ಮಾಲೆ ಧರಿಸಿ ಶಮಬರಿಮಲೆಗೆ ಹೊರಟರೇ ಯಡಿಯೂರಪ್ಪ?

ಯಡಿಯೂರಪ್ಪ ಹೋದರೆ ಹೋಗಲಿ. ಆದರೆ ಅದಕ್ಕಿಂತ ಗಹನವಾದ ವಿಷಯವೆಂದರೆ ಯಡಿಯೂರಪ್ಪ ಜತೆ ಕೆಲ ಶಾಸಕ/ಸಚಿವರ/ಸಂಸದರೂ ಹೋಗಿದ್ದಾರೆ ಎಂಬ ಸುದ್ದಿಯಿದೆ. ಒಂದು ವೇಳೆ ನಿಜವೇ ಆಗಿ, ಇದು ಬಿಜೆಪಿ ಅಧಿನಾಯಕರ ಕಿವಿಗೆ/ಕಣ್ಣಿಗೆ ಬಿದ್ದರೆ ಬಿಜೆಪಿ ಅವರಿಗೂ ಶಿಸ್ತುಕ್ರಮದ ಬೆದರಿಕೆಯೊಡ್ಡುತ್ತದೆಯೇ?
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪಗೆ ಜಾಮೀನು ಸಿಕ್ಕಿರುವುದು ಸಮಾಧಾನ ತಂದಿದ್ದು, ಶಾಂತಿ ಅರಸಿ ಕೇರಳದತ್ತ ತೀರ್ಥಯಾತ್ರೆಗೆ ತೆರಳಿದ್ದಾರೆ ಎನ್ನಲಾಗಿದೆ.
ಬಿವೈ ರಾಘವೇಂದ್ರ, ಆಪ್ತ ಲೆಹರ್ ಸಿಂಗ್, ಎಂಡಿ ಲಕ್ಷ್ಮಿನಾರಾಯಣ ಹಾಗೂ ಇನ್ನೂ ಕೆಲವರು ಯಡಿಯೂರಪ್ಪಗೆ ಸಾಥ್ ನೀಡಿರುವುದು ಖಚಿತವಾಗಿ ತಿಳಿದುಬಂದಿದೆ. ಅಂದಹಾಗೆ ಯಡಿಯೂರಪ್ಪ ಅವರು ಮಂಗಳವಾರ ರಾತ್ರಿ ಬೆಂಗಳೂರಿನಿಂದ ಬಜಪೆ ವಿಮಾನ ನಿಲ್ದಾಣ ತಲುಪಿಕೊಂಡು...
ಅಲ್ಲಿಂದ ಕಾರಿನ ಮೂಲಕ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಇಂದು (12.12.12) ವಿಶೇಷ ಪೂಜೆ ಸಲ್ಲಿಸಲು ತೆರಳಿದ್ದಾರೆ ಎಂಬ ಮಾಹಿತಿ ಬಂದಿದೆ.
ಪರಮ ದೈವಭಕ್ತ ಯಡಿಯೂರಪ್ಪನವರು ಕೇರಳದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜತೆಗೆ ಇನ್ನೂ ಹಲವು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಇನ್ನು, ಯಡಿಯೂರಪ್ಪನವರು ಇದೇ ಮೊದಲ ಬಾರಿಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗುತ್ತಿಲ್ಲ.
ಕಳೆದ ಏಪ್ರಿಲ್ ನಲ್ಲಷ್ಟೇ ಅಲ್ಲಿಗೆ ತೆರಳಿದ್ದರು. ತಳಿಪರಂಬದಲ್ಲಿರುವ ದೇವಸ್ಥಾನಕ್ಕೆ 2008ರಲ್ಲಿ ಇದೇ ಋತುವಿನಲ್ಲಿ ಭೇಟಿ ನೀಡಿದ್ದರು. ಆಗ ಆನೆಯೊಂದನ್ನು ದಾನ ಮಾಡಿದ್ದರು. ಕಳೆದ ವರ್ಷ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬರುತ್ತಿದ್ದಂತೆ ಮತ್ತೆ ರಾಜರಾಜೇಶ್ವರಿ ದರ್ಶನ ಪಡೆದಿದ್ದರು.












Click it and Unblock the Notifications