• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡಿಯಾಟೈಮ್ಸ್ ಇಮೇಲ್ ಸೇವೆ ಬಂದ್

By Mahesh
|

ಬೆಂಗಳೂರು, ನ.20: ಜೀಮೇಲ್, ಯಾಹೂ, ಹಾಟ್ ಮೇಲ್ ಹಾಗೂ ರೀಡಿಫ್ ಜೊತೆ ಗುದ್ದಾಟದಲ್ಲಿ ಸೋತ ಇಂಡಿಯಾಟೈಮ್ಸ್ ತನ್ನ ಇಮೇಲ್ ಸೇವೆ ಬಂದ್ ಮಾಡಿದೆ.

ಸೋಮವಾರ(ನ.19) ದಿಂದ ಅಧಿಕೃತವಾಗಿ ಇಂಡಿಯಾಟೈಮ್ಸ್ ಇಮೇಲ್ ಸೇವೆ ಲಭ್ಯವಿರುವುದಿಲ್ಲ ಎಂದು ಟ್ರೈಮ್ಸ್ ಗ್ರೂಪ್ ಹೇಳಿದೆ.

ಆದರೆ, ಎಷ್ಟು ಮಂದಿ ಇಂಡಿಯಾಟೈಮ್ಸ್ ಇಮೇಲ್ ಸೌಲಭ್ಯ ಬಳಸುತ್ತಿದ್ದರು ಎಂಬ ಮಾಹಿತಿಯನ್ನು ಸಂಸ್ಥೆ ಹೊರಹಾಕಿಲ್ಲ. ಇಂಟರ್ ನೆಟ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(IAMAI) ಮಾಹಿತಿ ಪ್ರಕಾರ ಭಾರತದಲ್ಲಿ 150 ಮಿಲಿಯನ್ ಇಂಟರ್ನೆಟ್ ಬಳಕೆದಾರರ ಪೈಕಿ 86.9 ಮಿಲಿಯನ್ ಇಮೇಲ್ ಬಳಸುತ್ತಿದ್ದಾರೆ.

ಇಂಡಿಯಾಟೈಮ್ಸ್ ಇಮೇಲ್ ಗತಿ?: ಆದರೆ, ಇಂಡಿಯಾ ಟೈಮ್ಸ್ ಇಮೇಲ್ ಸೇವೆ ಸಂಪೂರ್ಣವಾಗಿ ಬಂದ್ ಆಗಲು ಫೆಬ್ರವರಿ 18, 2013 ರ ತನಕ ಟೈಮ್ ನೀಡಲಾಗಿದೆ. ಹೀಗಾಗಿ ಹಾಲಿ ಬಳಕೆದಾರರು ಅಲ್ಲಿ ತನಕ ನೆಮ್ಮದಿಯಿಂದ ಉಸಿರಾಡಬಹುದು.

'ನವೆಂಬರ್ 19,2012ರ ನಂತರ ಹೊಸ ಬಳಕೆದಾರರನ್ನು ಸೇರಿಸಿಕೊಳ್ಳುವುದನ್ನು ನಿಲ್ಲಿಸಲಾಗಿದೆ. ಇಂಡಿಯಾಟೈಮ್ಸ್.ಕಾಂನ ಇಮೇಲ್ ಸೌಲಭ್ಯ ಹೊಸಬರಿಗೆ ತಕ್ಷಣದಿಂದಲೇ ಲಭ್ಯವಾಗುವುದಿಲ್ಲ. ಫೆಬ್ರವರಿ 18, 2013ರ 12 ಗಂಟೆ ಭಾರತೀಯ ಕಾಲಮಾನ ಪ್ರಕಾರ ಈ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ' ಎಂದು ಟೈಮ್ಸ್ ಇಂಟರ್ನೆಟ್ ಲಿ. ನ ಉಪಾಧ್ಯಕ್ಷೆ ಅರ್ಚನಾ ವೋಹ್ರಾ ಅವರು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.

ಫೆಬ್ರವರಿ 18ರ ನಂತರ ಇಮೇಲ್ ಕಳಿಸುವುದು, ಪಡೆಯುವುದು, ಟಾಸ್ಕ್, ಡಾಕ್ಯುಮೆಂಟ್, ಫೋಲ್ಡರ್, ಅಪಾಯಿಮೆಂಟ್, ಕಾಂಟ್ಯಾಕ್ಟ್ ಮುಂತಾದ ಸೌಲಭ್ಯಗಳಿಂದ ಗ್ರಾಹಕರು ವಂಚಿತರಾಗಲಿದ್ದಾರೆ.

