ಮತ್ತೆ ಮಿಂಚಿದ ಚಿನ್ನದ ದರ, ಸೈಲೆಂಟಾದ ಸಿಲ್ವರ್

ಪ್ಯೂಚರ್ ಮಾರುಕಟ್ಟೆ ಚಿನ್ನದ ದರ 32 ಸಾವಿರ ರು ಗಡಿಗೆ ಬರುತ್ತಿದ್ದಂತೆ ಚಿನಿವಾರ ಪೇಟೆ ದರ ಕೂಡಾ 32 ಸಾವಿರ ರು ನಂತೆ ವಹಿವಾಟು ನಡೆಸಿದೆ.
ಶುಕ್ರವಾರ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರ ಶೇ 1.4 ರಷ್ಟು ಏರಿಕೆ ಕಂಡಿತ್ತು. ಡಾಲರ್ ದರ ಇಳಿಕೆ, ಗ್ರೀಕ್ ಆರ್ಥಿಕ ಮುಗ್ಗಟ್ಟಿಗೆ ಬೇಲ್ ಔಟ್ ಸಿಗುವ ಬಗ್ಗೆ ಭರವಸೆ ಸುದ್ದಿಗಳು ಹರಡಿದ ಪರಿಣಾಮ ಚಿನ್ನದ ದರದಲ್ಲಿ ಏರುಪೇರು ಕಂಡು ಬಂದಿತ್ತು. ಪ್ರತಿ ಔನ್ಸ್ ಗೆ 1,749 ಡಾಲರ್ ನಷ್ಟಿತ್ತು.
ಸ್ಪಾಟ್ ಗೋಲ್ಡ್ ದರ ಶುಕ್ರವಾರ 110 ರು ಏರಿಕೆ ಕಂಡು ಪ್ರತಿ ಗ್ರಾಂ ಚಿನ್ನಕ್ಕೆ 32,560 ರು ನಷ್ಟಿತ್ತು. ಬೆಳ್ಳಿ ದರ ಪ್ರತಿ ಕೆಜಿಗೆ 63,526 ರು ನಷ್ಟಿತ್ತು. ಸಾಗರೋತ್ತರ ದೇಶಗಳಲ್ಲಿ ಹೆಚ್ಚಿದ ಬೇಡಿಕೆ ಹಾಗೂ ಮದುವೆ ಸೀಸನ್ ನಿಂದಾಗಿ ಚಿನ್ನದ ದರ ಕೊಂಚ ಏರಿಕೆ ಕಂಡಿದೆ.
ಅಖಿಲ ಭಾರತೀಯ ಸರಾಫ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುರೇಂದರ್ ಜೈನ್ ಅವರ ಎಣಿಕೆ ಪ್ರಕಾರ ಡಿಸೆಂಬರ್ ತಿಂಗಳ ಅಂತ್ಯದವರೆಗೂ ಚಿನ್ನದ ಬೆಲೆ 32 ಸಾವಿರ ರು ಗಡಿಯಲ್ಲೇ ಮುಂದುವರೆಯುವ ಸಾಧ್ಯತೆಯಿದೆ.
ಆದರೆ, ಚಿನ್ನದ ಆಮದನ್ನು ದುಬಾರಿಗೊಳಿಸಿದರೂ, ರೂಪಾಯಿ ಮೌಲ್ಯ ಏರಿಕೆ, ಡಾಲರ್ ಕುಸಿತ ಮುಂತಾದ ಕಾರಣಕ್ಕೆ Multi commodity exchange ನಲ್ಲಿ ಫ್ಯೂಚರ್ ಹಾಗೂ ಸ್ಪಾಟ್ ಚಿನ್ನ ಎರಡರ ದರ ಕೊಂಚ ಏರಿಕೆ ಕಾಯ್ದುಕೊಳ್ಳುವ ಸಾಧ್ಯತೆಯಿದೆ.
ಬೆಂಗಳೂರಿನಲ್ಲಿ ಶನಿವಾರ (ನ.24) ಚಿನ್ನ (spot) ದ ದರ 31,900.00 ರು (24K), 29,800.00 ರು(22K), ಬೆಳ್ಳಿ 1 ಕಿಲೋ 63,800 ರು ಇದೆ. ಉಳಿದಂತೆ ಚೆನ್ನೈನಲ್ಲಿ 22K(32,290), 24K(32,420) ಇದೆ.
ಅಹಮದಾಬಾದಿನಲ್ಲಿ 32495.00(22K), 32370.00(24K). ಮುಂಬೈ, ದೆಹಲಿ, ಜೈಪುರಗಳಲ್ಲಿ 32 ಸಾವಿರ ಗಡಿಯಲ್ಲೇ ಚಿನ್ನದ ದರ ಮುಂದುವರೆದಿರುವುದು ಗ್ರಾಹಕರಿಗೆ ನೆಮ್ಮದಿ ತಂದಿದೆ.
ಯುರೋಪಿನಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಜಾಗತಿಕ ಮಾರುಕಟ್ಟೆಯ ಮೇಲೆ ಆಗುತ್ತಿದೆ. ಬಂಡವಾಳ ಹೂಡಿಕೆದಾರರಿಂದ ಹೆಚ್ಚುತ್ತಿರುವ ಬೇಡಿಕೆಯೂ ಚಿನ್ನದ ಬೆಲೆಯ ಮೇಲೆ ಆಗುತ್ತಿದೆ. ಚಿನ್ನದ ದರ ಇಳಿಕೆಯಿಂದ ಗ್ರಾಹಕರಿಗೆ ಸಂತಸ ಉಂಟಾಗಿದ್ದರೂ ಹೂಡಿಕೆದಾರರಿಗೆ ಬೇಸರ ಮೂಡಿಸಿದೆ.












Click it and Unblock the Notifications