ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಭಾಷಣ ಮುಖ್ಯಾಂಶ

ಭಾಷಣದುದ್ದಕ್ಕೂ ತಮ್ಮ ರಾಜಕೀಯ ಜೀವನ, ಬಿಜೆಪಿ, ಜೆಡಿಎಸ್ ನಂಬಿಕೆ ದ್ರೋಹದ ಬಗ್ಗೆ ವಿಸ್ತಾರವಾಗಿ ಹೇಳಿದರು. ಕೆಜೆಪಿ ಬೆಂಬಲಿತ ಶಾಸಕರ ಮೇಲೆ ಕ್ರಮ ಕೈಗೊಂಡರೆ ಪರಿಣಾಮ ನೆಟ್ಟಗಿರಲ್ಲ.
ರಾಜ್ಯ ಪ್ರವಾಸ ಹೊರಡುತ್ತೇನೆ ಎಂದು ಹೇಳಿದರು. ಒಟ್ಟಾರೆ ಇಡೀ ಭಾಷಣ ಹಳೆ ಭಾಷಣಗಳ ರೀಮಿಕ್ಸ್ ನಂತಿತ್ತು.. ಬೆಂಬಲಿಗರು ಕೈ ಎತ್ತಿ ಎಂದು ಮೂರು ಬಾರಿ ಕೈ ಎತ್ತಿಸಿದ್ದು ವಿಶೇಷವಾಗಿತ್ತು. ಭಾಷಣದ ಮುಖ್ಯಾಂಶಗಳನ್ನು ತಪ್ಪದೇ ಓದಿ:
* ಪುರಸಭೆ ಅಧ್ಯಕ್ಷನಾಗಿದ್ದವನನ್ನು ಮುಖ್ಯಮಂತ್ರಿ ಮಾಡಿದ್ದು ಕರ್ನಾಟಕದ 6 ಕೋಟಿ ಜನ ಯಾವ ಪಕ್ಷವನ್ನು ನಾನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದೆ.
* ಹಗಲು ರಾತ್ರಿ ನಿದ್ದೆಗೆಟ್ಟು ರಾಜ್ಯದ ಪ್ರವಾಸ ಮಾಡಿದೆ.ಸಿಎಂ ಆಗಬೇಕು ಎಂಬುದು ನನ್ನ ಆಸೆಯಲ್ಲ.
* ಇದು ಚಿನ್ನದ ನಾಡು, ಗಂಧದ ಬೀಡು, ಕೈ ಚಾಚಿ ಬೇಡದೆ ಕೈಚಾಚಿ ನೀಡುವಂಥ ಸ್ಥಿತಿಗೆ ರೈತರು ಬೆಳೆಯಬೇಕು ಎಂದು ಶ್ರಮಿಸಿದೆ.
* ಆದರೆ, ಏನು ತಪ್ಪು ಮಾಡ ನನ್ನನ್ನು ಷಡಂತ್ರ್ಯಕ್ಕೆ ಬಲಿಯಾದೆ. 75 ಶಾಸಕರ ಬೆಂಬಲ ಇದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ.
* ಆಗಿನ ಅಧ್ಯಕ್ಷರು 24 ಗಂಟೆಯಲ್ಲಿ ನಿಮ್ಮನ್ನು ರಾಜ್ಯಾಧ್ಯಕ್ಷ ಮಾಡುತ್ತೇನೆ ಎಂದರು.
* ಯಾವ ನನ್ನ ಮೇಲೆ ವಿನಾಕರಣ ಕೋರ್ಟ್ ಕೇಸು ಹಾಕಿದ್ದು ಗೊತ್ತಿದ್ದರೂ ಯಾರು ಬೆಂಬಲಿಸಲಿಲ್ಲ.
* ಕೋರ್ಟ್ ನಿರಪರಾಧಿ ಎಂದು ಘೋಷಿಸಿದ ತಕ್ಷಣವೆ ಸಿಎಂ ಸ್ಥಾನ ನೀಡುತ್ತೇವೆ ಎಂದು ಹೇಳಿದರು.ಆದರೆ ಕೈ ಕೊಟ್ಟರು.
* ಕುಮಾರಸ್ವಾಮಿ ಸಿಎಂ ಸ್ಥಾನ ಬಿಟ್ಟು ಕೊಟ್ಟರೂ ಷರತ್ತು ಹಾಕಿದರು. ಈ ರೀತಿ ಚೂರಿ ಹಾಕುವ ಜನರು ಪುಣ್ಯಕೋಟಿ ನಾಡಲ್ಲಿ ಇದ್ದಾರೆ.
* ನಾನು ಮುಖ್ಯಮಂತ್ರಿಯಾಗಿ ಮೂರುವರೆ ವರ್ಷವಾಗಿ ಅಧಿಕಾರದಲ್ಲಿದ್ದೆ. 27ನೇ ಮುಖ್ಯಮಂತ್ರಿಯಾಗಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ರೈತರ ಪರವಾಗಿ ಪ್ರತ್ಯೇಕ ಕೃಷಿ ಬಜೆಟ್ ನೀಡಿದೆ.
