ಸಚಿವ ಸುನಿಲ್ ವಲ್ಯಾಪುರೆ ರಾಜೀನಾಮೆ

Minister Sunil Vyalapure
ಬೆಂಗಳೂರು, ಡಿ.9: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಆಪ್ತ ಸುನಿಲ್ ವಲ್ಯಾಪುರೆ ಅವರು ಜಗದೀಶ್ ಶೆಟ್ಟರ್ ಅವರ ಸಚಿವ ಸಂಪುಟದಿಂದ ಹೊರ ನಡೆದಿದ್ದಾರೆ.

ಹಾವೇರಿ ಸಮಾವೇಶದ ಹಿನ್ನೆಲೆಯಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮೂಲ ಸೌಕರ್ಯ ಸಚಿವ ಸುನಿಲ್ ವಲ್ಯಾಪುರೆ ಹೇಳಿದ್ದಾರೆ.

ಯಡಿಯೂರಪ್ಪ ನೇತೃತ್ವದಲ್ಲಿ ಡಿ.9ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಸಮಾವೇಶದ ಹಿನ್ನೆಲೆಯಲ್ಲಿ ಸುನಿಲ್ ವಲ್ಯಾಪುರೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‌ಗೆ ಫ್ಯಾಕ್ಸ್ ಮೂಲಕ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ರಾಜೀನಾಮೆಯು ಅಧಿಕೃತವಾಗಿ ಅಂಗೀಕಾರವಾಗಿಲ್ಲ ಎಂದು ಸಚಿವಾಲಯದ ಮೂಲಗಳಿಂದ ತಿಳಿದು ಬಂದಿದೆ.ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನು ತಮ್ಮ ಹಸ್ತಾಕ್ಷರದೊಂದಿಗೆ ಖುದ್ದು ಸಚಿವರೆ ಮುಖ್ಯಂತ್ರಿಗೆ ಸಲ್ಲಿಸಬೇಕಾಗಿದೆ. ಫ್ಯಾಕ್ಸ್ ಮೂಲಕ ರಾಜೀನಾಮೆ ಪ್ರತಿ ಸಲ್ಲಿಸಿರುವುದರಿಂದ ಅದು ತಿರಸ್ಕೃತವಾಗಿದೆ ಎಂದು ಹೇಳಲಾಗಿದೆ.

ತುಮಕೂರು ಸಂಸದ ಬಸವರಾಜು ಅಮಾನತು ಹಾಗೂ ಸಹಕಾರ ಸಚಿವ ಬಿಜೆ ಪುಟ್ಟಸ್ವಾಮಿ ಅವರಿಗೆ ಸಚಿವ ಸಂಪುಟದಿಂದ ಕೊಕ್ ಸಿಕ್ಕ ಮೇಲೆ ಸುನಿಲ್ ಈ ಕ್ರಮ ಕೈಗೊಂಡಿದ್ದಾರೆ.

ರಾಜೀನಾಮೆಗೆ ಸಿದ್ಧರಾಗಿದ್ದ ಅಬಕಾರಿ ಸಚಿವ ರೇಣುಕಾಚಾರ್ಯ, ಕೃಷಿ ಸಚಿವ ಉಮೇಶ್ ಕತ್ತಿ ಅವರು ಈಗ ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ನಾನು ಹಾವೇರಿ ಸಮಾವೇಶಕ್ಕೆ ಹೋಗುತ್ತಿಲ್ಲ ಎಂದು ರೇಣುಕಾಚಾರ್ಯ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೊನೆ ಕ್ಷಣದಲ್ಲಿ ಬಿಜೆಪಿ ಸಚಿವರುಗಳ ಮನಸ್ಸು ಬದಲಾಗುವ ಸೂಚನೆ ಸಿಕ್ಕಿದ್ದು, ಏನಾಗುವುದೋ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+