ಅಮೆರಿಕ ಶಾಲೆಯಲ್ಲಿ ಮರಣಮೃದಂಗ: 20 ಮಕ್ಕಳ ಹತ್ಯೆ

ಶುಕ್ರವಾರ ಬೆಳಗ್ಗೆ 9.30ರಲ್ಲಿ (ಭಾರತೀಯ ಕಾಲ ಮಾನದ ಪ್ರಕಾರ ನಿನ್ನೆ ರಾತ್ರಿ) ಈ ಪೈಶಾಚಿಕ ಘಟನೆ ನಡೆದಿದ್ದು ಶಾಲೆ ಆವರಣ ಸ್ಮಶಾನವಾಗಿದೆ. ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿನ ಸ್ಯಾಂಡಿ ಹೂಕ್ ಪ್ರಾಥಮಿಕ ಶಾಲೆಯ ಕೋಣೆಗೆ ಏಕಾಏಕಿ ನುಗ್ಗಿದ 20ರ ಹರೆಯದ ಯುವಕ ಈ ಕೃತ್ಯವೆಸಗಿದ್ದಾನೆ.
ಯುವಕನ ಹುಚ್ಚಾಟಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಅತ್ಯಂತ ವ್ಯವಸ್ಥಿತವಾಗಿ ಈ ಭೀಬತ್ಸ ಕೃತ್ಯವೆಸಗಿರುವ ಪಾಪಿ, ಒಂದಲ್ಲ ನಾಲ್ಕು ಪಿಸ್ತೂಲುಗಳಿಂದ ಹತ್ಯಾದಾಳಿ ನಡೆಸಿದ್ದಾನೆ. ಜತೆಗೆ ಬುಲೆಟ್ಟುಗಳಿಂದ ತುಂಬಿದ್ದ ಜಾಕೆಟ್ ಸಹ ಧರಿಸಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆ ತಿಳಿದು ತೀವ್ರ ದುಃಖಿತರಾದ ಅಧ್ಯಕ್ಷ ಬರಾಕ್ ಒಮಾಬಾ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದು, ಮೃತರ ಗೌರವಾರ್ಥ ಶ್ವೇತಭವನದಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ, ಹಾರಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications