ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ನೀರಿನ ಬಿಲ್ ಆನ್ ಲೈನ್ ನಲ್ಲೇ ಕಟ್ಟಿ

By Mahesh
|
Google Oneindia Kannada News

You can now pay your water bills online
ಬೆಂಗಳೂರು, ಡಿ.10: ಕಾವೇರಿ ನಾಲ್ಕನೇ ಹಂತದ ಯೋಜನೆ ಮೂಲಕ ಬೆಂಗಳೂರಿನ ಅನೇಕ ಭಾಗಗಳಿಗೆ ನೀರು ಹರಿಸುವ ಉತ್ಸಾಹದಲ್ಲಿರುವ ಜಲ ಮಂಡಳಿ ಹೊಸ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ.

ಇನ್ಮುಂದೆ ನೀರಿನ ಬಿಲ್ ಕಟ್ಟಲು ಉದ್ದುದ್ದಾ ಕ್ಯೂ ನಲ್ಲಿ ನಿಲ್ಲಬೇಕಾಗಿಲ್ಲ. ಆನ್ ಲೈನ್ ಮೂಲಕ ಬೆಂಗಳೂರು ಜಲ ಮಂಡಲಿ(BWSSB) ವೆಬ್ ಸೈಟ್ ನಲ್ಲೇ ಬಿಲ್ ಹಣ ಪಾವತಿಸಬಹುದಾಗಿದೆ ಎಂದು ಜಲಮಂಡಳಿ ಚೇರ್ಮನ್ ಗೌರವ್ ಗುಪ್ತಾ ಹೇಳಿದ್ದಾರೆ.

ಆನ್ ಲೈನ್ ಮೂಲಕ ಪಾವತಿ ತುಂಬಾ ಸುಲಭವಾಗಿದೆ. ಯಾವುದೇ ಬ್ಯಾಂಕಿನ ಗೇಟ್ ವೇ ಬಳಸಿ ಹಣ ಪಾವತಿ ಮಾಡಬಹುದು.

ಆದರೆ, ಗ್ರಾಹಕರು ಮೊದಲಿಗೆ ವೆಬ್ ಸೈಟ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಒಮ್ಮೆ ನೋಂದಾಯಿಸಿಕೊಂಡ ಮೇಲೆ ಹೆಸರು ಹಾಗೂ ಪಾಸ್ ವರ್ಡ್ ಬಳಸಿ ಬಿಲ್ ಪಾವತಿ ಮಾಡಬಹುದು.

ಈ ಹಿಂದೆ ಕಟ್ಟಲಾದ ಆರು ಬಿಲ್ ಗಳ ವಿವರಗಳು ಆನ್ ಲೈನ್ ನಲ್ಲಿ ಲಭ್ಯವಿರುತ್ತದೆ. ಅಲ್ಲದೆ ಇನ್ಮೇಲೆ ನೋಂದಾಯಿತ ಗ್ರಾಹಕರಿಗೆ ಎಸ್ ಎಂಎಸ್ ಅಲರ್ಟ್ ಹಾಗೂ ಇ ಮೇಲ್ ಅಲರ್ಟ್ ಗಳನ್ನು ಕಳಿಸಲು ಜಲಮಂಡಳಿ ಚಿಂತಿಸಿದೆ ಎಂದು ಗೌರವ್ ಗುಪ್ತಾ ಹೇಳಿದರು.

ರಿಜಿಸ್ಟರ್ ಮಾಡುವುದು ಹೇಗೆ?
* bwssb.org ಗೆ ಹೋಗಿ
* Register ಒತ್ತಿ ( ಮತ್ತೊಂದು ಪುಟಕ್ಕೆ ಕರೆದೊಯ್ಯುತ್ತದೆ)
* User name : ನಿಮ್ಮ ಹೆಸರು ತುಂಬಿಸಿ
* E-Mail: ವ್ಯವಹಾರಿಕ ಉದ್ದೇಶಕ್ಕಾಗಿ ಇಮೇಲ್ ಐಡಿ ಕೊಡಿ
* Consumar Name: ಯಾರ ಹೆಸರಿನಲ್ಲಿ ಬಿಲ್ ಇದೆಯೋ ಆ ಹೆಸರು ನೀಡಿ
* Password: ಪಾಸ್ ವರ್ಡ್ ನೀಡಿ
* Password Confirmation: ಮತ್ತೊಮ್ಮೆ ಮೇಲೆ ನೀಡಿದ ಪಾಸ್ ವರ್ಡ್ ನೀಡಿ
* Type of Registration: ದೂರು ದಾಖಲಿಸಲೋ ಅಥವಾ ಬಿಲ್ ಪಾವತಿಸೋ ಎಂಬುದನ್ನು ನಮೂದಿಸಿ
* Mobile Number : ಮೊಬೈಲ್ ಸಂಖ್ಯೆ ನೀಡಿ

ಬಿಲ್ ಪಾವತಿ ಹಾಗೂ ಬಿಲ್ ನೋಡಲು
RR Number : ಬಿಲ್ ನಲ್ಲಿರುವ ಆರ್ ಆರ್ ಸಂಖ್ಯೆ ನೀಡಿ
Door/house number: ಮನೆ ಸಂಖ್ಯೆ
Street: ವಿಳಾಸ ನೀಡಿ
Area: ವಿಳಾಸ ನೀಡಿ
Ward Number: 198 ವಾರ್ಡ್ ಪೈಕಿ ನಿಮ್ಮ ವಾರ್ಡ್ ಸಂಖ್ಯೆ ಆಯ್ದುಕೊಳ್ಳಿ ಉದಾ: 182: padmanabhanagar
Pin Code: ಪಿನ್ ಕೋಡ್ ಹಾಕಿ

pass word : ಮತ್ತೊಮ್ಮೆ ಪಾಸ್ ವರ್ಡ್ ಹಾಕಿ
twitter: ಟ್ವಿಟ್ಟರ್ ಖಾತೆ ಇದ್ದರೆ ಹಾಕಿ
ನಂತರ ನಿಮ್ಮ ಸ್ವ ವಿವರಗಳನ್ನು ನೀಡಿ

ಕೊನೆಯಲ್ಲಿ register ಬಟನ್ ಒತ್ತಿ. ನಿಮ್ಮ ಅರ್ಜಿ ತುಂಬುವಿಕೆಯಲ್ಲಿ ತಪ್ಪಿದ್ದರೆ ಯಾವ ಜಾಗದಲ್ಲಿ ತಪ್ಪಿದೆ ಎಂದು ತೋರಿಸುತ್ತದೆ. ಇಲ್ಲದಿದ್ದರೆ, ಯಶಸ್ವಿಯಾಗಿ ನೋಂದಾಣಿಯಾಗಿದೆ ಎಂದು ತಿಳಿಸಲಾಗುತ್ತದೆ.

ನಂತರ ನಿಮ್ಮ ಯೂಸರ್ ಐಡಿ ಹಾಗೂ ಪಾಸ್ ವರ್ಡ್ ಬಳಸಿ ಬಿಲ್ ಪಾವತಿ ಮಾಡಬಹುದು. ಹೆಚ್ಚಿನ ಮಾಹಿತಿಗೆ ಜಲಮಂಡಳಿ ಸಹಾಯವಾಣಿಗೆ ತಪ್ಪದೇ ಕರೆ ಮಾಡಿ: 080-2223 8888

English summary
Cusomers can now register at Bangalore Water Supply and Sewerage Board (BWSSB) website and pay water bill though any bank payment gateway. BWSSB also plan to start SMS alerts and also mail alerts to registered consumers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X