ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಲಕ್ಷ ATMಗಳತ್ತ ಗ್ರಾಹಕನ ಮೆಚ್ಚುಗೆಯ ನೋಟ

By Srinath
|
Google Oneindia Kannada News

india-bank-atms-cross-1-lakh-mark-customers-happy-lot
ಮುಂಬೈ, ನ.20: ಅದೊಂದು ಕಾಲವಿತ್ತು. ಯಾವುದೇ ಬ್ಯಾಂಕಿಗೆ ನಮ್ಮದೇ ಹಣ ತೆಗೆದುಕೊಳ್ಳಲೂ ಹೋದರೂ ಸಿಡುಕು ಮೋರೆಯ ಅಧಿಕಾರಿಯ ಮುಂದೆ ಹಲ್ಲುಗಿಂಜುತ್ತಾ ಕೈಯೊಡ್ಡಬೇಕಿತ್ತು. ಆದರೆ ಕಾಲ ಬದಲಾಗಿದೆ. ಥ್ಯಾಂಕ್ಸ್ ಟು ಮಾಹಿತಿ ತಂತ್ರಜ್ಞಾನ ಇಂದು ಜನ ನಗುನಗುತ್ತಾ ತಮ್ಮ ದುಡ್ಡನ್ನು ತಾವು ಪಡೆಯಬಹುದಾಗಿದೆ. ಯಾರದೇ ಕಿರಿಕಿರಿಯಿಲ್ಲ.

ATMಗಳತ್ತ ಮೆಚ್ಚುಗೆಯ ನೋಟ: ಇದನ್ನು ಮನಗಂಡು ಅಂದರೆ 'ಜನ ಸಂತೋಷದಿಂದ ATM ಕೇಂದ್ರಗಳತ್ತ ಹೋಗುತ್ತಿದ್ದಾರೆ. ಎಟಿಎಂ ವ್ಯವಸ್ಥೆ ಕ್ಲಿಕ್ ಆಗುತ್ತಿದೆ' ಎಂಬುದನ್ನು ಮನಗಂಡ ಬ್ಯಾಂಕುಗಳು 95 ರಿಂದೀಚೆಗೆ ದೊಡ್ಡ ಮನಸು ಮಾಡಿ ಸಿಕ್ಕಸಿಕ್ಕಲ್ಲಿ ATM ಕೇಂದ್ರಗಳನ್ನು ತೆರೆಯಿತು. ಅದರ ಫಲವಾಗಿ ಇಂದು ದೇಶದಾದ್ಯಂತ ಒಟ್ಟು ಎಟಿಎಂಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

ಸ್ಟೇಟ್ ಬ್ಯಾಂಕ್ ಸಮೂಹದ ಪಾರುಪತ್ಯ: ಸದ್ಯ ದೇಶದಲ್ಲಿ 1,04,500 ಎಟಿಎಂಗಳಿವೆ. ಅಂದರೆ 10 ಲಕ್ಷ ಜನರಿಗೆ 80 ಎಟಿಎಂ ಇದೆ. ಇದರಲ್ಲಿ ಸ್ಟೇಟ್ ಬ್ಯಾಂಕ್ ಸಮೂಹ (ಎಸ್‌ಬಿಐ) 61,500 ಎಟಿಎಂಗಳೊಂದಿಗೆ ಶೇ 59ರಷ್ಟು ಪಾಲು ಹೊಂದಿದೆ ಎಂದು ರಾಷ್ಟ್ರೀಯ ಪಾವತಿ ಸಂಸ್ಥೆ (NPCI) ತಿಳಿಸಿದೆ .

ಇನ್ನೂ 1 ಲಕ್ಷ ಎಟಿಎಂಗಳು ಬರಲಿವೆ!: ಖಾಸಗಿ ಮತ್ತು ವಿದೇಶಿ ಬ್ಯಾಂಕುಗಳು ದೇಶದಲ್ಲಿ ಒಟ್ಟು 41,800 (ಶೇ 40), ಸಹಕಾರಿ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು 1,150 (ಶೇ 1) ಎಟಿಎಂ (automated teller machines) ಹೊಂದಿವೆ.

ವಿತ್ತೀಯ ಸೇರ್ಪಡೆ ನೀತಿಯ ಅಂಗವಾಗಿ ಮುಂದಿನ 2 ವರ್ಷಗಳಲ್ಲಿ ಇನ್ನೂ 1 ಲಕ್ಷ ಎಟಿಎಂಗಳನ್ನು ಸ್ಥಾಪಿಸುವ ಯೋಜನೆ ಬ್ಯಾಂಕುಗಳ ಮುಂದಿದೆ. ಈಗ ಪ್ರತಿ ತಿಂಗಳು ATM ಮೂಲಕ 200 ದಶಲಕ್ಷ ವಹಿವಾಟುಗಳು ನಡೆಯುತ್ತವೆ. ಇದರಲ್ಲಿ ಶೇ 75 ರಷ್ಟು ವಹಿವಾಟು ನಡೆಯುವುದು ನಗುನಗುತಾ ನಗದು ಸ್ವೀಕರಿಸುವುದಕ್ಕೆ!

English summary
Bank ATMs cross 1 lakh mark customers happy lot. The National Payments Corporation (NPCI) said on Tuesday (Nov 13) that the banking system had reached a landmark of 1 lakh ATMs (automated teller machines) at the end of October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X