ಚುನಾವಣೆ ನಡೆಸೋಕ್ಕೆ ಮಾಹಿತಿ ಕೇಳಿದ ಆಯೋಗ

ಈ ಸಂಬಂಧ ಆಯೋಗವು ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಅವರಿಗೆ ಪತ್ರ ಬರೆದಿದ್ದು, ಅಗತ್ಯ ಮಾಹಿತಿ ನೀಡುವಂತೆ ಸೂಚಿಸಿದೆ. ಮುಂದಿನ ವಾರದಲ್ಲಿ ರಾಜ್ಯ ಸರಕಾರ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಒದಗಿಸುವ ಅಂದಾಜಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಆಯೋಗವು ಈಗಾಗಲೇ ಮಾಹಿತಿ ಪಡೆದುಕೊಂಡಿದೆ. ಜನವರಿ ಮಾಸಾಂತ್ಯಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳ್ಳಲಿದೆ.
ಮುಂದಿನ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ರಾಜ್ಯದಲ್ಲಿ ನಡೆಯುವ ಪರೀಕ್ಷೆಗಳು, ಹಬ್ಬಗಳು, ಪ್ರಮುಖ ಜಾತ್ರೆ/ಉತ್ಸವಗಳ ಕುರಿತು ಆಯೋಗ ವಿವರ ಬಯಸಿದೆ. ಮುಖ್ಯ ಕಾರ್ಯದರ್ಶಿ ನೀಡುವ ಮಾಹಿತಿಯನ್ನಾಧರಿಸಿ ಆಯೋಗ ತೀರ್ಮಾನ ಕೈಗೊಳ್ಳಲಿದೆ. ಮಾರ್ಚ್ 13 ರಿಂದ 28ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳಿರುತ್ತವೆ. ಏ. 1 ರಿಂದ 12 ರವರೆಗೆ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆಯುತ್ತವೆ.
ರಾಜ್ಯದ ಹಾಲಿ ವಿಧಾನಸಭೆಯ ಅವಧಿ ಮೇ 30ಕ್ಕೆ ಮುಗಿಯಲಿದೆ. ಹಾಗಾಗಿ, ನಿಗದಿತ ಅವಧಿ ಅಂದರೆ ಏಪ್ರಿಲ್ ನಲ್ಲಿ ಚುನಾವಣೆ ನಡೆಸಬೇಕಿದೆ. ಆದರೆ ಏಪ್ರಿಲ್ ನಲ್ಲಿ ಪರೀಕ್ಷೆಗಳು/ಮೌಲ್ಯಮಾಪನ/ಬೇಸಿಗೆ ಇರುವುದರಿಂದ ಅವಧಿಗೆ ಮುನ್ನ ಫೆಬ್ರವರಿಯಲ್ಲೇ ಚುನಾವಣೆ ನಡೆಯುವ ಸಾಧ್ಯತೆಯಿದೆ.
ಇದರಿಂದ ಡಿ. 5ರಿಂದ 13ರವರೆಗೆ ಬೆಳಗಾವಿಯಲ್ಲಿ ವಿಧಾನಸಭೆ ಅಧಿವೇಶನ ನಿಗದಿಯಾಗಿದೆ. ಅದು ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ.












Click it and Unblock the Notifications