* ರೈತರು ಸಾಲದ ಬಡ್ಡಿ ದರ ವನ್ನು ಕಟ್ಟಲಾರದೆ ವಿಷ ಸೇವಿಸಿ ಪ್ರಾಣ ತೆತ್ತ ಉದಾಹರಣೆಗಳಿದೆ. ರೈತರ ಮಗನಾಗಿ ನಾನು ಬಡ್ಡಿ ಇಲ್ಲದೆ ಸಾಲ ನೀಡಿದೆ. ಶೇ 1 ರಿಂದ 3 ರಷ್ಟು ಬಡ್ಡಿದರದಲ್ಲಿ ಸಾಲ ಈ ವರೆಗೂ ನೀಡಿಲ್ಲ
* ಶೆಟ್ಟರ್ ಅವರಿಗೆ ಎಚ್ಚರಿಕೆ ನೀಡಿದ ಮೇಲೆ 17 ಲಕ್ಷಕ್ಕೂ ಅಧಿಕ ರೈತರ ಸಾಲ ಮನ್ನಾ ಮಾಡಲಾಯಿತು.
* ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದೆ. 17 ಲಕ್ಷ ಕುಟುಂಬಕ್ಕೆ ಭಾಗ್ಯಲಕ್ಷ್ಮಿ ಬಾಂಡ್ ಸಿಕ್ಕಿದೆ. ಆ ತಾಯಿ ಮುಸ್ಲಿಂ, ಹಿಂದೂ ತಾಯಂದಿರು ಆಶೀರ್ವಾದ ನೀಡಿದರು.
* ನಾಲ್ಕೈದು ದಿನಗಳ ನಂತರ ಬೀದರ್ ನಿಂದ ರಾಜ್ಯ ಪ್ರವಾಸ ಮಾಡುತ್ತೇನೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುತ್ತೇನೆ.
* ಯುವಕರೇ ನೀವೇ ನನ್ನ ಪಕ್ಷದ ಮುಂದಿನ ವಾರಸುದಾರರು. ನಾನು ನನ್ನ ರಕ್ತದಲ್ಲಿ ಬರೆದುಕೊಡಲು ಸಿದ್ಧನಿದ್ದೇನೆ. ಬಾವುಟ ಹಿಡಿದು ಕೊಂಡು ಕುಣಿಯಬೇಡಿ. ಪ್ರತಿ ಜಿಲ್ಲೆಯಲ್ಲಿ ಕೆಜೆಪಿಯಲ್ಲಿ ಕಟ್ಟಿ ಬೆಳೆಸಬೇಕು.
* ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು, ಸಾಮಾಜಿಕ ನ್ಯಾಯ ಇದು ನಮ್ಮ ಪಕ್ಷ ಘೋಷ ವಾಕ್ಯ
* ಮಹಾತ್ಮಾ ಗಾಂಧೀಜಿ ಅವರ ರಾಮರಾಜ್ಯ, ಬಿಆರ್ ಅಂಬೇಡ್ಕರ್ ಅವರ ಶೋಷಣೆ ಮುಕ್ತ ಸಮಾಜ, ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ ತತ್ವ ನಮಗೆ ಆದರ್ಶ
ಪ್ರಾದೇಶಿಕ ಪಕ್ಷಗಳ ಕಾಲ: ಉತ್ತರ ಪ್ರದೇಶ, ಬಿಹಾರ, ತಮಿಳುನಾಡು, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ತಲೆ ಬಾಗುತ್ತದೆ. ಪ್ರಾದೇಶಿಕ ಪಕ್ಷ ಸ್ಥಾಪಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸುವ ಮೂಲಕ ಹಿಡಿತ ಸಾಧಿಸಬೇಕಿದೆ. ಇಲ್ಲದಿದ್ದರೆ ಇಂದು ಕಾವೇರಿ ವಿಷಯದಲ್ಲಿ ಆಗಿರುವ ಅನ್ಯಾಯ ನಾಳೆ ಕೃಷ್ಣಾ ಸೇರಿದಂತೆ ಎಲ್ಲಾ ಸಮಸ್ಯೆಗಳಲ್ಲೂ ಆಗುತ್ತದೆ ಎಂದು ಯಡಿಯೂರಪ್ಪ ಹೇಳಿದರು.
* ಜಗದೀಶ್ ಶೆಟ್ಟರೇ, ನಮ್ಮ ಶಾಸಕರ ಬೆಂಬಲದಿಂದ ನೀವು ಮುಖ್ಯಮಂತ್ರಿಯಾಗಿದ್ದೀರಿ. ತಾಕತ್ತಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆ ಎದುರಿಸಿ.
[ಮುಂಭಾಗದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ..ಅಣ್ಣಾ ಯಾವಾಗ ಜೈಕಾರ ಹಾಕಬೇಕು, ಯಾವಾಗ ಧಿಕ್ಕಾರ ಹಾಕ್ಬೇಕು ಗೊತ್ತಿಲ್ಲ..ಮೊದಲು ನನ್ನ ಮಾತು ಕೇಳಿ] ಇಲ್ಲಿ ಬಂದಿರುವ ಶಾಸಕರ ಮೇಲೆ ಕ್ರಮ ಕೈಗೊಂಡರೆ ಪರಿಣಾಮ ನೆಟ್ಟಿಗಿರಲ್ಲ ಎಂದು ಮತ್ತೊಮ್ಮೆ ಗುಡುಗಿದರು.












Click it and Unblock the Notifications