ಬಿಜೆಪಿ ಇನ್ನೊಂದು ವಿಕೆಟ್ ಪತನ, ಅಟ್ಟೂರು ಕೆಜೆಪಿಗೆ

Basava Kalyan BJP MLA Basavaraj Patil Attur Quits
ಬೆಂಗಳೂರು,ಡಿ.8: ನಿರೀಕ್ಷೆಯಂತೆ ಬಿಜೆಪಿ ಬಸವಕಲ್ಯಾಣ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್ ಅವರು ಬಿಜೆಪಿ ತೊರೆದು ಕೆಜೆಪಿಗೆ ಶುಕ್ರವಾರ(ಡಿ.28) ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇಂದು ಸಂಜೆ ವೇಳೆಗೆ ಸ್ಪೀಕರ್ ಕೆಜೆ ಬೋಪಯ್ಯ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ಕಳಿಸುವುದಾಗಿ ಅಟ್ಟೂರ್ ಅವರು ಬಸವಕಲ್ಯಾಣದಲ್ಲಿ ಹೇಳಿದ್ದಾರೆ.

ಕರ್ನಾಟಕ ಜನತಾ ಪಕ್ಷ(ಕೆಜೆಪಿ) ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲೇ ಅಟ್ಟೂರ್ ಅವರು ರಾಜೀನಾಮೆ ಬಗ್ಗೆ ಘೋಷಿಸಿದ್ದಾರೆ.

ಬಸವಕಲ್ಯಾಣದಿಂದ ರಾಜೀನಾಮೆ ಪರ್ವ ಆರಂಭಗೊಂಡಿದೆ. ಹಲವು ಬಿಜೆಪಿ ನಾಯಕರು ಹಾಗೂ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸದ್ಯದಲ್ಲೇ ಕೆಜೆಪಿ ಸೇರಲಿದ್ದಾರೆ ಎಂದು ಬಿಎಸ್ ಯಡಿಯೂರಪ್ಪ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ರಾಜ್ಯ ಬಿಜೆಪಿ ಸರ್ಕಾರ ಇದ್ದು ಸತ್ತಂತೆ. ಜನರಿಂದಲೇ ತಕ್ಕ ಉತ್ತರ ಸಿಗಲಿದೆ ಎಂದು ಯಡಿಯೂರಪ್ಪ ಹೇಳಿದರು.

ಹಾವೇರಿಯ ಜಿಎಚ್ ಕಾಲೇಜು ಮೈದಾನದಲ್ಲಿ ಡಿ.9ರಂದು ನಡೆದ ಕರ್ನಾಟಕ ಜನತಾ ಪಕ್ಷ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅಟ್ಟೂರ್ ಅವರು ಕೆಜೆಪಿ ಸೇರುವ ಬಗ್ಗೆ ಈ ಮೊದಲೇ ಸುದ್ದಿ ಹಬ್ಬಿತ್ತು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ತನ್ನ ಮಾತೃ ಪಕ್ಷ ಬಿಜೆಪಿಗೆ ಒಂದಿಲ್ಲೊಂದು ಆಘಾತ ನೀಡಲು ನಾಂದಿ ಹಾಡಿದ್ದ ಬೆನ್ನಲ್ಲೇ ಚಹಾಕೂಟ ರಾಜಕಾರಣ ಆರಂಭಗೊಂಡಿತ್ತು.

ಇದಾದ ನಂತರ ಯಡಿಯೂರಪ್ಪ ಬೆಂಬಲಿತ ಶಾಸಕರು ಒಬ್ಬೊಬ್ಬರಾಗಿ ರಾಜೀನಾಮೆ ನೀಡಲು ಆರಂಭಿಸಿದ್ದರು. ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ಬಸವಕಲ್ಯಾಣ ಶಾಸಕ ಬಸವರಾಜ್ ಪಾಟೀಲ್ ಅಟ್ಟೂರ್ ಈ ಕಾರ್ಯಕ್ಕೆ ಚಾಲನೆ ನೀಡಿದ ಮೊದಲಿಗರಾಗಿದ್ದಾರೆ.

ತನ್ನ ಅಪಾರ ಬೆಂಬಲಿಗರೊಂದಿಗೆ ಶಾಸಕ ಬಸವರಾಜ್ ಪಾಟೀಲ್, ಬಿಜೆಪಿಗೆ ರಾಜೀನಾಮೆ ನೀಡಿ ಯಡಿಯೂರಪ್ಪರ ಕೆಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ರಾಜೀನಾಮೆ ಬಳಿಕ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿರುವ ಬಸವರಾಜ್ ಪಾಟೀಲ್, ನಾಲ್ವರು ಜಿಲ್ಲಾ ಪಂಚಾಯತ್ ಸದಸ್ಯರು, ಹತ್ತು ತಾಲೂಕು ಪಂಚಾಯತಿ ಸದಸ್ಯರು ಮತ್ತು ತಾಲೂಕಿನ ವಿವಿಧ ಮುಖಂಡರ ಜೊತೆ ಕೆಜೆಪಿಗೆ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದರು.

ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಸ್ಥಿತಿಗೆ ತಲುಪಲಿದೆ. ಕಳೆದ ಬಾರಿ ಕಾಂಗ್ರೆಸ್ ನನಗೆ ಟಿಕೆಟ್ ನೀಡದಾಗ ಯಡಿಯೂರಪ್ಪ ನನ್ನನ್ನು ಕರೆದು ಟಿಕೆಟ್ ನೀಡಿದರು. ನಾನು ಅವರಿಗೆ ಆಭಾರಿಯಾಗಿದ್ದೇನೆ. ಯಡಿಯೂರಪ್ಪ ಎಲ್ಲಿರುತ್ತಾರೋ, ನಾನೂ ಅಲ್ಲೇ ಇರುತ್ತೇನೆ ಎಂದು ಬಸವರಾಜ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+