ಕೆಜೆಪಿ ಸಮಾವೇಶದಲ್ಲಿ ಬಿಜೆಪಿ ಮಂದಿ ಯಾರಿದ್ದರು?
ಹಾವೇರಿ, ಡಿ.9: ಕರ್ನಾಟಕ ಜನತಾ ಪಕ್ಷಕ್ಕೆ ಜೈ ಎಂದು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿರುವ ಎಲ್ಲರನ್ನು ಶಾಸಕ ಎಂಡಿ ಲಕ್ಷ್ಮಿ ನಾರಾಯಣ ಅವರು ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮ ಮಟ ಮಟ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ.
ವೇದಿಕೆಯಲ್ಲಿ ಸುಮಾರು 100ಕ್ಕೂ ಅಧಿಕ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಮಧ್ಯ ಭಾಗದಲ್ಲಿರುವ ಹಾವೇರಿಯಲ್ಲಿ ಹಂಗಾಮಿ ಅಧ್ಯಕ್ಷ ಧನಂಜಯ್ ಕುಮಾರ್ ಅವರು ಬಿಎಸ್ ಯಡಿಯೂರಪ್ಪ ಅವರಿಗೆ ಅಧ್ಯಕ್ಷ ಪಟ್ಟವನ್ನು ಹಸ್ತಾಂತರಗೊಳಿಸಲಿದ್ದಾರೆ ಎಂದು ಲಕ್ಷ್ಮಿನಾರಾಯಣ ಹೇಳಿದರು.
ಸಮಯ 11.20: ಹಾವೇರಿ ಹಾನಗಲ್ ರಸ್ತೆಯಲ್ಲಿರುವ ಎಂಎಲ್ ಸಿ ಶಿವರಾಜ್ ಸಜ್ಜನ್ ಅವರ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಬಿಎಸ್ ಯಡಿಯೂರಪ್ಪ ಅವರು ಲೆಹರ್ ಸಿಂಗ್ ಮತ್ತು ಶೋಭಾ ಕರಂದ್ಲಾಜೆ ಜೊತೆ ಸಮಾರಂಭದ ವೇದಿಕೆಗೆ ಆಗಮಿಸಿಸಲಿದ್ದಾರೆ ಎಂದು ಲಕ್ಷ್ಮಿನಾರಾಯಣ ಹೇಳಿದರು.
ಯಡಿಯೂರಪ್ಪ ಹೇಳಿಕೆ: ಬಿಜೆಪಿ ಸಂಬಂಧ ಕಡಿದು ಹೋಗಿದೆ. ಈಗ ನಡೆಯುತ್ತಿರುವುದು ಸಮ್ಮಿಶ್ರ ಸರ್ಕಾರ ಇಷ್ಟ ಇದ್ರೆ ಸರ್ಕಾರ ನಡೆಸಿ ಇಲ್ಲದಿದ್ದರೆ ವಿಧಾನಸಭೆ ವಿಸರ್ಜಿಸಿ, ಚುನಾವಣೆಗೆ ಹೋಗೋಣ. ರಾಜ್ಯದೆಲ್ಲೆಡೆ ಪ್ರವಾಸ ನಡೆಸುತ್ತೇನೆ ಎಂದು ಬಿಎಸ್ ಯಡಿಯೂರಪ್ಪ ಅವರು ಚುಟುಕಾಗಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. [ಮುಂದೆ ಓದಿ...]

ವೇದಿಕೆಯಲ್ಲಿ ನಟಿಯರಾದ ಶ್ರುತಿ, ಮಾಲಾಶ್ರೀ, ಪೂಜಾಗಾಂಧಿ, ನಟ ದೊಡ್ಡಣ್ಣ ಕಾಣಿಸಿಕೊಂಡಿದ್ದಾರೆ.
ವೇದಿಕೆ ಏರಲು ಸಜ್ಜಾಗಿರುವ ಶಾಸಕರ ಅಸಮಗ್ರ ಪಟ್ಟಿಯತ್ತ ಒಮ್ಮೆ ಗಮನ ಹರಿಸಿ..
