ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಂದ ಗ್ಯಾಂಗ್ ರೇಪ್

nepal-teenager-molest-delhi-jamia-milia-islamia-students
ನವದೆಹಲಿ, ಡಿ.5: ಹದಿಹರಯದ ನೇಪಾಳಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದ ಮೇಲೆ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯ ನಾಲ್ವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಲ್ಲಿ ಮೂವರು ವಿ.ವಿ. ಯ ಕಾನೂನು ವಿದ್ಯಾರ್ಥಿಗಳು. ನೇಪಾಳದ 16 ವರ್ಷದ ಬಾಲಕಿಯ ಮೇಲೆ ಸತತವಾಗಿ 2 ತಿಂಗಳ ಕಾಲ ಇವರು ದಕ್ಷಿಣ ದೆಹಲಿಯ ಭರತ್ ನಗರದಲ್ಲಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಸದರಿ ಪಿಯುಸಿ ವಿದ್ಯಾರ್ಥಿನಿಯನ್ನು ಅಪಹರಿಸಿ, ಅತ್ಯಾಚಾರ ನಡೆಸಿದ ಆರೋಪದ ಮೇಲೆ ಮೊನ್ನೆ ಸೋಮವಾರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ವಿವರ: ಅಪಾರ್ಟ್ ಮೆಂಟಿನಲ್ಲಿ ಸ್ನೇಹಿತೆಯೊಂದಿಗೆ ವಾಸವಾಗಿದ್ದ ಸದರಿ ಪಿಯುಸಿ ಬಾಲಕಿ, ತದನಂತರ ಕಳೆದ ಸೆಪ್ಟೆಂಬರಿನಲ್ಲಿ ಪ್ರಕರಣದ ಆರೋಪಿಗಳಾದ ನಾಲ್ವರ ಜತೆ ವಾಸಿಸತೊಡಗಲು ನಿರ್ಧರಿಸಿದ್ದಳು. ಆದರೆ ಮೊದಲ ದಿನವೇ ಬಾಲಕಿಯ ಮೇಲೆ ಮುಗಿಬಿದ್ದ ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ವಿಷಯವನ್ನು ಬಹಿರಂಗಪಡಿಸಿದರೆ ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

'ಬಂಧಿತರಲ್ಲಿ ವಿ.ವಿ.ಯ ಮೂವರು ಕಾನೂನು ವಿದ್ಯಾರ್ಥಿಗಳು ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದೇ ಅಲ್ಲದೇ ತಮ್ಮ ಮತ್ತೊಬ್ಬ ಸ್ನೇಹಿತನಿಂದಲೂ ತನ್ನ ಮೇಲೆ ಅತ್ಯಾಚಾರ ಮಾಡಿಸಿದ್ದಾರೆ' ಎಂದು ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಲವತ್ತುಕೊಂಡಿದ್ದಾಳೆ.

ಕಳೆದ ವಾರ ಆರೋಪಿಗಳ ಕಪಿಮುಷ್ಟಿಯಿಂದ ಪಾರಾಗುವಲ್ಲಿ ಯಶಸ್ವಿಯಾದ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಳು. ಬಾಧಿತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+