ಮಗುವಿಗೆ ಆತನ ಮೂತ್ರ ಕುಡಿಸಿದ ಅನಾಗರಿಕ ಶಿಕ್ಷಕಿ

ಅನನ್‌ಪರ್ತಿಯ ಸತ್ಯಭಾಮಾ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನರ್ಸರಿಯಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಮಗುವಿಗೆ ತರಗತಿಯಲ್ಲಿದ್ದಾಗಲೇ ಅರ್ಜೆಂಟಾಗಿ ಮೂತ್ರ ವಿಸರ್ಜನೆಗೆಂದು ಹೋಗುವಂತಾಗಿದೆ. ಆದರೆ, ಏನು ಮಾಡಬೇಕೆಂದು ತಿಳಿಯದೆ ತನ್ನ ಬಳಿಯಿದ್ದ ಪ್ಲಾಸ್ಟಿಕ್ ಬಾಟಲ್‌ನಲ್ಲಿ ಮೂರ್ತಿ ವಿಸರ್ಜನೆ ಮಾಡಿಕೊಂಡಿದ್ದಾನೆ.
ಇದನ್ನು ಶಿಕ್ಷಕಿ ಗೌರಿ ಗಮನಿಸಿದ್ದಾರೆ. ಮಗುವಿಗೆ ಹಾಗೆ ಮಾಡಬಾರದೆಂದು ತಿಳಿಹೇಳುವ ಬದಲು ಆತ ಮಾಡಿದ ಮೂತ್ರವನ್ನೇ ಸೇವಿಸಬೇಕೆಂದು ಬಲವಂತ ಮಾಡಿದ್ದಾಳೆ. ಬುಧವಾರ ನಡೆದಿರುವ ಈ ಘಟನೆಯನ್ನು ಮಗು ತನ್ನ ಪಾಲಕರಿಗೆ ತಿಳಿಸಿದೆ. ಶಿಕ್ಷಕಿಯ ಅನಾಗರಿಕ ವರ್ತನೆಯಿಂದ ಮಗು ತೀವ್ರ ಆಘಾತಕ್ಕೀಡಾಗಿದೆ.
ಇದರಿಂದ ರೊಚ್ಚಿಗೆದ್ದ ಮಗುವಿನ ಪಾಲಕರು ಅನನ್ಪರ್ತಿ ಪೊಲೀಸ್ ಠಾಣೆಗೆ ತೆರಳಿ, ಅನಾಗರಿಕವಾಗಿ ವರ್ತಿಸಿದ ಶಿಕ್ಷಕಿ ಗೌರಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ ಈ ಪ್ರಕರಣವನ್ನು ಜಿಲ್ಲಾ ಶಿಕ್ಷಣಾಧಿಕಾರಿಗೆ ತಿಳಿಸಲಾಗಿದೆ. ಶಿಕ್ಷಣಾಧಿಕಾರಿಗಳು ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಿ ಈ ಘಟನೆಯ ವಿಚಾರಣೆಯನ್ನು ಕೂಡಲೆ ನಡೆಸಿ ವರದಿ ಸಲ್ಲಿಸಬೇಕು ಮತ್ತು ಆ ಶಿಕ್ಷಕಿಯ ವಿರುದ್ಧ ಕಠಿಣ ಶಿಕ್ಷೆ ತೆಗೆದುಕೊಳ್ಳಬೇಕೆಂದು ಆದೇಶಿಸಿದ್ದಾರೆ. ಇಂಥ ಶಿಕ್ಷಕಿಗೆ ಎಂಥ ಶಿಕ್ಷೆ ಕೊಡಬೇಕು?












Click it and Unblock the Notifications