ಮಾರುಕಟ್ಟೆ ಮೌಲ್ಯ: ರಿಲಯನ್ಸ್ ಮೇಲಕ್ಕೆ ಟಿಸಿಎಸ್ ಕೆಳಕ್ಕೆ

Market cap of top 10 firms
ಬೆಂಗಳೂರು, ಡಿ.10: ದೇಶದ ಅಗ್ರಗಣ್ಯ 10 ಕಂಪನಿಗಳ ಮಾರುಕಟ್ಟೆ ಮೌಲ್ಯ ಕಳೆದ ವಾರ ಸುಧಾರಣೆ ಕಂಡಿದೆ. ಕಳೆದ ವಾರದ ಲೆಕ್ಕಾಚಾರದಂತೆ ಟಾಪ್ 5 ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ 31,242 ಕೋಟಿ ರು ದಾಟಿದೆ. ಇಂಧನ ಕ್ಷೇತ್ರದ ದಿಗ್ಗಜ ರಿಲಯನ್ಸ್ ಸಂಸ್ಥೆ ಟಿಸಿಎಸ್ ಸಂಸ್ಥೆಯನ್ನು ಕೆಳಕ್ಕೆ ತಳ್ಳಿ ಅಗ್ರಸ್ಥಾನಕ್ಕೇರಿದೆ.

ನ.30 ರಿಂದ ಡಿ.7ರ ತನಕದ ಮೌಲ್ಯ ಗಣತಿಯಂತೆ ರಿಲಯನ್ಸ್ ಇಂಡಸ್ಟ್ರೀಸ್ ಲಿ ಸಂಸ್ಥೆ 13,309 ಕೋಟಿ ರು ಗಳಿಸಿ 2,69,907 ಕೋಟಿ ರು ಮಾರುಕಟ್ಟೆ ಮೌಲ್ಯದೊಂದಿಗೆ ಅಗ್ರಸ್ಥಾನಕ್ಕೇರಿದೆ. ಕಳೆದ ವಾರ ಕಂಪನಿಯ ಷೇರುಗಳು ಶೇ 5 ರಷ್ಟು ಏರಿಕೆ ಕಂಡಿತ್ತು.

ಉಳಿದಂತೆ ಸರ್ಕಾರಿ ಸ್ವಾಮ್ಯದ ಎಸ್ ಬಿಐ 9,448 ಕೋಟಿ ರು ಮೌಲ್ಯ ಹೆಚ್ಚಿಸಿಕೊಂಡು ಮಾರುಕಟ್ಟೆಯಲ್ಲಿ 1,55,068 ಕೋಟಿ ರು ಮೌಲ್ಯ ಹೊಂದಿದೆ.

ಕಳೆದ ವಾರ ಅಗ್ರಸ್ಥಾನದಲ್ಲಿದ್ದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆ 8788 ಕೋಟಿ ರು ಕಳೆದುಕೊಂಡರೂ 2,48,165 ಕೋಟಿ ರು ನೊಂದಿದೆ ಎರಡನೇ ಸ್ಥಾನ ಕಾಯ್ದುಕೊಂಡಿದೆ.

ಟಿಸಿಎಸ್ ಬದ್ಧ ವೈರಿ ಇನ್ಫೋಸಿಸ್ ಸಂಸ್ಥೆ ಮೌಲ್ಯ 6,713 ಕೋಟಿ ರು ಕಳೆದುಕೊಂಡು 1,33,204 ಕೋಟಿ ರು ಮೌಲ್ಯ ಮಾತ್ರ ಹೊಂದಿದೆ.

ಎನ್ ಟಿಪಿಸಿ ಕೂಡಾ 1772 ಕೋಟಿ ರು ಮೌಲ್ಯ ಕಳೆದುಕೊಂಡು 1.31.886 ಕೋಟಿ ರು ಮೌಲ್ಯ ಗಳಿಸಿದೆ.

ಸಿಐಎಲ್ 1737 ಕೋಟಿ ರು ಕಳೆದುಕೊಂಡು 2,29,410 ಕೋಟಿ ರು ನೊಂದಿಗೆ ಕೆಲ ಸ್ಥಾನ ಕೆಳಗಿಳಿದಿದೆ. ಎಚ್ ಡಿಎಫ್ ಸಿ ಬ್ಯಾಂಕ್ ಕೂಡಾ ಕಳೆದ ವಾರ 2127 ಕೋಟಿ ರು ಕಳೆದುಕೊಂಡು 1,63,712 ಕೋಟಿ ರು ಮೌಲ್ಯ ಹೊಂದಿದೆ.

ಟಾಪ್ 10 ಕಂಪನಿಗಳು, ಮಾರುಕಟ್ಟೆ ಮೌಲ್ಯ (ನ.30-ಡಿ.7) ಹೀಗಿದೆ:
1. ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್, 2,69,907 ಕೋಟಿ ರು
2. ಟಿಸಿಎಸ್, 2,48,165 ಕೋಟಿ ರು
3. ಐಟಿಸಿ, 2,37,273 ಕೋಟಿ ರು
4. ಸಿಐಎಲ್, 2,29,410 ಕೋಟಿ ರು
5. ಒಎನ್ ಜಿಸಿ, 2,28,902 ಕೋಟಿ ರು
6. ಎಚ್ ಡಿಎಫ್ ಸಿ ಬ್ಯಾಂಕ್, 1,63,712 ಕೋಟಿ ರು
7. ಎಸ್ ಬಿಐ, 1,55,068 ಕೋಟಿ ರು
8. ಇನ್ಫೋಸಿಸ್, 1,33,204 ಕೋಟಿ ರು
9. ಎನ್ ಟಿಪಿಸಿ, 1,31,886 ಕೋಟಿ ರು
10. ಐಸಿಐಸಿಐ ಬ್ಯಾಂಕ್, 1,30,402 ಕೋಟಿ ರು

ಬಿಎಸ್ ಇನಲ್ಲಿ ನೋಂದಾಯಿತ ಸಂಸ್ಥೆಯ ಮಾರುಕಟ್ಟೆ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಏರಿಳಿತ ಹಾಗೂ ಷೇರು ಮೌಲ್ಯದ ಮೇಲೆ ಬದಲಾವಣೆಗೆ ಒಳಪಟ್ಟಿರುತ್ತದೆ. ಇಲ್ಲಿ ನೀಡಿರುವ ಅಂಕಿ ಅಂಶಗಳು ಸೋಮವಾರ, 10 ಡಿಸೆಂಬರ್ 2012ಕ್ಕೆ ಅನ್ವಯವಾಗುವಂತೆ ಮಾತ್ರ ಇದೆ ಎಂದು ಓದಿಕೊಳ್ಳತಕ್ಕದ್ದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+