ಹೆಂಡತಿಯ ಹತ್ಯೆ: ಸಿಸಿಟಿವಿ ಹೇಳಿದ ಕಥೆಯೇನು?

mumbai-man-kills-wife-dumps-body-in-auto-kids-help-cctv
ಮುಂಬೈ,ಡಿ.12: ಪಾಪಿಷ್ಠ ಗಂಡನೊಂಬ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದೂ ಅಲ್ಲದೆ ತನ್ನಿಬ್ಬರು ಮಕ್ಕಳ ಸಹಾಯದಿಂದ ಹೆಣವನ್ನು ಮನೆಯಿಂದ ಹೊರ ಸಾಗಿಸಿ, ಆಟೋದಲ್ಲಿಟ್ಟು ಊರು ಖಾಲಿ ಮಾಡಿ ಹೋಗಿದ್ದಾನೆ.

ಕಳೆದ ಶುಕ್ರವಾರ ಮುಂಬೈನ ಜುಹು ಕೋಳಿವಾಡಾದಲ್ಲಿ ಸಂತಕ್ರೂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ವ್ಯಕ್ತಿ ಈ ಕುಕೃತ್ಯವೆಸಗಿದ್ದಾನೆ. ಮೃತ ಮಹಿಳೆ ಜಾನ್ಸನ್ ಅಂಡ್ ಜಾನ್ಸನ್ ಕಂಪನಿಯಲ್ಲಿ ಕೆಲಸದಲ್ಲಿದ್ದರು. ಇನ್ನು, ಹತ್ಯೆಗೆ ನೆರವು ನೀಡಿದ ಇಬ್ಬರು ಮಕ್ಕಳ ಪೈಕಿ ದೊಡ್ಡವಳ ವಯಸ್ಸು 12 ಇದ್ದರೆ ಮತ್ತೊಂದು 6 ವರ್ಷದ ಬಾಲಕ.

ಘಟನೆಯ ವಿವರ: ತಿಳಿದೋ/ತಿಳಿಯದೆಯೋ ಮುಗ್ಧ ಮಕ್ಕಳಿಬ್ಬರೂ ಅಪ್ಪನ ಜತೆಗೂಡಿ ಅಮ್ಮನ ಹೆಣವನ್ನು ಮನೆಯಿಂದ ಹೊರಗೆ ಆಟೋದಲ್ಲಿಟ್ಟು ಬಂದಿದ್ದಾರೆ. ಬಳಿಕ ಅಪ್ಪನ ಜತೆಗೂಡಿ ಸೂಟ್ ಕೇಸಿನಲ್ಲಿ ಬಟ್ಟೆ ಬರೆ ತುಂಬಿಕೊಂಡು ಮನೆಬಿಟ್ಟು ಊರುಬಿಟ್ಟು ಹೋಗಿದ್ದಾರೆ.

ಅದಾದ ನಂತರ ಶನಿವಾರ ಬೆಳಗ್ಗೆ ಆಟೋದಲ್ಲಿದ್ದ ಶವ ಪತ್ತೆಯಾಗಿದೆ. ತನಿಖೆಗಿಳಿದ ಪೊಲೀಸರು ಆಟೋ ಯಾರದೆಂದು RTO ಅಧಿಕಾರಿಗಳ ಮೂಲಕ ತಿಳಿದುಕೊಳ್ಳುತ್ತಾರೆ. ಅದರ ಮಾಲೀಕನನ್ನು ಹುಡುಕಿಕೊಂಡು ಹೋದಾಗ ಮನೆಗೆ ಬೀಗ ಜಡಿದು ಅವನು ಪರಾರಿಯಾಗಿರುತ್ತಾನೆ.

