ಸಿಎಂ ತವರೂರಲ್ಲೇ ಕೆಜೆಪಿ ಭರ್ಜರಿ ಬಲಪ್ರದರ್ಶನ

B S Yeddyurap
ಹುಬ್ಬಳ್ಳಿ, ಡಿ 3: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತವರೂರಲ್ಲೇ ಭಾರತೀಯ ಜನತಾ ಪಕ್ಷಕ್ಕೆ ಸಡ್ಡು ಹೊಡೆಯುವ ಕೆಜೆಪಿ ಅಲ್ಪಸಂಖ್ಯಾತರ ಸಮಾವೇಶ ಯಶಸ್ವಿಯಾಗಿದೆ. ನಗರದಲ್ಲಿ ನಡೆದ ಅಲ್ಪಸಂಖ್ಯಾತರ ಅಬ್ಬರದ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭಾಗವಹಿಸಿದ್ದರು.

ಉತ್ತರ ಕರ್ನಾಟಕ ಭಾಗದ ಪ್ರಭಾವಿ ಅಲ್ಪಸಂಖ್ಯಾತ ಮುಖಂಡ ಮತ್ತು ಅಂಜುಮಾನ್ - ಇ - ಇಸ್ಲಾಂ ಅಧ್ಯಕ್ಷ ಜಬ್ಬರ್ ಖಾನ್ ಹೊನ್ನಳ್ಳಿ ನೇತೃತ್ವದಲ್ಲಿ ಹಳೇ ಹುಬ್ಬಳ್ಳಿ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ (ಡಿ 2) ಸಂಜೆ ನಡೆದ ಈ ಸಮಾವೇಶ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ.

ಇದೇ ಭಾನುವಾರ (ಡಿ 9) ಹಾವೇರಿಯಲ್ಲಿ ನಡೆಯಲಿರುವ ಸಮಾವೇಶಕ್ಕೆ ಪೂರ್ವಭಾವಿಯಾಗಿ ನಡೆದ ಸಮಾವೇಶದಲ್ಲಿ ವಿವಿಧ ರಾಜಕೀಯ ಪಕ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದ ಅಲ್ಪಸಂಖ್ಯಾತ ಸಮುದಾಯದ ನಾಯಕರು ಭಾಗವಹಿಸಿದ್ದರು.

ಬಿಜೆಪಿಯಲ್ಲಿರುವ ಮಮ್ತಾಜ್ ಆಲಿ ಖಾನ್, ಖುರೇಷಿ ಸೇರಿದಂತೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗದ ಅನೇಕ ಧುರೀಣರು ಕೆಜೆಪಿ ಮೂಲಕ ಮುಖ್ಯ ವಾಹಿನಿಗೆ ಬರಲು ಈ ಸಮಾವೇಶವನ್ನು ಭರ್ಜರಿಯಾಗಿ ಬಳಸಿಕೊಂಡರು. ಸುಮಾರು 20 ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಸಮುದಾಯದವರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಕೆಜೆಪಿಗೆ ಸೇರ್ಪಡೆಯಾಗಿರುವ ಜಬ್ಬರ್ ಖಾನ್, ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರದ ಅಲ್ಪಸಂಖ್ಯಾತ ಮುಖಂಡರನ್ನು ಕೆಜೆಪಿಗೆ ಸೆಳೆಯಲು ಸಾಕಷ್ಟು ಕಸರತ್ತು ನಡೆಸುತ್ತಿದ್ದು ವಿವಿಧೆಡೆ ರಹಸ್ಯ ಸಭೆಯನ್ನು ನಡೆಸುತ್ತಿದ್ದಾರೆ.

ಅವಳಿ ನಗರದ ರಸ್ತೆಗಳಲ್ಲಿ ಯಡಿಯೂರಪ್ಪ, ಜಬ್ಬರ್ ಖಾನ್ ಹೊನ್ನಳ್ಳಿ ಮತ್ತು ಇತರ ಅಲ್ಪಸಂಖ್ಯಾತ ಮುಖಂಡರ ಬ್ಯಾನರ್ ಗಳು ರಾರಾಜಿಸುತ್ತಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+