ವಿದ್ಯಾರ್ಥಿನಿಯರಿಂದ ಪ್ರಿನ್ಸಿಪಾಲರ ಅಪಹರಣ ಸುಖಾಂತ್ಯ

kolkata-failed-girl-students-kidnap-principal-teachers
ಕೋಲ್ಕೊತ್ತಾ, ಡಿ.18:ಪ್ರಿನ್ಸಿಪಾಲ್ ಮತ್ತು ಶಿಕ್ಷಕ ಸಿಬ್ಬಂದಿಯನ್ನು ಅಪಹರಿಸಿ, ಒತ್ತೆಯಾಗಿಸಿಕೊಂಡಿದ್ದ ವಿದ್ಯಾರ್ಥಿನಿಯರು ಕೊನೆಗೂ 24 ಗಂಟೆಗಳ ತರುವಾಯ ಅವರಿಗೆಲ್ಲ ಮುಕ್ತಿ ನೀಡಿದ್ದಾರೆ. ಈ ಮಧ್ಯೆ, ತಮ್ಮ ಬಹುಮುಖ್ಯ ಬೇಡಿಕೆಯನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಏನಪ್ಪಾ ಅಂದರೆ ಅನುತ್ತೀರ್ಣಗೊಂಡ ವಿದ್ಯಾರ್ಥಿನಿಯರನ್ನು ಮುಂದಿನ ತರಗತಿಗೆ ಪಾಸ್ ಮಾಡುವುದಾಗಿ ಆಡಳಿತ ಮಂಡಳಿ ವಾಗ್ದಾನ ನೀಡಿದೆ. ಆದರೆ ಇತರೆ ವಿದ್ಯಾರ್ಥಿನಿ/ವಿದ್ಯಾರ್ಥಿನಿಯರು ಇದನ್ನೇ ಮಾದರಿಯಾಗಿಸಿಕೊಳ್ಳದಿದ್ದರೆ ಅದೇ ಪುಣ್ಯ. ಆದರೆ ಇದೊಂದು ಆತಂಕಕಾರಿ ಬೆಳವಣಿಗೆ. ಇದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ಪ್ರಿನ್ಸಿಪಾಲ್ ಮತ್ತು ಶಿಕ್ಷಕ ಸಿಬ್ಬಂದಿ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟು 105 ವಿದ್ಯಾರ್ಥಿನಿಯರು ಮೊದಲ ಪಿಯುಸಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 76 ಮಂದಿ ಪಾಸಾಗಿದ್ದರು. ಆದರೆ ಈ 29 ಮಂದಿ 2 ವಿಷಯಗಳಲ್ಲಿ ತೇರ್ಗಡೆಯಾಗಿರಲಿಲ್ಲ. ಆದರೆ ಇವರೆಲ್ಲ ರೊಳ್ಳೆ ತೆಗೆದರು. ನಾವು ಚೆನ್ನಾಗಿ ಬರೆದಿದ್ದೆವು. ಆದರೂ ನಮ್ಮನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಅಲವತ್ತುಕೊಂಡರು. ಇದಕ್ಕೆ ಅವರವರ ಪೋಷಕರೂ ದನಿಗೂಡಿಸಿದ್ದರು.

ಪ್ರಾಥಮಿಕ ವರದಿ: ಸುಮಾರು 25 ಮಂದಿಯಿದ್ದ ವಿದ್ಯಾರ್ಥಿನಿಯರ ಗುಂಪೊಂದು ತಮ್ಮ ಶಾಲೆಯ ಪ್ರಿನ್ಸಿಪಾಲರನ್ನೇ ಅಪಹರಿಸಿ, ಒತ್ತೆಯಿಟ್ಟುಕೊಂಡಿದೆ. ಜತೆಗೆ ವಿದ್ಯಾರ್ಥಿನಿಯರು ಒಂದಷ್ಟು ಶಿಕ್ಷಕರನ್ನೂ ಒತ್ತಾಯಗಿಸಿಕೊಂಡಿದ್ದಾರೆ. ಈ ಅಪಹರಣ ಪ್ರಹಸನ ಕೋಲ್ಕೊತ್ತಾದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ಏನಾಗಿದೆಯೆಂದರೆ ಋಶಿ ಅರಬಿಂದೋ ಬಾಲಿಕಾ ವಿದ್ಯಾಲಯದ 29 ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಸಾಮೂಹಿಕವಾಗಿ ಅನುತ್ತೀರ್ಣರಾಗಿದ್ದರು. ಇದಕ್ಕೆಲ್ಲ ಪ್ರಿನ್ಸಿಪಾಲ್ ಮತ್ತು ಶಿಕ್ಷಕ ಸಿಬ್ಬಂದಿಯೇ ಕಾರಣ ಎಂದು ಬಗೆದ ವಿದ್ಯಾರ್ಥಿನಿಯರು ಅಷ್ಟೂ ಮಂದಿಯನ್ನು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಇನ್ನೂ ಯಾರನ್ನೂ ಹೊರಬಿಟ್ಟಿಲ್ಲ.

ನಿನ್ನೆ ಇಡೀ ರಾತ್ರಿ ಪೊಲೀಸರು ಶಾಲಾ ಕೊಠಡಿಯನ್ನು ಕಾಯುತ್ತಿದ್ದಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳಲು ಹಿಂಜರಿದಿದ್ದಾರೆ. ಶಾಲಾ ಆಡಳಿತ ಮಂಡಳಿ ಸಂಬಂಧಪಟ್ಟ ಎಲ್ಲರಿಗೂ ಸುದ್ದಿಮುಟ್ಟಿಸಿದ್ದಾರೆ.

ಫೇಲಾದ ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್ ವಿರುದ್ಧ ಯಾಕೆ ಇಂತಹ ಸಾಹಸ ಪ್ರದರ್ಶಿಸಿದರು ಎಂಬುದು ಕುತೂಹಲಕಾರಿಯಾಗಿದೆ. ಈ ಹಿಂದೆಯೂ ಪ್ರಿನ್ಸಿಪಾಲ್ ಮತ್ತು ಬೋಧಕ ಸಿಬ್ಬಂದಿಯ ಮೇಲೆ ವಿದ್ಯಾರ್ಥಿನಿಯರು ಹಲ್ಲೆ ನಡೆಸಿದ ಪ್ರಸಂಗಗಳು ಈ ಶಾಲೆಯಲ್ಲಿ ನಡೆದಿವೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+