ಮೂರನೇ ದಿನವೂ ಜಾರಿದ ಚಿನ್ನದ ಬೆಲೆ

ಇಂದು ಗುರುವಾರವೂ ಚಿನ್ನದ ಬೆಲೆ 10 ಗ್ರಾಂ.ಗೆ 350 ರೂ. ಕುಸಿದಿದೆ. ರಾಷ್ಟ್ರದ ರಾಜಧಾನಿಯಲ್ಲಿ ಇಂದಿನ ಬೆಲೆ 31,340 ರೂ. ಗೆ ಇಳಿದಿದೆ.
ಮುಸುಕಾದ ಚಿನ್ನದ ಬೆಲೆ: ಜಾಗತಿಕ ಮಟ್ಟದಲ್ಲಿ ಕಳೆಗುಂದಿದ ಚಿನ್ನದ ವಹಿವಾಟು ಮತ್ತು ದೇಶೀಯ ವ್ಯಾಪರಸ್ಥರಿಂದ ಬೇಡಿಕೆ ಕುಸಿದಿರುವುದು ಈ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಗಮನಾರ್ಹವೆಂದರೆ ಚಿನ್ನದ ಜತೆಗೆ ಬೆಳ್ಳಿ ದರವೂ 450 ರೂ. ಕುಸಿದಿದೆ. 1 ಕೆಜಿ ಬೆಳ್ಳಿ ದರ ದಿಲ್ಲಿಯಲ್ಲಿ 61,000 ರೂ. ನಷ್ಟಿದೆ. ಔದ್ಯಮಿಕ ವಲಯದಿಂದಲೂ ಈ ಲೋಹಗಳಿಗೆ ಬೇಡಿಕೆ ಕುಗ್ಗಿದೆ.
ಇನ್ನು, ದಾಸ್ತಾನುದಾರರು ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದ್ದು, ಬೆಲೆ ಇನ್ನೂ ಕುಗ್ಗಲಿ ಎಂದು ಆಶಿಸುತ್ತಿದ್ದಾರೆ. ಕಳೆದೊಂದು ತಿಂಗಳಲ್ಲಿ ಇಂದಿನ ಚಿನ್ನದ ದರ ಅತ್ಯಂತ ಕಡಿಮೆಯಾಗಿದೆ. ಕಳೆದೆರಡು ದಿನಗಳಲ್ಲಿ ಚಿನ್ನದ ದರ 320, 320 ರೂ ಕಡಿಮೆಯಾಗಿದೆ.
ಇನ್ನು ಸರಕು ವಾಯಿದಾ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಕುಸಿದಿದ್ದು ಇಂದು 10 ಗ್ರಾಂ ಚಿನ್ನವು 31,000 ರೂ. ಗೆ ಬಿಕರಿಯಾಗಿದೆ. ಹಾಗಾಗಿ ಚಿಕ್ಕಪುಟ್ಟ ಖರೀದಿದಾರರು ಈಗ ಚಿನ್ನದ ಖರೀದಿಗೆ ಮುಂದಾಗಬಹುದು.












Click it and Unblock the Notifications