ಹಿಂದೂ ಧರ್ಮಕ್ಕೆ ವಿಶ್ವದಲ್ಲಿ ಮೂರನೆಯ ಸ್ಥಾನ

ಧರ್ಮಾನುಯಾಯಿಗಳ ಸಂಖ್ಯೆ ಹಾಗೂ ಧರ್ಮಾನುಯಾಯಿಗಳು ಹರಡಿಕೊಂಡಿರುವ ಪ್ರದೇಶದ ವ್ಯಾಪ್ತಿಯನ್ನು ಪರಿಗಣಿಸಿರುವ Pew ಫೋರಂ, ಧರ್ಮಗಳಲ್ಲಿ ನಂಬಿಕೆ ಇಲ್ಲದವರನ್ನೂ ತನ್ನ ಅಧ್ಯಯನದ ವೇಳೆ ಪರಿಗಣನೆಗೆ ತೆಗೆದುಕೊಂಡಿದೆ.
ಶೇ. 97 ಮಂದಿ ಹಿಂದೂಗಳು ಭಾರತ, ಮಾರಿಷಸ್ ಮತ್ತು ನೇಪಾಳದಲ್ಲಿ ವಾಸವಾಗಿದ್ದಾರೆ. ಶೇ. 87ರಷ್ಟು ಕ್ರಿಶ್ಚಿಯನ್ನರು 157 ರಾಷ್ಟ್ರಗಳಲ್ಲಿ ಕಾಣಸಿಗುತ್ತಾರೆ. ಶೇ. 47 ರಷ್ಟು ಮಂದಿ ಇತರೆ ಧರ್ಮಗಳ ಜನರು ಭಾರತದಲ್ಲಿ ನೆಲೆಸಿದ್ದಾರೆ.
ವಿಶ್ವದಾದ್ಯಂತದ ಎಂಟು ಧಾರ್ಮಿಕ ಗುಂಪುಗಳು ಹಾಗೂ ಧಾರ್ಮಿಕೇತರರನ್ನು ಪರಿಗಣಿಸಿ ನಡೆಸಲಾದ ಈ ಅಧ್ಯಯನದಲ್ಲಿ ವಿಶ್ವದ ಒಟ್ಟು ಜನಸಂಖ್ಯೆಯಲ್ಲಿ ಶೇ. 32ರಷ್ಟು ಮಂದಿ ಕ್ರಿಶ್ಚಿಯನ್ನರಾಗಿದ್ದು, ವಿಶ್ವದ ಜನಪ್ರಿಯ ಧಾರ್ಮಿಕ ಗುಂಪು ಎಂಬ ಖ್ಯಾತಿಗೆ ಒಳಗಾಗಿದ್ದರೆ 1.6 ಶತಕೋಟಿ ಜನರು ಮುಸ್ಲಿಂ ಧರ್ಮಾನುಯಾಯಿಗಳಾಗಿದ್ದು, ವಿಶ್ವದ ಎರಡನೇ ದೊಡ್ಡ ಧಾರ್ಮಿಕ ಗುಂಪು ಎಂಬ ಶ್ರೇಯಕ್ಕೆ ಪಾತ್ರವಾಗಿದೆ.
ಇನ್ನು ವಿಶ್ವ ಜನಸಂಖ್ಯೆಯಲ್ಲಿ ಶೇ. 15ರಷ್ಟು ಅನುಯಾಯಿಗಳನ್ನು ಹೊಂದಿರುವ ಹಿಂದೂ ಧರ್ಮ ಮೂರನೇ ಸ್ಥಾನದಲ್ಲಿದ್ದರೆ, 500 ದಶಲಕ್ಷ ಜನರನ್ನು ಅಂದರೆ ಒಟ್ಟು ಜನಸಂಖ್ಯೆಯ ಶೇ. 7ರಷ್ಟು ಅನುಯಾಯಿಗಳನ್ನು ಹೊಂದಿರುವ ಬೌದ್ಧರು ನಾಲ್ಕನೇ ಹಾಗೂ 14 ದಶಲಕ್ಷ ಧರ್ಮಾವಲಂಬಿಗಳನ್ನು ಹೊಂದಿರುವ ಜಿಹೂಗಳು ಐದನೇ ಸ್ಥಾನದಲ್ಲಿದ್ದಾರೆ.
ವಿಶ್ವದಾದ್ಯಂತ 230ಕ್ಕೂ ಅಧಿಕ ರಾಷ್ಟ್ರಗಳು ಹಾಗೂ ಪ್ರದೇಶಗಳಲ್ಲಿ ಈ ಅಧ್ಯಯನವನ್ನು ನಡೆಸಲಾಗಿದ್ದು, 10ರಲ್ಲಿ ಎಂಟಕ್ಕೂ ಅಧಿಕ ಮಂದಿ ಅಂದರೆ 5.8 ಶತಕೋಟಿ ಜನರು ಯಾವುದಾದರೂ ಒಂದು ಧರ್ಮದ ಅನುಯಾಯಿಗಳಾಗಿದ್ದಾರೆ. 400 ದಶಲಕ್ಷಕ್ಕೂ ಅಧಿಕ ಮಂದಿ ವಿವಿಧ ಜಾನಪದ ಪರಂಪರೆಗಳಿಂದ ಬಂದವರಾಗಿದ್ದಾರೆ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.












Click it and Unblock the Notifications