ಬಿಎಸ್‌ವೈ ಸವಾಲು ಸ್ವೀಕರಿಸಿದ ಬಿಜೆಪಿ ತ್ಯಾಗಕ್ಕೆ ಸಿದ್ಧ

BJP accepts Yeddyurappa challenge
ಹಾವೇರಿ, ಡಿ. 4 : ಹಾವೇರಿಯಲ್ಲಿ ಡಿ.9ರಂದು ನಡೆಯಲಿರುವ ಕೆಜೆಪಿ ಸಮಾವೇಶದಲ್ಲಿ ಭಾಗವಹಿಸುವ ತನ್ನ ಬೆಂಬಲಿಗರ ವಿರುದ್ಧ ಕ್ರಮ ತೆಗೆದುಕೊಂಡರೆ 24 ಗಂಟೆಯೊಳಗೆ ಸರಕಾರ ಬೀಳಿಸುವುದಾಗಿ ಯಡಿಯೂರಪ್ಪ ಎಚ್ಚರಿಕೆ ನೀಡಿರುವುದನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ, ಸಮಾವೇಶದಲ್ಲಿ ಯಾರಾದರೂ ಭಾಗಿಯಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕಟ್ಟೆಚ್ಚರ ನೀಡಿದೆ.

ಯಡಿಯೂರಪ್ಪ ಬೆಂಬಲಿಗರು ಕೆಜೆಪಿ ಸಮಾವೇಶದಲ್ಲಿ ಭಾಗಿಯಾಗದಂತೆ ಯಡಿಯೂರಪ್ಪ ಬೆಂಬಲಿಗರಿಗೆ ಕೊನೆಯ ಎಚ್ಚರಿಕೆ ನೀಡಲಾಗಿದೆ ಎಂದು ಹಾವೇರಿಯಲ್ಲಿಯೇ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಮಂಗಳವಾರ ಗುಡುಗಿದ್ದಾರೆ.

ಯಡಿಯೂರಪ್ಪನವರು ಸರಕಾರವನ್ನು ಬೀಳಿಸಿದರೂ ತೊಂದರೆಯಿಲ್ಲ, ಎಂಥ ತ್ಯಾಗಕ್ಕೂ ಭಾರತೀಯ ಜನತಾ ಪಕ್ಷ ಈಗ ಸಿದ್ಧವಾಗಿದೆ. ಅವಧಿಗೆ ಮುಂಚೆಯೆ ವಿಧಾನಸಭೆ ಚುನಾವಣೆಗೆ ಹೋಗಿ ಜನತೆಯನ್ನು ಎದುರಿಸಲು ಸನ್ನದ್ಧವಾಗಿದೆ. ಆದರೆ, ಯಡಿಯೂರಪ್ಪನವರ ಹಿಂದೆ ಹೋಗುವ ಶಾಸಕರ, ಸಂಸದರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಜನತಾ ಪಕ್ಷದಿಂದ ಭಾರತೀಯ ಜನತಾ ಪಕ್ಷಕ್ಕೆ ಈಗಾಗಲೆ ಸಾಕಷ್ಟು ಹಾನಿಯಾಗಿದೆ ನಿಜ. ಆದರೆ, ಯಡಿಯೂರಪ್ಪ ಬೆಂಗಲಿಗರು ಕೆಜೆಪಿ ಸೇರುವುದರಿಂದ ಕೆಜೆಪಿಗೆ ಅದಕ್ಕಿಂತಲೂ ಹೆಚ್ಚು ನಷ್ಟವಾಗಲಿದೆ. ಇದು ಶತಸಿದ್ಧ. ಆಯಾ ಶಾಸಕರು ಒಳಿತು ಮೂಲ ಪಕ್ಷವಾದ ಬಿಜೆಪಿಯಲ್ಲಿ ಉಳಿಯುವುದರಲ್ಲಿ ಇದೆ ಎಂದು ಅವರು ಕಿವಿಮಾತು ಹೇಳಿದರು.

ಒಂದೆಡೆ ಹಾವೇರಿಯಲ್ಲಿ ಕೆಜೆಪಿ ಸಮಾವೇಶಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದರೆ, ಬೆಳಗಾವಿಯಲ್ಲಿ ಡಿ.5ರಿಂದ ನಡೆಯಲಿರುವ ಅಧಿವೇಶನಕ್ಕೆ ಸಿದ್ಧತೆಗಳು ಪೂರ್ಣವಾಗಿದ್ದು, ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಅನುಮೋದನೆ ದೊರೆಯಲಿದೆ. ಆದರೆ, ವಿರೋಧ ಪಕ್ಷಗಳು ಕೂಡ ಬಿಜೆಪಿಯ ಕಾಲರ್ ಹಿಡಿಯಲು ರೆಡಿಯಾಗಿವೆ. ಇದೆಲ್ಲದರ ನಡುವೆ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಯಡಿಯೂರಪ್ಪನವರ ಎಷ್ಟು ಬೆಂಬಲಿಗರು ಭಾಗಿಯಾಗಲಿದ್ದಾರೆ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+