* ಎಂಎಲ್ ಸಿ ಶಿವರಾಜ್ ಸಜ್ಜನ್
* ಎಂಎಲ್ ಸಿ ಎಂಡಿ ಲಕ್ಷ್ಮಿ ನಾರಾಯಣ್
* ಮೋಹನ್ ಲಿಂಬೆಕಾಯಿ
* ಎಂಎಲ್ ಸಿ ಬಿಜೆ ಪುಟ್ಟಸ್ವಾಮಿ
* ಎಂಎಲ್ ಸಿ ಲೆಹರ್ ಸಿಂಗ್
ಇತರೆ ಪಕ್ಷದ ಮುಖಂಡರು
* ಜೆ ಮಾಧು ಸ್ವಾಮಿ
* ಎಚ್ ಎಂ ವಿಶ್ವನಾಥ್
* ಜಬ್ಬಾರ್ ಖಾನ್ ಹೊನ್ನಾಳಿ
* ಜಿ ನಾಗಮಾರಪಲ್ಲಿ
ವೇದಿಕೆ ಏರದವರು:
* ಸಚಿವ ಸಿಎಂ ಉದಾಸಿ
* ಸಚಿವೆ ಶೋಭಾ ಕರಂದ್ಲಾಜೆ
* ಸಚಿವ ರೇಣುಕಾಚಾರ್ಯ
* ಸಚಿವ ಬಸವರಾಜ್ ಬೊಮ್ಮಾಯಿ
ಸಂಸದರು
* ಬಿಎವೈ ರಾಘವೇಂದ್ರ
* ಸಂಸದ ಶಿವಕುಮಾರ್ ಉದಾಸಿ
ಶಾಸಕರು:
* ಹರಾತಾಳು ಹಾಲಪ್ಪ, ಸೊರಬ
* ಎಸ್ ಸುರೇಶ್, ತರೀಕೆರೆ
* ಚಂದ್ರಣ್ಣ, ಹೊಳಲ್ಕೆರೆ
* ನೆಹರೂ ಓಲೇಕಾರ, ಹಾವೇರಿ
* ಎಸ್ ಎಚ್ ಚಿಕ್ಕನಗೌಡರ್, ಕುಂದಗೋಳ
* ಸುರೇಶ್ ಗೌಡ ಪಾಟೀಲ್, ಬ್ಯಾಡಗಿ
* ಶ್ರೀಶೈಲಪ್ಪ ಬಿದನೂರು, ಗದಗ
* ಬಿ ಶಿವಣ್ಣ, ರಾಣೆಬೆನ್ನೂರು
* ಚಂದ್ರಕಾಂತ ಬೆಲ್ಲದ್, ಧಾರವಾಡ
* ಬಿಪಿ ಹರೀಶ್, ಹರಿಹರ
* ಸಿಸಿ ಪಾಟೀಲ್, ನರಗುಂದ
* ಸುನಿಲ್ ವಲ್ಯಾಪುರೆ, ಚಿಂಚೋಳಿ
* ರಾಮಣ್ಣ ಲಮಾಣಿ, ಶಿರಹಟ್ಟಿ
* ಲಕ್ಷ್ಮಿ ನಾರಾಯಣ್, ಬೈಂದೂರು
ಚನ್ನಗಿರಿ ಶಾಸಕ ಮೂಡಾಳ್ ವಿರೂಪಕ್ಷಪ್ಪ, ಕಡೂರು ಶಾಸಕ ವಿಶ್ವನಾಥ್ ಟೀ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು.
ಟೀ ಪಾರ್ಟಿಗೆ ಕೈ ಕೊಟ್ಟವರು: ಸಚಿವ ಸೋಮಣ್ಣ, ಉಮೇಶ್ ಕತ್ತಿ, ಲಕ್ಷ್ಮಣ್ ಸವದಿ, ಪರಣ್ಣ ಮುನವಳ್ಳಿ, ವೀರಣ್ಣ ಚರಂತಿಮಠ, ಎಸ್ ವಿ ರಾಮಚಂದ್ರ, ಜಗದೀಶ್ ಮೆಟ್ಟಿಗೌಡ, ಶ್ರೀನಾಥ್ ಕುಲಕರ್ಣಿ, ಬಸವರಾಜ್ ಪಾಟೀಲ್, ವಾಲ್ಮೀಕಿ ನಾಯಕ, ವಿಠಲ್ ಕೆ, ಸುರೇಶ್ ಎಂ, ಸಿದ್ದು ಸವದಿ












Click it and Unblock the Notifications