು ತಡೆಗಟ್ಟಲು ಬಿಜೆಪಿಯ ಯಾವ ನಾಯಕರಿಗೂ ಸಾಧ್ಯವಿಲ್ಲ ಎಂದು ಒಲೆಕರ್ ಎಚ್ಚರಿಕೆ ನೀಡಿದ್ದಾರೆ.
ಜಗದೀಶ್ ಶೆಟ್ಟರ್ ಅವರನ್ನು ನಂಬಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದರು. ಈಗ ಬಿಎಸ್ವೈ ಬೆಂಬಲಿಗರನ್ನು ನಿಗಮ ಮಂಡಳಿಯಿಂದ ವಜಾ ಮಾಡಲಾಗುತ್ತಿದೆ.
ಶೆಟ್ಟರ್ ನಂಬಿಕೆ ದ್ರೋಹ ಕೆಲಸ ಮಾಡಿದ್ದಾರೆ ಎಂದು ಯಡಿಯೂರಪ್ಪ ಕಟ್ಟಾ ಬೆಂಬಲಿಗ ನೆಹರೂ ಓಲೆಕರ್ ಬೇಸರ ವ್ಯಕ್ತ ಪಡಿಸಿದ್ದಾರೆ.












Click it and Unblock the Notifications