ಕೈಚೆಲ್ಲಿದ ಪೊಲೀಸರು ಬೇರೆ ಏನಾದರೂ clue ಸಿಗುತ್ತದಾ ಎಂದು ಅಲ್ಲಿಲ್ಲಿ ತಡಕಾಡಿದ್ದಾರೆ. ಆಗ ಅವರ ನೆರವಿಗೆ ಬಂದಿದ್ದೇ CCTV! ಹೌದು ಇತ್ತೀಚನ ದಿನಗಳಲ್ಲಿ ನಿಜಕ್ಕೂ ಈ CCTV ಪೊಲೀಸರ ಆಪತ್ಬಾಂಧವನಾಗಿದ್ದಾನೆ. ಸಮಾಧಾನದ ಸಂಗತಿಯೆಂದರೆ ನಗರ ಪ್ರದೇಶಗಳಲ್ಲಿ ರಸ್ತೆಗೆರಡೂ/ಮೂರೋ CCTVಗಳನ್ನು ಸ್ಥಿತಿವಂತರಾದವರು ಹಾಕಿಸಿಕೊಂಡಿರುತ್ತಾರೆ. ಆ ಬೀದಿಯಲ್ಲಿ ನಡೆಯುವ ಅಪರಾಧ ಕೃತ್ಯಗಳ ಮೇಲೆ ಹದ್ದಿನಕಣ್ಣಿಡುವ ಈ ಕ್ಯಾಮರಾಗಳು ಪಾತಕಿಗಳನ್ನು ಹೆಡೆಮುರಿಗೆ ಕಟ್ಟಲು ಪೊಲೀಸರಿಗೆ ದಾರಿ ತೋರುತ್ತಿದೆ.

ಈ ಪ್ರಕರಣದಲ್ಲೂ ಅದೇ ಆಗಿದೆ. ಆಟೋದಲ್ಲಿದಲ್ಲಿ ಮಹಿಳೆಯ ಶವ ಸಿಗುತ್ತಿದ್ದಂತೆ ಜಾಗೃತರಾದ ಪೊಲೀಸರು ಅಕ್ಕಪಕ್ಕದಲ್ಲಿ CCTVಗಳಿಗೆ ಜಾಲಾಡುತ್ತಾರೆ. ಕುತೂಹಲದ ಸಂಗತಿಯೆಂದರೆ ಒಂದು CCTVಯಲ್ಲಿ ಸದರಿ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ಬೆಳಕುಚೆಲ್ಲುತ್ತದೆ. ಅದರಲ್ಲಿದ್ದ ಚಿತ್ರೀಕರಣ ನೋಡಿ ಪೊಲೀಸರೇ ಒಂದು ಕ್ಷಣ ಬೆಚ್ಚಿಬೀಳುತ್ತಾರೆ.

ಅರ್ಧ ಗಂಟೆಯಲ್ಲಿ ಎಲ್ಲವೂ ಖತಂ: ಏಕೆಂದರೆ ವ್ಯಕ್ತಿಯೊಬ್ಬ ಪುಟ್ಟ ಮಕ್ಕಳಿಬ್ಬರನ್ನು ಜತೆಯಾಗಿಸಿಕೊಂಡು ಆ ಶವವನ್ನು ಗೋಣಿಚೀಲದಲ್ಲಿ ತುಂಬಿ, ಆಟೋದಲ್ಲಿಡುವುದು ಸ್ಪಷ್ಟವಾಗಿ ದಾಖಲಾಗಿದೆ. ಆ ನಂತರ ಮನೆಗೆ ವಾಪಸಾಗುವ ಅಪ್ಪ-ಮಕ್ಕಳು ಸೂಟ್ ಕೇಸಿನೊಂದಿಗೆ ಮನೆ ಬಿಟ್ಟು ರಸ್ತೆಯಲ್ಲಿ ಸಾಗುತ್ತಿರುವುದೂ ದಾಖಲಾಗಿದೆ. ಅಲ್ಲಿಗೆ ಪೊಲೀಸರಿಗೆ ಹಂತಕ ಯಾರೆಂಬುದು ನಿಕ್ಕಿಯಾಗಿದ್ದು, ಅವನ ಬೆನ್ನು ಹತ್ತಿದ್ದಾರೆ. ಆದರೆ ಅವ ಇನ್ನೂ ಪತ್ತೆಯಾಗಿಲ್ಲ.

ಆದರೆ ಆ ಪಾತಕಿ ಗಂಡನಿಗೆ ತಿಳಿಯದೇ ಹೋದ ವಾಸ್ತವವೆಂದರೆ ತನ್ನ ಕುಕೃತ್ಯವೆಲ್ಲ ನೆರೆಮನೆಯಾತನ CCTVಯಲ್ಲಿ ದಾಖಲಾಗಿದ್ದು, ಅದುವೇ ತನ್ನ ಪಾತಕಕ್ಕೆ ಸಾಕ್ಷಿಯಾಗುತ್ತದೆ ಎಂಬುದು. ಮುಂಬೈ ಪೊಲೀಸರು ಪಾತಕಿಯ ಬೆನ್ನುಹತ್ತಿ ಬಿಹಾರಕ್ಕೆ ಹೋಗಿದ್ದಾರೆ. ಅವನ ಬಂಧನವಾದ ಮೇಲೆ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+