Get Updates
Get notified of breaking news, exclusive insights, and must-see stories!

ಹೊಸ ಪ್ರಳಯದ ದಿನಾಂಕ ಬಂತು!

new-date-for-doomsday-set-for-january-1-2017
ವಾಷಿಂಗ್ಟನ್, ಡಿ.24: ಕಳೆದ ವಾರ ಪ್ರಳಯ ಸಂಭವಿಸಿ ಇನ್ನೇನು ಜಗತ್ತೇ ಸರ್ವನಾಶವಾಗುತ್ತದೆ ಎಂಬ ಗುಂಗಿನಲ್ಲಿದ್ದವರಿಗೆ ಅಂಥದ್ದೇನು ಘಟಿಸಲಿಲ್ಲ ಎಂದು ತಿಳಿದು ನಿರಾಶೆಯಾಗಿರಲಿಕ್ಕೂ ಸಾಲು.

ಆದರೆ ಈಗ ಮತ್ತೊಂದು ಸುದ್ದಿ ಹೊರಬಿದ್ದಿದೆ. ಆದ್ದರಿಂದ ನಿರಾಶೆ ಹೊಂದಬೇಕಿಲ್ಲ. ಮತ್ತೆ ಪ್ರಳಯ ಆಗುತ್ತದೆ ಎಂದು ನಂಬಿಕೂರಬಹುದು. ಏಕೆಂದರೆ ಹೊಸ ಪ್ರಳಯದ ದಿನಾಂಕ ಘೋಷಣೆಯಾಗಿದೆ.

ಅದರ ಪ್ರಕಾರ 2017 ಜನವರಿ 1ರಂದು ಪ್ರಳಯ ಸಂಭವಿಸುವುದು ಗ್ಯಾರಂಟಿ ಎನ್ನಲಾಗಿದೆ. ಇಷ್ಟಕ್ಕೇ ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಅವರವರ ಶಕ್ತ್ಯಾನುಸಾರ ಅನೇಕ ಪ್ರಮುಖರು ಪ್ರಳಯಕ್ಕೆ ಇನ್ನೂ ನಾನಾ ದಿನಾಂಕಗಳನ್ನು ಗೊತ್ತುಮಾಡಿದ್ದಾರೆ.

ಹೌದು, Sword of God Brotherhood ಅನುಯಾಯಿಗಳ ಪ್ರಕಾರ 2017 ಜನವರಿ 1ರಂದು ಜಗತ್ತು ಸಂಪೂರ್ಣ ನಾಶವಾಗಲಿದೆ. ಗೇಬ್ರಿಯಲ್ ಎಂಬ ಪ್ರವಾದಿ ಪ್ರಕಾರ ಈ ದಿನಾಂಕದಂದು ಸಾಯುವ ಘಳಿಗೆ ಬರುತ್ತದೆ. ಆದರೆ ಗೇಬ್ರಿಯಲ್ ಅನುಯಾಯಿಗಳಿಗೆ ಏನೂ ಆಗದು. ಉಳಿದವರಷ್ಟೇ ಬೆಂಕಿಯಲ್ಲಿ ಬೆಂದು ಹೋಗುತ್ತಾರೆ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

5,126 ವರ್ಷಗಳ ಮಾಯನ್ ಕ್ಯಾಲೆಂಡರ್ ಪ್ರಕಾರ ಕಳೆದ ವಾರದಲ್ಲಿ ಡಿ. 21ರಂದು ರಾತ್ರಿ 11.11 ಗಂಟೆಗೆ ಜಗತ್ತು ಸರ್ವನಾಶವಾಗುತ್ತದೆ ಎಂದೇ ನಂಬಲಾಗಿತ್ತು.

ಕುತೂಹಲಕಾರಿ ಸಂಗತಿಯೆಂದರೆ ಅಯಾನ್ ಗುರ್ನಿ ಎಂಬ ಕ್ರೈಸ್ತ ಧರ್ಮೀಯನ ಪ್ರಕಾರ 2023ರಲ್ಲಿ Judgement Day ಬರುತ್ತದಂತೆ. ಅಂದರೆ ಜಗತ್ತು ಸದ್ಯಕ್ಕೆ ನಾಶವಾಗದು. ಮುಂದೆ 2013ರಲ್ಲಿ ಪ್ರಳಯ ಸಂಭವಿಸುತ್ತದೆ ಎಂದು ಆತ ಹೇಳಿದ್ದಾನೆ.

ಇನ್ನು, ಐರಿಶ್ ನವರು ಹೇಳುವಂತೆ ಇಷ್ಟು ಬೇಗ ಮನುಷ್ಯನ ನಾಶ ಆಗುವುದಿಲ್ಲವಂತೆ. ಐರಿಶ್ ನ ಧರ್ಮಗುರು ಮಲಾಖಿ 1143ರಲ್ಲಿಯೇ ಹೇಳಿರುವಂತೆ ಮಹಾದುರಂತ ಸಂಭವಿಸುವುದಕ್ಕೆ ಇನ್ನೂ 112 ಪೋಪ್ ಗಳ ಅಗತ್ಯವಿದೆಯಂತೆ. ಆದರೆ ನಾವೀಗ 111ನೇ ಪೋಪ್ ಅನ್ನು ಕಂಡಿದ್ದೇವೆ. ಇನ್ನೂ ಇಂತಹ 112 ಪೋಪ್ ಗಳು ಅವತಾರವನ್ನು ಕಾಣಬೇಕು. ಅಲ್ಲಿಗೆ ಮಹಾದುರಂತ ಸಂಭವಿಸುತ್ತದೆ ಎಂಬುದು ಮಲಾಖಿ ವಾದ.

ಆದರೆ ವಿಜ್ಞಾನದ ಆಧಾದರ ಮೇಲೆ ಹೇಳುವುದಾದರೆ ಸುಮಾರು 4,500,000,000 AD ವೇಳೆಗೆ ಜಗತ್ತು ನಶಿಸಲಿದೆ. ಆ ವೇಳೆಗೆ, ಈಗ ಅತ್ಯಂತ ಚಿಕ್ಕ ನಕ್ಷತ್ರವಾಗಿರುವ ಸೂರ್ಯನು ಬುಧಗ್ರಹ, ಶುಕ್ರಗ್ರಹ, ಭೂಮಿ ಮತ್ತು ಸಾಧ್ಯವಾದರೆ ಮಂಗಳ ಗ್ರಹವನ್ನು ನುಂಗಿಹಾಕಿ ದೊಡ್ಡ ನಕ್ಷತ್ರವಾಗಿ ಮಾರ್ಪಟ್ಟಾಗ ಈ ಜಗತ್ತು ತಾನೇತಾನಾಗಿ ನಶಿಸುತ್ತದೆ ಎಂಬುದು ಖಗೋಳಶಾಸ್ತ್ರಜ್ಞರ ಕರಾರುವಕ್ಕು ಲೆಕ್ಕಾಚಾರ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+