ಅತ್ಯಾಚಾರಿಗಳಿಗೆ ಗಲ್ಲು: ಕಮಲ್ ಹಾಸನ್ ವಿರೋಧ

actor-kamal-hassan-against-death-penalty-for-molesters
ಕೊಚ್ಚಿ, ಡಿ.24: ಒಂದು ವಾರದ ಹಿಂದೆ ದೆಹಲಿಯಲ್ಲಿ ಚಲಿಸುವ ಬಸ್ಸಿನಲ್ಲಿ ಫಿಸಿಯೋಥೆರಪಿಸ್ಟ್ ವಿದ್ಯಾರ್ಥಿನಿಯ ಮೇಲೆ ಕಾಮುಕರು ನಡೆಸಿದ ಅಟ್ಟಹಾಸಕ್ಕೆ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿವೆ. ಭಾರತೀಯ ಕ್ರಿಕೆಟ್ ತಂಡದ 'ಯುವರಾಜ' ಸಿಂಗ್ ಅವರಂತೂ ಘಟನೆಯನ್ನು ಖಂಡಿಸಿ, ನೊಂದ ಜೀವಕ್ಕೆ ಆತ್ಮಸ್ಥೈರ್ಯ ತುಂಬಿದ್ದಾರೆ.

ಈ ಮಧ್ಯೆ ನಾಡಿನೆಲ್ಲಡೆ ರೇಪ್ ಅಪರಾಧಕ್ಕೆ ಮರಣದಂಡನೆಯೇ ತಕ್ಕ ಶಾಸ್ತಿ. ಮೊದಲು ಕಾನೂನು ತಿದ್ದುಪಡಿ ಮಾಡಿ ರೇಪಿಸ್ಟ್ ಗೆ ಗಲ್ಲು ವಿಧಿಸಿ ಎಂಬ ಕೂಗು ಎದ್ದಿದೆ. ಗಮನಾರ್ಹವೆಂದರೆ ತಾಜಾ ಪ್ರಕರಣದಲ್ಲಿ ಖುದ್ದು 3 ಆರೋಪಿಗಳೇ 'ನಾವು ವಿಚಾರಣೆಗೂ ಅರ್ಹರಲ್ಲ. ನಮ್ಮನ್ನು ನೇರವಾಗಿ ಗಲ್ಲಿಗೆ ಹಾಕಿ' ಎಂದು ಕೊರಗುತ್ತಿರುವಾಗ...

ಹಿರಿಯ ನಟ, 'ಸಕಲಕಲಾವಲ್ಲವನ್' ಕಮಲ್ ಹಾಸನ್ ಮಾತ್ರ ಅದ್ಯಾಕೋ 'ಅತ್ಯಾಚಾರ ಮಾಡಿದ ತಪ್ಪಿಗೆ ಮರಣದಂಡನೆ ವಿಧಿಸುವುದು ಸುತರಾಂ ಬೇಡ' ಎನ್ನುತ್ತಿದ್ದಾರೆ. '23 ವರ್ಷದ ಯುವತಿಯ ಮೇಲೆ ಪೈಶಾಚಿಕ ಕೃತ್ಯ ನಡೆದಿರುವುದನ್ನು ನಾನೂ ಖಂಡಿಸುತ್ತೇನೆ. ಆದರೆ ...' ಎಂದು ಖ್ಯಾತ ನಟ ಕಮಲ್ ರವಿವಾರ ರಾಗವೆಳೆದಿದ್ದಾರೆ.

'ಅಪರಾಧವನ್ನು ಮತ್ತೆ ಮತ್ತೊಂದು ಅಪರಾಧದ ಮೂಲಕ ತಪ್ಪಿಸಲಾಗದು. ಗಲ್ಲು ಶಿಕ್ಷೆ ಎನ್ನುವುದು ನ್ಯಾಯಾಂಗದ ಪೌರೋಹಿತ್ಯದಲ್ಲಿ ನಡೆಯುವ ಕೊಲೆ ಅಪರಾಧ' ಎಂದು ಕಮಲ್ ವ್ಯಾಖ್ಯಾನಿಸಿದ್ದಾರೆ. ಅಂದಹಾಗೆ, ಕಮಲ್ ಹಾಸನ್ ಅವರು ಸಿನಿಮಾಗಳಲ್ಲಿ ಅತ್ಯಾಚಾರದ ವಿರುದ್ಧ ಹೋರಾಡುವ ದೃಶ್ಯ/ಡೈಲಾಗ್ ಗಳೇನಾದರೂ ಜ್ಞಾಪಕಕ್ಕೆ ಬಂತಾ? ರೀಲೇ ಬೇರೆ ರಿಯಲೇ ಬೇರೆ, ಅಲ್ವಾ?

ಕಮಲ್ ಹಾಸನ್ 'ನಿಜರೂಪ': ಅಷ್ಟೇ ಅಲ್ಲ. ಕಮಲ್ ಇನ್ನೂ ಏನು ಹೇಳಿದ್ದಾರೆ ಕೇಳಿ... 'ನೋಡಿ ಅದು ನನ್ನ ಬಸ್, ನನ್ನ ರಾಜಧಾನಿ ಊರು. ನೊಂದ ಯುವತಿ ನನ್ನ ತಂಗಿ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಆ ಪಾಪದ ಕೃತ್ಯ ಎಸಗಿರುವವನು ನನ್ನ ಸೋದರ. ನನಗೆ ನಿಜಕ್ಕೂ ನಾಚಿಕೆಯಾಗುತ್ತಿದೆ' ಎಂದೆಲ್ಲಾ ಓತಪ್ರೋತವಾಗಿ ಮಾತನಾಡಿದ್ದಾರೆ.

ಕಮಲ್ ಹಾಸನ್ ಅವರ ಹೊಸ ಪಿಕ್ಚರ್ 'ವಿಶ್ವರೂಪಂ' ಇದೇ ಜನವರಿ 11ರಂದು ಬಿಡುಗಡೆಯಾಗುತ್ತಿದೆ. ಅದರ ಪ್ರಚಾರ ಕಾರ್ಯಾರ್ಥವಾಗಿ ಹಮ್ಮಿಕೊಳ್ಳಲಾಗಿದ್ದ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್ ಅತ್ಯಾಚಾರ ಮತ್ತು ಅತ್ಯಾಚಾರಿಗೆ ಗಲ್ಲು ವಿಧಿಸುವ ಪ್ರಸ್ತಾಪದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+