85 ಲಕ್ಷ ರೂ ಚಿನ್ನ ಸಾಗಣೆ: ಕರ್ನಾಟಕದ ಸಲೀಂ ಸೆರೆ

ಸುಮಾರು 85 ಲಕ್ಷ ರೂ. ಮೌಲ್ಯದ ಚಿನವನ್ನು ದುಬೈನಿಂದ ಸಾಗಿಸಿ, ಅದಕ್ಕೆ ಸುಂಕ ಪಾವತಿಸದೆಯೇ ಕದ್ದೊಯ್ಯಲು ಯತ್ನಿಸಿದ ಆರೋಪದ ಮೇಲೆ ಕರ್ನಾಟಕದ ಮೊಹಮದ್ ಸಲೀಂ ಅಲಿ ಅಕ್ಬರ್ ನನ್ನು ಅಬಕಾರಿ ಸುಂಕ ವಿಭಾಗದ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ಅಲಿ ಅಕ್ಬರ್ ಒಟ್ಟು 84.48 ಲಕ್ಷ ರೂ. ಮೌಲ್ಯದ 3215.68 ಗ್ರಾಂ ಚಿನ್ನಾಭರಣವನ್ನು ಕಳ್ಳಸಾಗಣೆ ಮಾಡುತ್ತಿದ್ದ. ಆರೋಪಿ ಅಲಿಯನ್ನು ಬಂಧಿಸಲಾಗಿದ್ದು, ಅಷ್ಟೂ ಚಿನ್ನಾಭರಣವನ್ನು ಸುಂಕಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಮಾರಾಟ ಮಾಡಲು ದುಬೈನಿಂದ ತಂದಿರುವುದಾಗಿ ಆರೋಪಿ ಅಲಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ.
Customs Act and Foreign Trade order ನೀತಿಯನುಸಾರ ಭಾರತೀಯ ಪ್ರಜೆ ವಿದೇಶ ಪ್ರವಾಸದಿಂದ ಹಿಂದಿರುಗುವಾಗ 10 ರಿಂದ 20 ಸಾವಿರ ರೂ. ಮೌಲ್ಯದ ಚಿನ್ನವನ್ನಷ್ಟೇ ತರಬೇಕು ಎಂಬ ನಿಯಮವಿದೆ.












Click it and Unblock the Notifications