ನ.26ರಂದು ಕೇಜ್ರಿವಾಲ್ ಹೊಸ ಪಕ್ಷದ ಉದಯ

Kejriwal to launch new party on Nov 26
ಬೆಂಗಳೂರು, ನ. 23 : ಒಂದೊಂದಾಗಿ ಭ್ರಷ್ಟಾಚಾರದ ಹಗರಣಗಳನ್ನು ಬಯಲಿಗೆಳೆಯುತ್ತ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿರುವ ಆರ್‌ಟಿಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರ ಹೊಸ ಪಕ್ಷ ನವೆಂಬರ್ 26ರಂದು ಅಧಿಕೃತವಾಗಿ ಸ್ಥಾಪನೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆ ನೀಡಲಾಗಿದೆ.

ಅರವಿಂದ್ ಕೇಜ್ರಿವಾಲ್ ಅವರು ಆರಂಭಿಸಿದ್ದ 'ಇಂಡಿಯಾ ಅಗೇನ್‌ಸ್ಟ್ ಕರಪ್ಷನ್' ಬೆಂಬಲಿಸುತ್ತಿರುವ ಕರ್ನಾಟಕದ ಕಾರ್ಯಕರ್ತರ ತಂಡ ದೆಹಲಿಗೆ ತೆರಳುತ್ತಿದ್ದು, ಹೊಸ ಪಕ್ಷ ಸ್ಥಾಪನೆಯ ಕ್ರಿಯೆಯಲ್ಲಿ ಭಾಗಿಯಾಗಲಿದೆ. ಈ ಸಮಾರಂಭದಲ್ಲಿ ದೇಶದ ಎಲ್ಲೆಡೆಯಿಂದ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತರು ದೆಹಲಿಯಲ್ಲಿ ಜತೆಗೂಡಲಿದ್ದಾರೆ.

ಈ ತಂಡದಲ್ಲಿ 17 ವರ್ಷದಿಂದ 70 ವರ್ಷ ವಯಸ್ಸಿನ ಸದಸ್ಯರಿದ್ದಾರೆ. ಜೊತೆಯಲ್ಲಿ ಅನೇಕ ಮಹಿಳಾ ಸದಸ್ಯರೂ ಕೂಡ ಪ್ರಯಾಣಿಸುತ್ತಿದ್ದಾರೆ. ಪಕ್ಷದ ಪ್ರಾರಂಭೋತ್ಸವದಲ್ಲಿ ಕರ್ನಾಟಕದ ಸಾಂಸ್ಕೃತಿಕ ಸೊಗಡನ್ನು ಪ್ರದರ್ಶಿಸಲು 20 ಜನರಿರುವ ಡೊಳ್ಳು ಕುಣಿತ ಮತ್ತು ಕಂಸಾಳೆ ನೃತ್ಯ ತಂಡಗಳು ಪ್ರಯಾಣಿಸುತ್ತಿವೆ. ಯಶವಂತಪುರ ರೈಲು ನಿಲ್ದಾಣದಿಂದ ವಿಶೇಷ ರೈಲು ನವದೆಹಲಿಗೆ ಶುಕ್ರವಾರ ಹೊರಡಲಿದೆ.

ಹೊಸ ಪಕ್ಷ ಸ್ಥಾಪಿಸಲು ನವೆಂಬರ್ 26ರನ್ನು ವಿಶೇಷವಾಗಿ ಆಯ್ದುಕೊಳ್ಳಲಾಗಿದೆ. ಭಾರತದ ಸಂವಿಧಾನ ರಚನಾ ಸಭೆಯು ಡಿಸೆಂಬರ್ 9, 1946ರಂದು ಸಭೆ ನಡೆಸಿ ಸಂವಿಧಾನವನ್ನು ರಚಿಸಲು ಹಲವಾರು ಸಮಿತಿಗಳನ್ನು ನೇಮಿಸಿತು. 395 ಆರ್ಟಿಕಲ್ ಗಳು ಮತ್ತು 8 ಶೆಡ್ಯೂಲ್‌ಗಳನ್ನು ಹೊಂದಿದ ಭಾರತದ ಸಂವಿಧಾನವನ್ನು ಬರೆಯಲಾಯಿತು ಹಾಗೂ ನವೆಂಬರ್ 26, 1949ರಂದು ಸಂವಿಧಾನವಾಗಿ ಅಳವಡಿಸಿಕೊಳ್ಳಲಾಯಿತು. ಇದೇ ದಿನ 'ಇಂಡಿಯಾ ಅಗೇನ್‌ಸ್ಟ ಕರಪ್ಷನ್' ಹೋರಾಟವು ಒಂದು ರಾಜಕೀಯ ಪಕ್ಷವಾಗಿ ಹೊರಹೊಮ್ಮಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+