ಗ್ರಾನೈಟ್ ಹಗರಣ: ಕರುಣಾನಿಧಿ ಮೊಮ್ಮಗನಿಗೆ ಜಾಮೀನು

ದೊರೈ ಅವರು ತಮ್ಮ ಪಾಸ್ ಪೋರ್ಟ್ ಗಳನ್ನು ಕೋರ್ಟಿಗೆ ಒಪ್ಪಿಸಬೇಕು, ಪ್ರತಿದಿನ ಮೇಲೂರು ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ಜಸ್ಟೀಸ್ ಸಿಟಿ ಸೆಲ್ವಂ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ದೊರೈ ಅವರ ಮೇಲೆ ಐಪಿಸಿ ಸೆಕ್ಷನ್ 120(ಬಿ), 447 ಹಾಗೂ 420 ಅನ್ವಯ ಕೇಸು ದಾಖಲಾಗಿತ್ತು. ಅಕ್ರಮ ಗ್ರಾನೈಟ್ ಗಣಿಗಾರಿಕೆಯಿಂದ ಸರ್ಕಾರಕ್ಕೆ 16,000 ಕೋಟಿ ರು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಕೇಂದ್ರ ಸಚಿವ ಎಂಕೆ ಅಳಗಿರಿ ಪುತ್ರ ದೊರೈ ಅವರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದು ಈ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದಂತೆ ದೊರೈ ದಯಾನಿಧಿ ಬಿಟ್ಟು ಉಳಿದ 50 ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿತ್ತು. ಅದರೆ, ರಾಜಕೀಯ ಒತ್ತಡ, ತನಿಖಾಧಿಕಾರಿಗಳ ದಕ್ಷತೆಯಿಂದ ದೊರೈ ಅವರನ್ನು ಬಂಧಿಸಲಾಗಿತ್ತು.
ಒಲಂಪಸ್ ಗ್ರಾನೈಟ್ ಕಂಪನಿಯ ಮಾಜಿ ನಿರ್ದೇಶಕ ದಯಾನಿಧಿ ಗ್ರಾನೈಟ್ ಹಗರಣ ಪ್ರಮುಖ ರುವಾರಿಯಾಗಿದ್ದು ತಲೆಮರೆಸಿಕೊಂಡಿದ್ದರು. ದೊರೈ ಬಂಧಿಸಲು ಸರ್ಚ್ ವಾರೆಂಟ್ ಹೊರಡಿಸಲಾಗಿತ್ತು. ನಂತರ ನ್ಯಾಯಾಂಗ ಬಂಧನದಲ್ಲಿರಿಸಲಾಗಿತ್ತು ಎಂದು ಮದುರೈ ಎಸ್ಪಿ ವಿ ಬಾಲಕೃಷ್ಣನ್ ಹೇಳಿದ್ದಾರೆ.
ಸುಮಾರು 7 ಕಂಪನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದೇವೆ. ಯಾರು ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಬಾಲಕೃಷ್ಣನ್ ಹೇಳಿದ್ದಾರೆ.
ಕೆಲವು ಖಾಸಗಿ ಕ್ವಾರಿಗಳು ಸರ್ಕಾರಿ ಸೌಮ್ಯದ ಕ್ವಾರಿಗಳ ಪಕ್ಕದಲ್ಲೇ ಕೆಲಸ ನಿರ್ವಹಿಸುತ್ತವೆ. ಸರ್ಕಾರದಿಂದ ಅನುಮತಿ ಪಡೆಯದೇ ಗ್ರಾನೈಟ್ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಪ್ರತಿಯೊಂದು ಗ್ರಾನೈಟ್ ಬ್ಲಾಕ್ 30 ಸಾವಿರದಿಂದ 60 ಸಾವಿರದವರೆಗೆ ನಡೆಯುತ್ತದೆ.
ಅದರೆ, ಕೆಲವರು ಈ ಬೆಲೆಯ ಹತ್ತು ಪಟ್ಟು ದುಡ್ಡು ವಸೂಲಿ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಗರಣದಲ್ಲಿ ಪ್ರಮುಖ ರಾಜಕಾರಣಿಗಳು ಭಾಗಿಯಾಗಿರುವ ಶಂಕೆಯಿದೆ ಎಂದು ಬಾಲಕೃಷ್ಣನ್ ತಿಳಿಸಿದ್ದಾರೆ












Click it and Unblock the Notifications