1999ರಲ್ಲೇ ಆರಂಭವಾದ ಇಂಡಿಯಾಟೈಮ್ಸ್ ಮೇಲ್ ಹಲವು ಬಾರಿ ಹೊಸ ವಿನ್ಯಾಸ, ಸೌಲಭ್ಯಗಳೊಂದಿಗೆ ಗ್ರಾಹಕರ ಮುಂದೆ ಬಂದಿತ್ತು. 2007ರಲ್ಲಿ ಪುನರ್ ಆರಂಭಿಸಿದರೂ ಬಳಕೆದಾರರಿಗೆ ಮೆಚ್ಚುಗೆಯಾಗಲಿಲ್ಲ.

ಇಮೇಲ್ ಸೌಲಭ್ಯದಿಂದ ಟೈಮ್ಸ್ ಗ್ರೂಪ್ ಗೆ ಹೆಚ್ಚಿನ ಆದಾಯ ಬರುತ್ತಿಲ್ಲವಾದ್ದರಿಂದ ಇಮೇಲ್ ಸೇವೆಯನ್ನು ಸ್ಥಗಿತಗೊಳಿಸಲು ಟೈಮ್ಸ್ ಇಂಟರ್ನೆಟ್ ಲಿ. ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಆದರೆ, ಇಂಡಿಯಾಟೈಮ್ಸ್ ಇಮೇಲ್ ಐಡಿ ಬಳಸಿ ಗ್ರಾಹಕರು ಇಂಡಿಯಾಟೈಮ್ಸ್ ನ ಇತರೆ ಸೌಲಭ್ಯಗಳನ್ನು ಎಂದಿನಂತೆ ಬಳಕೆ ಮಾಡಬಹುದು. ಇಮೇಲ್ ಮಾತ್ರ ಕಳಿಸಲು ಸಾಧ್ಯವಿಲ್ಲ ಎಂದು ಕಂಪನಿ ಹೇಳಿದೆ.

ಮೈಕ್ರೋಸಾಫ್ಟ್ ನ ಹಾಟ್ ಮೇಲ್ ಕೂಡಾ ಹೊಸ ರೂಪ ಪಡೆದು ವಿಂಡೋಸ್ ಲೈವ್ ಹಾಟ್ ಮೇಲ್ ಆಗಿ ಪರಿವರ್ತನೆಗೊಂಡಿದೆ. ಯಾಹೂ ಮೇಲ್ ಹಾಗೂ ಜೀಮೇಲ್ ತನ್ನ ಪ್ರಭುತ್ವವನ್ನು ಬಿಟ್ಟುಕೊಟ್ಟಿಲ್ಲ. ಸರಿ ಸುಮಾರು 1 ಬಿಲಿಯನ್ ಗೂ ಅಧಿಕ ಬಳಕೆದಾರರನ್ನು ಈ ಎರಡೂ ಸಂಸ್ಥೆಗಳು ಹೊಂದಿದೆ ಎಂದು ಇಮೇಲ್ ಮಾರುಕಟ್ಟೆ ಪಂಡಿತರ ಅಭಿಪ್ರಾಯ.

2004ರಲ್ಲಿ ಆರಂಭವಾದ ಜೀಮೆಲ್ ಸೇವೆ ಸುಮಾರು 425 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಜಾಗತಿಕವಾಗಿ ಹೊಂದಿದೆ ಎಂದು ಗೂಗಲ್ ನ ಅಧಿಕೃತ ಬ್ಲಾಗ್ ಜೂನ್ ನಲ್ಲಿ ಪ್ರಕಟಿಸಿತ್ತು.

2011ರ ಜುಲೈ ತಿಂಗಳ ಗಣತಿಯಂತೆ ಮೈಕ್ರೋಸಾಫ್ಟ್ ನ ಹಾಟ್ ಮೇಲ್ ಬಳಕೆದಾರರ ಸಂಖ್ಯೆ 350 ಮಿಲಿಯನ್ ದಾಟುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Internet service provider Indiatimes to shut down its email services. The service has been closed from Monday 19th No 2012 for new users. Indiatimes was not able to compete with email services such as Gmail, Yahoo, Hotmail and Rediff which forced the shut down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more