ಹಿಂಜರಿತದ ಭೀತಿ: ಟೆಕ್ಕಿಗಳಿಗೆ MNCಗಳು ಬೇಡವಾದವೇ!?

gate-engg-students-find-new-faith-in-psus-than-mncs
ಬೆಂಗಳೂರು, ಡಿ.5: ಮೊನ್ನೆಮೊನ್ನೆಯವರೆಗೂ ಇಂಜಿನಿಯರಿಂಗ್ ಕಾಲೇಜುಗಳ ಗೇಟು ಬಳಿಗೇ ತೆರಳಿ ಅಲ್ಲಿನ ಭಾವಿ ಇಂಜಿನಿಯರುಗಳನ್ನು ವಿಶ್ವಾಸದಿಂದ ಮಾತನಾಡಿಸುತ್ತಾ ಬಹುರಾಷ್ಟ್ರೀಯ/ಖಾಸಗಿ ಕಂಪನಿಗಳು ತಮ್ಮ ತಮ್ಮ ಶಕ್ತಿ/ಸಾಮರ್ಥ್ಯ ಮೀರಿದ ಸಂಬಳ fix ಮಾಡಿ ಅವರನ್ನು ಖರೀದಿಸುತ್ತಿದ್ದವು.

ಆ ಇಂಜಿನಿಯರುಗಳೂ ಬಿಮ್ಮನೆ ಬೀಗುತ್ತಾ ಕಾಲೇಜು ಕ್ಯಾಪಸ್ಸಿನಿಂದ ನೇರವಾಗಿ ಕಂಪನಿ ಕಚೇರಿಗಳನ್ನು ತಲುಪುತ್ತಿದ್ದವು. ಈ ಮಧ್ಯೆ ಮನೆ-ಮಠ, ಬಂಧು-ಬಾಂಧವರರನ್ನು ಮರೆತು ಕಂಪನಿಗಳ ಚಾಕರಿಗೆ ಅಂಕಿತರಾಗುತ್ತಿದ್ದರು.

ಆದರೆ ಎಷ್ಟು ಕಾಲ ಅಂತ ಇದು ನಡೆಯುತ್ತದೆ? MNC ನೌಕರಿಗಳು ನೀರ ಮೇಲಿನ ಗುಳ್ಳೆ ಎಂಬುದು ಮನವರಿಕೆಯಾಗತೊಡಗಿವೆ. MNCಗೆ ಸೇರಿದರೆ ವಿದೇಶಗಳನ್ನು ಸುತ್ತಬಹುದು ಎಂಬುದೂ ಈಗ ಬೇಡವಾಗಿದೆ.

ನೆಮ್ಮದಿಯ ಅರಸುತ್ತಾ: ಅದರಲ್ಲೂ ಆರ್ಥಿಕ ಹಿಂಜರಿತದ ಹೆಸರಿನಲ್ಲಿ ಈ ಕಂಪನಿಗಳು ತಮ್ಮನ್ನು squeeaze ಮಾಡುತ್ತಿವೆ ಎಂಬುದನ್ನು ಉದ್ಯೋಗಿಗಳು ಈಗೀಗ ಅರ್ಥೈಸಿಕೊಳ್ಳುತ್ತಿದ್ದಾರೆ. ಇದೇ ವೇಳೆ, ದೇಶದ ಹಳೆಯ ಸಾರ್ವಜನಿಕ ಕಂಪನಿಗಳು (PSU) ಗತವೈಭವವನ್ನು ಮರಳಿ ಗಳಿಸುತ್ತಿವೆ.

ಈ PSUಗಳು ಕೊಡಮಾಡುವ ಆಕರ್ಷಕ ಸಂಬಳ, ಉದ್ಯೋಗ ಭದ್ರತೆ, ಅಪರಾತ್ರಿಯಲ್ಲಿ ಕೆಲಸ ಮಾಡುವ ಕಾಟವಿಲ್ಲದಿರುವುದು, ಆರೋಗ್ಯಕರ ಉದ್ಯೋಗ ವಾತಾವರಣ ಇವೇ ಮೊದಲಾದ ಪಾರಂಪರಿಕ ಸವಲತ್ತುಗಳು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಕರ್ಷಕವಾಗುತ್ತಿವೆ. ಇದರಿಂದ ಭಾವಿ ಇಂಜಿನಿಯರಿಗಳು PSUಗಳತ್ತ ದಾಪುಗಾಲು ಹಾಕುತ್ತಿದ್ದಾರೆ.

'ನವ' ರತ್ನಗಳು: ಇಂಜಿನಿಯರಿಂಗ್ ವಿದ್ಯಾರ್ಥಿಗಳು 2013ನೇ ಶೈಕ್ಷಣಿಕ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ GATE ಪರೀಕ್ಷೆ ತೆಗೆದುಕೊಂಡಿದ್ದಾರೆ. ಏಕೆಂದರೆ PSUಗಳು ನೇಮಕಾತಿಗೆ GATE ಪರೀಕ್ಷೆಯನ್ನು ಮಾನದಂಡವಾಗಿ ಬಳಸುತ್ತಿವೆ. GATE ಅಂದರೆ IISc ಮತ್ತು IITಗಳು ನಡೆಸುವ ಅಖಿಲ ಭಾರತ ಪರೀಕ್ಷೆ.

ನೋಡಿ, 2011ರಲ್ಲಿ IOCL ಮಾತ್ರವೇ GATEಗೆ ಮಣೆ ಹಾಕಿತ್ತು. ತದನಂತರ 2012ರಲ್ಲಿ 5 PSUಗಳು GATE ಮೂಲಕ ನೇಮಕಾತಿ ಮಾಡಿಕೊಂಡವು. ಈಗ ಪ್ರಸಕ್ತ ಸಾಲಿನಲ್ಲಿ 13ಕ್ಕೂ ಹೆಚ್ಚು PSUಗಳು GATE ವೀರರತ್ತ ಆಸೆಗಣ್ಣುಗಳಿಂದ ನೋಡುತ್ತಿವೆ.

ವರ್ಷಕ್ಕೆ 8-10 ಲಕ್ಷ ರೂ. ಪಡೆದು ಹೈರಾಣವಾಗುವುದಕ್ಕಿಂತ 3-4 ಲಕ್ಷ ರೂಗಳೇ ಆದರೂ ಭದ್ರತೆ/ನೆಮ್ಮದಿಯೊಂದಿಗೆ ಬದುಕು ಸಾಗಿಸೋಣ ಎಂಬ ಬೀಜಮಂತ್ರ ಪಠಿಸುತ್ತಿದ್ದಾರೆ ಇಂದಿನ ನವ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ನೀವೇನನ್ನುತ್ತೀರಿ !?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+